ರಾಣೇಬೆನ್ನೂರು ಕಾ ರಾಜಾ ಗಣೇಶ್ ವಿಸರ್ಜನೆ, 15ರಂದು ಉತ್ತರದಲ್ಲಿ ಅಯೋಧ್ಯ ನಿರ್ಮಾಣ: ದಕ್ಷಿಣದಲ್ಲಿ ದರ್ಶನ
ರಾಣೇಬೆನ್ನೂರು 9: ಉತ್ತರ ಭಾರತದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ದರ್ಶನವಾದರೇ, ದಕ್ಷಿಣದಲ್ಲಿ ಅಯೋಧ್ಯ ಮಾದರಿಯ ಮಂದಿರದ ಸಾಕ್ಷಾತ್ ದರ್ಶನ ಕಂಡ ಲಕ್ಷಾಂತರ ಜನತೆ ಪುಣ್ಯ ಶಾಲಿಗಳಾಗಿದ್ದಾರೆ ಎಂದು ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಬುರುಡಿಕಟ್ಟಿ ಹೇಳಿದರು. ಅವರು ಸೋಮವಾರ ಸಂಜೆ ರಾಣೆಬೆನ್ನೂರು ಕಾ ರಾಜಾ ಗಣೇಶೋತ್ಸವ ಪ್ರತಿಷ್ಠಾಪನಾ ಮಂದಿರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಸಂಸ್ಥೆಯು ಯಾವುದೇ ಜಾತಿ ಮತ ಭೇದ ಭಾವ ಎಣಿಸದೆ, ಪಕ್ಷಾತೀತ ಮತ್ತು ಜಾತ್ಯಾತೀತ ನಿಲುವಿನಲ್ಲಿ 15 ವರ್ಷಗಳ ಹಿಂದೆ ಸ್ಥಾಪನೆಗೊಂಡಿದೆ. ಹೊಸ ಹೊಸ ಪರಿಕಲ್ಪನೆಗಳೊಂದಿಗೆ ಧರ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧರ್ಮ ಜಾಗೃತಿಗೊಳಿಸುವ ನಿಟ್ಟಿನಲ್ಲಿ ತನ್ನ ಸೇವೆ ಸಲ್ಲಿಸುತ್ತಲಿದೆ ಎಂದರು. ಸಂಸ್ಥೆಯ ಪದಾಧಿಕಾರಿಗಳು ತಮ್ಮ ದೂರ ದೃಷ್ಟಿಯೊಂದಿಗೆ, ಉತ್ತರ ಭಾರತದಲ್ಲಿರುವ ಇತಿಹಾಸದ ಅಯೋಧ್ಯಾ ಶ್ರೀ ರಾಮನ ವಾಸ್ತವಿಕ ನೆಲಗಟ್ಟಿನ, ಅಯೋಧ್ಯ ಮಂದಿರವನ್ನು ನಾಡಿನ ಜನತೆಗೆ ದರ್ಶನ ದೊರಕಿಸುವ ಪ್ರಯತ್ನ ಸಂಪೂರ್ಣ ಫಲಪ್ರದವಾಗಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.
ಪ್ರತಿಷ್ಠಾಪನೆಯ ಆರಂಭದಿಂದಲೂ ನಿತ್ಯವೂ 15 ರಿಂದ 20 ಸಾವಿರ ಜನರು ಅಯೋಧ್ಯ ರಾಮಮಂದಿರದ ರೂಪಕವನ್ನು ವೀಕ್ಷಿಸಿದ್ದಾರೆ. ಇಲ್ಲಿವರೆಗೂ 2 ಲಕ್ಷಕ್ಕೂ ಹೆಚ್ಚು ಭಕ್ತರು ಸರದಿ ಸಾಲಿನಲ್ಲಿ ನಿಂತು ಅಲ್ಲಿನ ನೈಜ ಚಿತ್ರಣವನ್ನು ಕಣ್ತುಂಬಿಕೊಂಡಿದ್ದಾರೆ. ಭವಿಷ್ಯದ ವರ್ಷಗಳಲ್ಲಿ ಇನ್ನು ಅನೇಕ ಯೋಜನೆಗಳನ್ನು ಹೊಸ ಹೊಸ ಕಲ್ಪನೆಗಳೊಂದಿಗೆ ಭಾರತದ ಸಮಗ್ರ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಚಿತ್ರಕಲೆ ಐತಿಹಾಸಿಕ ಪರಂಪರೆಯ ತಾಣಗಳನ್ನು ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದರು. ಅಕ್ಟೋಬರ್ 11ರಂದು ಈ ನಿಮಿತ್ತ ಸ್ವಯಂ ಪ್ರೇರಣ ರಕ್ತದಾನ ಶಿಬಿರ, ಮಧ್ಯಾಹ್ನ ಸಾರ್ವಜನಿಕವಾಗಿ ಮಹಾ ಅನ್ನಸಂತರೆ್ಣ. ಮತ್ತು ಸಂಜೆ ಹಿಂದು ಧರ್ಮ ಜಾಗೃತಿ ಸಭೆ ಆಯೋಜಿಸಲಾಗಿದೆ. ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ, ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಶಯ ಭಾಷಣ ಮಾಡುವರು. ವಿಶೇಷವಾಗಿ ಮೀಡಿಯಾ ಮಾಸ್ಟರ್ ಸಂಪಾದಕ ಎಂ. ಎಸ್.ರಾಘವೇಂದ್ರ ಪಾಲ್ಗೊಳ್ಳುವರು. ಸಂಜೆ 7 ಗಂಟೆಗೆ, ಗಣೇಶ ಅಲಂಕಾರಿಕ ವಸ್ತುಗಳು ಹರಾಜು ಮಾಡಲಾಗುವುದು. ಅಲ್ಲದೆ ನಾಡಿನ ಹೆಸರಾಂತ ವೈವಿಧ್ಯಮಯ ಕಲಾವಿದರಿಂದ ಹಾಸ್ಸ್ಯ ನೃತ್ಯ ಮತ್ತು ಸಂಗೀತ ಸಂಜೆ ಕಾರ್ಯಕ್ರಮಗಳು ಜರುಗಲಿವೆ. ಎಂದರು.
ಸಾರ್ವಜನಿಕರು ಅಯೋಧ್ಯ ಮಾದರಿ ರೂಪಕವನ್ನು ತಿಂಗಳ ಕಾಲ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ ಆದರೆ, ಸಾರ್ವಜನಿಕರ ಹಿತದೃಷ್ಟಿ ಹಾಗೂ ಕಾನೂನು ಪರಿಪಾಲನೆ ಕಾರಣ, ಮುಂದುವರಿಸಲು ಸಮಿತಿಗೆ ಕಷ್ಟ ಸಾಧ್ಯ ಆದರೂ ವೀಕ್ಷಣೆ ಮಾಡದೇ ಇರುವವರ ಅನುಕೂಲಕ್ಕಾಗಿ ಅಕ್ಟೋಬರ್ 14.ರಾತ್ರಿ 12 ಗಂಟೆಯವರೆಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಪ್ರಕಾಶ್ ಅವರು ತಮ್ಮ ವಿನಮ್ರ ಮನವಿ ಮಾಡಿದರು. ದಿ. 15.10.23 ರಂದು ಮಧ್ಯಾಹ್ನ 12 ಗಂಟೆಗೆ ಗಣೇಶೋತ್ಸವ ವಿಸರ್ಜನೆಯ ಪ್ರಯುಕ್ತ ಬೃಹತ್ ಶೋಭಾ ಯಾತ್ರೆ. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಕೇಂದ್ರ ಮಾಜಿ ಸಚಿವ ಸಿ.ಟಿ ರವಿ ಹಾಗೂ ಅನೇಕ ಗಣ್ಯರು ಅಂದು ಶೋಭಾ ಯಾತ್ರೆ ಉದ್ಘಾಟಿಸುವರು. ಪುರುಷ, ಮಹಿಳೆಯರು ಹಾಗೂ ಮಕ್ಕಳಿಗಾಗಿ ಪ್ರತ್ಯೇಕ ಅತ್ಯಾಧುನಿಕ ತಂತ್ರಜ್ಞಾನದ ಡಿಜೆ ಸೌಂಡ್ ಸಿಸ್ಟಮ್ ಅಳವಡಿಸಲಾಗಿದೆ. ಇದರಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು. ಮಾಧ್ಯಮಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ರಾಘವೇಂದ್ರ ಚಿನ್ನಿಕಟ್ಟಿ, ನಾಗರಾಜ್ ಅಡ್ಮನಿ, ಹನುಮಂತಪ್ಪ ಹೆದ್ದೇರಿ, ಅಜಯ್ ಮಠದ, ನಾಗರಾಜ ಹೆದ್ದೇರಿ ಸೇರಿದಂತೆ ಸಮಿತಿಯ ಮತ್ತಿತರ ಸದಸ್ಯರು, ಗಣ್ಯರು, ಕಲಾವಿದರು ಉಪಸ್ಥಿತರಿದ್ದರು.