ವಿರಾಟ ಹಿಂದೂ ಮಹಾಗಣಪತಿ ಮೂರ್ತಿ ವಿಸರ್ಜನೆ
ರಾಣಿಬೆನ್ನೂರ 04: ವಿರಾಟ್ ಹಿಂದೂ ಮಹಾಸಭಾ ಸಮಿತಿಯ ವತಿಯಿಂದ ಇಲ್ಲಿನ ಅಶೋಕ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ವಿರಾಟ ಹಿಂದೂ ಮಹಾಗಣಪತಿ ಮೂರ್ತಿಯನ್ನು ಸಹಸ್ರಾರು ಭಕ್ತರ ಮತ್ತು ಅಭಿಮಾನಿಗಳ ಹಾಗೂ ಜನಸಾಗರದ ಮಧ್ಯ ಸೋಮವಾರ ನಗರದಲ್ಲಿ ಶೋಭಾಯಾತ್ರೆಯ ಮೂಲಕ ಕೋಡಿಯಾಲ ಹೊಸಪೇಟೆ ಬಳಿ ತುಂಗಭದ್ರ ನದಿಯಲ್ಲಿ ವಿಸರ್ಜಿಸಲಾಯಿತು.
ಮಹಿಳೆ ಹಾಗೂ ಪುರುಷರಿಗಾಗಿ ಪ್ರತ್ಯೇಕವಾಗಿ ಮಾಡಲಾಗಿದ್ದ ಬೃಹತ್ ಡಿಜೆಗೆ ಯುವಕ ಮತ್ತು ಯುವತಿಯರು ಕುಣಿದು ಕುಪ್ಪಳಿಸಿದರು. ತಾವೇನು ಕಡಿಮೆ ಇಲ್ಲ ಎನ್ನುವಂತೆ ಶಾಸಕ ಪ್ರಕಾಶ ಕೋಳಿವಾಡ ಮತ್ತು ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ಸಂಗಡಿಗರೊಂದಿಗೆ ಡಿಜೆ ಸೌಂಡಗೆ ಹೆಜ್ಜೆ ಹಾಕಿದ್ದು ಅಭಿಮಾನಿಗಳಿಗೆ ಸ್ಪೂರ್ತಿ ನೀಡಿತು. ಜೊತೆಗೆ ಮಹಿಳೆಯರೂ ಸಹ ಜೋರಾಗಿಯೇ ನೃತ್ಯ ಮಾಡುವ ಮೂಲಕ ಶೋಭಾಯಾತ್ರೆಗೆ ಮೆರಗು ತಂದರು.