ಶಿಗ್ಗಾವ್

ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಸಹಕಾರ ಸಂಘಗಳ ಪಾತ್ರ ಮಹತ್ವ : ಮಂಜುಳಾ ಸಜ್ಜನ

ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಸಹಕಾರ ಸಂಘಗಳ ಪಾತ್ರ ಮಹತ್ವ : ಮಂಜುಳಾ ಸಜ್ಜನ
ಶಿಗ್ಗಾವಿ 25: ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಇಂತಹ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದ್ದು, ಸಮಾಜಗಳ ಸವಾಂರ್ಗೀಣ ಅಭಿವೃದ್ಧಿಗಾಗಿ ಸಣ್ಣ ಮಟ್ಟದಲ್ಲಿರುವ ಸಹಕಾರಿ ರಂಗವನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಸ.ಸಂ.ಸ.ನಿ ಸವಣೂರಿನ ಅದೀಕ್ಷಕರಾದ ಮಂಜುಳಾ ಸಜ್ಜನ ಹೇಳಿದರು.
ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ಕ್ರೇಡಿಟ್ ಕೋಆಫ್ ಸೊಸೈಟಿ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡ ಸೊಸೈಟಿಯ 5ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಣ್ಣ ಹಾಗೂ ಅತಿ ಸಣ್ಣ ವ್ಯಾಪಾರಸ್ಥರು ಹಾಗೂ ಮಧ್ಯಮ ವರ್ಗದವರು ತಮ್ಮ ಆರ್ಥಿಕ ಆಗುಹೋಗುಗಳಿಗೆ ಹೆಚ್ಚು ಬಡ್ಡಿ ದರಕ್ಕೆ ಸಾಲವನ್ನು ಪಡೆದು, ಸಾಲ ಹಾಗೂ ಬಡ್ಡಿಯನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ತಮ್ಮ ವ್ಯಾಪಾರ ವಹಿವಾಟನ್ನು ಬಂದ ಮಾಡುವ ಸಂದರ್ಭಗಳಿವೆ, ಅಂತಹ ಸಂದರ್ಭದಲ್ಲಿ ಸಹಕಾರ ಸಂಘಗಳು ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಹಾಗೂ ಸರಳವಾಗಿ ಸಾಲ ಮರುಪಾವತಿ ಮಾಡುವ ವ್ಯವಸ್ಥೆಯನ್ನು ಮಾಡಿರುವದು ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ವರದಾನವಾಗಿ ಪರಿಣಮಿಸಿದೆ ಎಂದರು.  
ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಗಂಗಣ್ಣ ಸಾತಣ್ಣವರ ಮಾತನಾಡಿ, ಸಹಕಾರಿ ಸಂಘಗಳು ಸಮರ​‍್ಕವಾಗಿ ಕಾರ್ಯನಿರ್ವಹಿಸಲು ಸಹಕಾರಿ ಸದಸ್ಯರ ಪಾತ್ರವೂ ಸಹ ಅತಿ ಮುಖ್ಯವಾಗಿದ್ದು, ಸಕಾಲಕ್ಕೆ ಸಾಲವನ್ನು ಮರುಪಾವತಿ ಮಾಡಿ ಸಹಕಾರಿ ಸಂಘಗಳ ಬೆಳವಣಿಗೆಗೆ ಕಾಳಜಿವಹಿಸುವ ಅಗತ್ಯವಿದೆ ಕಳೆದ 5 ವರ್ಷದಲ್ಲಿ ಹಡಪದ ಅಪ್ಪಣ್ಣ ಸೊಸೈಟಿಯು ಉತ್ತಮ ಪ್ರಗತಿ ಸಾಧಿಸುತ್ತಿದೆ ಇದಕ್ಕೆ ಎಲ್ಲರ ಸಹಕಾರ ಅವಶ್ಯವಾಗಿದೆ ಇದಕ್ಕೆ ನನ್ನ ವಯಕ್ತಿಕ ಸಲಹೆ ಸೂಚನೆಯ ಜೊತೆಗೆ ಸಂಪೂರ್ಣ ಸಹಕಾರ ನೀಡುವ ಬರವಸೆ ನೀಡಿದರು.  
ಸ್ಥಳೀಯ ರೇಣುಕಾಚಾರ್ಯ ಸೊಸೈಟಿಯ ನಿರ್ದೇಶಕ ಭರಮಜ್ಜ ನವಲಗುಂದ ಮಾತನಾಡಿದರು, ಸಭೆಯಲ್ಲಿ ಸೊಸೈಟಿಯ ವ್ಯವಸ್ಥಾಪಕ ಆನಂದಕುಮಾರ ಪಾಟೀಲ ವಾರ್ಷಿಕ ವರದಿ ವಾಚನ ಮಾಡಿದರು.
ಸೊಸೈಟಿಯ ನೂತನ ಅದ್ಯಕ್ಷ ಮಹಲಿಂಗಪ್ಪ ಹಡಪದ, ಉಪಾದ್ಯಕ್ಷ ವಿಶ್ವನಾಥ ಬಂಡಿವಡ್ಡರ, ನಿಕಟಪೂರ್ವ ಅದ್ಯಕ್ಷ ಮುತ್ತುರಾಜ್ ಕ್ಷೌರದ, ಸಂಸ್ಥಾಪಕ ಅದ್ಯಕ್ಷ ಶಿವಕುಮಾರ ಮಡ್ಲಿಕರ, ನಿರ್ದೇಶಕರಾದ ಬಸವರಾಜ ಜಂಗಳಿ, ಸಿದ್ದಪ್ಪ ಗಂಜೀಗಟ್ಟಿ, ಮಲ್ಲಿಕಾರ್ಜುನ ಹಡಪದ, ಈರಣ್ಣ ಯಲಿಗಾರ, ಶಿವರಾಜ ಕ್ಷೌರದ, ರವಿ ಹಡಪದ, ಉಳಿದ ನಿರ್ದೇಶಕರು ಹಾಗೂ ಸಿಬ್ಬಂದಿಗಳಾದ ಪ್ರೇಮಾ ನಾವಿ, ಮಂಜುನಾಥ ಓಣಿಮನಿ, ಚೇತನ ಕೊರವರ ಹಾಗೂ ಸದಸ್ಯರು ಇದ್ದರು. 

ಸುದ್ದಿ ಓದಿ