ರಾಣೆಬೆನ್ನೂರ

ಗಣೇಶ ಮೂರ್ತಿಯ ವಿಸರ್ಜನೆ ನಿಮಿತ್ಯ ಬೃಹತ್ ಶೋಭಾಯಾತ್ರೆ

ಗಣೇಶ ಮೂರ್ತಿಯ ವಿಸರ್ಜನೆ ನಿಮಿತ್ಯ ಬೃಹತ್ ಶೋಭಾಯಾತ್ರೆ

ರಾಣಿಬೆನ್ನೂರ 16:  ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ 15ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಅಯೋಧ್ಯೆಯ ಶ್ರೀರಾಮಮಂದಿರದ ಮಾದರಿಯಲ್ಲಿ  ಪ್ರತಿಷ್ಠಾಪಿಸಲಾಗಿದ್ದ ರಾಣೇಬೆನ್ನೂರು ಕಾ ರಾಜಾ ಗಣೇಶ ಮೂರ್ತಿಯ ವಿಸರ್ಜನೆ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಬೃಹತ್ ಶೋಭಾಯಾತ್ರೆಯು ಪೊಲೀಸ್ ಸರಾ​‍್ಗವಲು ಹಾಗೂ ಸಹಸ್ರಾರು ಜನ ಸಾಗರದ ಮಧ್ಯೆ ಅದ್ದೂರಿಯಾಗಿ ಸಂಭ್ರಮದಿಂದ ಜರುಗಿತು. 

ರವಿವಾರ ನಗರಸಭಾ ಕ್ರೀಡಾಂಗಣದಿಂದ ಹೊರಟ ಶೋಭಾಯಾತ್ರೆಗೆ ಮಿಡಿಯಾ ಮಾಸ್ಟರ್ ರಾಘವೇಂದ್ರ ವಿದ್ಯುಕ್ತವಾಗಿ ಚಾಲನೆ ನೀಡಿದರು. ಸ್ವಾಮಿ ವಿವೇಕಾನಂದ, ಬುದ್ಧ, ಮಹಾವೀರ, ಮಹರ್ಷಿ ವಾಲ್ಮಿಕಿ, ಆಂಜನೇಯ ಸ್ವಾಮಿ, ಸಂಗೋಳ್ಳಿ ರಾಯಣ್ಣ, ಕಿತ್ತೂರರಾಣಿ ಚೆನ್ನಮ್ಮ ಸೇರಿದಂತೆ ಮತ್ತಿತರ ಮಹನೀಯರ ಸ್ಥಬ್ತ ಚಿತ್ರಗಳು ಜನಾಕರ್ಷಿಸಿದವು.  

ಬೃಹತ್ ಪ್ರಮಾಣದ 2 ಡಿಜೆಗಳೊಂದಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಕೋಲಾಟ, ಗೊಂಬೆ ಕುಣಿತ, ಸಾಮಾಳ, ಡೊಳ್ಳು, ಭಜನೆ, ಜಾಂಜ್ ಸೇರಿದಂತೆ ವೈವಿಧ್ಯಮಯ ವಾಧ್ಯಮೇಳಗಳು, ಕಲಾ ತಂಡಗಳು ಶೋಭಾಯಾತ್ರೆಗೆ ಮೆರಗು ತಂದವು. ಹೊನ್ನಾಳಿಯ ಮಾಜಿ ಶಾಸಕ ರೇಣುಕಾಚಾರ್ಯ, ರಾಘವೇಂದ್ರ ಚಿನ್ನಿಕಟ್ಟಿ, ಹನುಮಂತಪ್ಪ ಹೆದ್ದೇರಿ, ಪ್ರಕಾಶ ಬುರಡಿಕಟ್ಟಿ, ಸಿದ್ದಣ್ಣ ಬಾಗಲವರ, ವೀರೇಶ ಹೆದ್ದೇರಿ, ನಾಗರಾಜ ಅಡ್ಮನಿ, ಹುಚ್ಚಪ್ಪ ಮೇಡ್ಲೇರಿ ಸೇರಿದಂತೆ ಸಹಸ್ರಾರು ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.  

ಶೋಭಾಯಾತ್ರೆಯು ಕ್ರೀಡಾಂಗಣದಿಂದ ಪ್ರಾರಂಭವಾಗಿ ಕುರುಬಗೇರಿ ಕ್ರಾಸ್, ದರ್ಗಾ ಸರ್ಕಲ್, ಎಂಜಿ ರಸ್ತೆ, ಚಿಕ್ಕಿಮಿಕ್ಕಿ ದೇವಸ್ಥಾನ ಸರ್ಕಲ್, ದೊಡ್ಡಪೇಟೆ ರಸ್ತೆ, ಬಸವೇಶ್ವರ ದೇವಸ್ಥಾನ  ಮಾರ್ಗ ಕುಂಬಾರ ಓಣಿ, ರಂಗನಾಥ ನಗರ, ಸಂಗಮ್ ಸರ್ಕಲ್, ಅಂಚೆ ವೃತ್ತ, ಬಸ್ ಸ್ಟ್ಯಾಂಡ್ ರಸ್ತೆ ಮೂಲಕ ತೆರಳಿ ಪಿಬಿ ರಸ್ತೆಯ ಮುಖಾಂತರ ತಾಲೂಕಿನ ಕುಮಾರಪಟ್ಟಣದ ತುಂಗಾಭದ್ರ ನದಿಯಲ್ಲಿ ರಾಣೇಬೆನ್ನೂರು ಕಾ ರಾಜಾ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಪೊಲೀಸರನ್ನು ಬೃಹತ್ ಶೋಭಾಯಾತ್ರೆಗೆ ಬಂದೋ ಬಸ್ತ್‌ ನಿಯೋಜಿಸಿದ್ದರು. 


ಸುದ್ದಿ ಓದಿ