ರಾಣೆಬೆನ್ನೂರ

7ನೇ ವೇತನ ಆಯೋಗ ವರದಿ ಶೀಘ್ರ ಜಾರಿಗೊಳಿಸಿ: ದ್ಯಾಮಣ್ಣನವರ

7ನೇ ವೇತನ ಆಯೋಗ ವರದಿ ಶೀಘ್ರ ಜಾರಿಗೊಳಿಸಿ: ದ್ಯಾಮಣ್ಣನವರ

ರಾಣೇಬೆನ್ನೂರು ಜು 14: ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದಿಂದ ಶೀಘ್ರವಾಗಿ ವರದಿಯನ್ನು ಪಡೆದು ಅದನ್ನು ಜಾರಿ ಮಾಡಬೇಕು. ನೌಕರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಹೊಸ ಪಿಂಚಣಿಯ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ತಾಲೂಕು ನೌಕರರ ಸಂಘದ ಅಧ್ಯಕ್ಷ ಎಂ. ಡಿ ಹೇಳಿದರು. 

ನಗರದ ತಾಲೂಕ ಆಡಳಿತ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನೌಕರರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಡೇರಿಸಬೇಕು. ಸರ್ಕಾರಿ ನೌಕರರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸರ್ಕಾರ ನೀಡಬೇಕು. ಶೀಘ್ರವೇ ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ ಎಂದರು.ಸಂಘದ ರಾಜ್ಯ ಪರಿಷತ್ ಸದಸ್ಯರಾದ ಅರುಣ್ ಚಂದನ್, ಖಜಾಂಚಿಗಳಾದ ಆರಿ​‍್ಡ ಹೊಂಬರಡಿ. ಕಾರ್ಯದರ್ಶಿಗಳಾದ ಸುಧೀಂದ್ರ ಎಸ್, ಕೋಟಿ ಸರ್, ರಮೇಶ್, ರುದ್ರೇಶ್, ನಾಗರಾಜ್, ಮೇಗಳಮನಿ, ಬಣಕಾರ್, ನಾಗರಾಜ್ ಗಂಗಣ್ಣವರ, ಸದಸ್ಯರುಗಳಾದ ಭೂತೆ, ನಾಗರಾಜ್ ಮತ್ತೂರ್, ಎ. ಕೆ ನಾಗರಾಜ್, ಚಿರಂಜೀವಿ, ಬೆಣ್ಣಿ, ಮಾಲತೇಶ್ ಛಲವಾದಿ, ರಮೇಶ್ ಅಳಲಗೇರಿ, ಪಾಟೀಲ, ಹಾಗೂ ಷಡಕ್ಷರಿಮಠ, ಜಿ. ಎಲ್ ಪದಕಿ, ಎಸ್‌.ಡಿ ಕುರುಬರ, ಎನ್‌. ಎಚ್ ದೇವಾಂಗದ್ ಇನ್ನೂ ಮುಂತಾದ ನೌಕರರು ಭಾಗವಹಿಸಿದ್ದರು. 

ಸಂಘದ ಪ್ರಮುಖ ಬೇಡಿಕೆಗಳು: ರಾಜ್ಯ 7 ನೇ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು ರಾಜ್ಯ ಸರಕಾರಿ ನೌಕರರ ವೇತನ ಭತ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆದೇಶ ಹೊರಡಿಸುವುದು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವುದು, ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆ ಎ ಎಸ್ ಎಸ್) ಅನುಷ್ಠಾನಗೊಳಿಸುವುದು. 


ಸುದ್ದಿ ಓದಿ