ಕೊರೊನಾ ಬಾರದಂತೆ ಇಮ್ಯೂನಿಟಿ ಬೂಸ್ಟರ ನೀರು ವಿತರಣೆ
ಕಾಗವಾಡ 09: ಕೊರೊನಾ ಮಹಾಮಾರಿ ಹಬ್ಬಲಾರದಂತೆ ನೋಡಿಕೊಳ್ಳಲು ಕೊಲ್ಹಾಪುರದ ಕನ್ಹೇರಿ ಮಠದ ಶ್ರೀಗಳಾದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ತಯಾರಿಸಿದ್ದ ಕೊರೊನಾ ಇಮ್ಯೂನಿಟಿ ಬೂಸ್ಟರ ನೀರನ್ನು ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ಕಾಗವಾಡ ತಾಲ್ಲೂಕಿನ ಸಿದ್ದೇವಾಡಿ ಗ್ರಾಮದಲ್ಲಿ ವಿತರಿಸಲಿದ್ದೇವೆ. ಇದರ ಲಾಭ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಗ್ರಾಪಂ ಅಧ್ಯಕ್ಷೆ ಗಂಗವ್ವಾ ಶಿವರಾಮ ಕಾಳೆಲಿ ಕರೆ ನೀಡಿದ್ದಾರೆ. ಶುಕ್ರವಾರ ದಿ. 11 ರಂದು ಸಿದ್ದೇವಾಡಿ ಗ್ರಾಮದ ಹನುಮಾನ ಮಂದಿರ ಸಭಾ ಭವನದಲ್ಲಿ ಕರೋನಾ ಇಮ್ಯೂನಿಟಿ ಬೂಸ್ಟರ ನೀರನ್ನು ವಿತರಿಸಲಾಗುತ್ತಿದ್ದು, ಇದರ ಲಾಭ ತೆಗೆದುಕೊಳ್ಳಬೇಕೆಂದು ಹೇಳಿ, ಹೆಚ್ಚಿನ ಮಾಹಿತಿಗಾಗಿ ಗ್ರಾಪಂ ಅಧ್ಯಕ್ಷೆ ಗಂಗವ್ವಾ ಶಿವರಾಮ ಕಾಳೆಲಿ ಇವರ ಮೊ. ನಂ. 9448025434 ಗೆ ಸಂಪಕರ್ಿಸಿರಿ ಎಂದು ಆಹ್ವಾನಿಸಿದ್ದಾರೆ