ಇಂಡಿ

ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ: ಆರೋಪಿಯ ಬಂಧನ

ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ: ಆರೋಪಿಯ ಬಂಧನ

ಇಂಡಿ: ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು ದಾಳಿ ವೇಳೆಯಲ್ಲಿ 20 ಲೀಟರ್ ಕಳ್ಳಭಟ್ಟಿಯನ್ನು ಮತ್ತು ಆರೋಪಿತನ್ನನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಮಂಗಳವಾರರಂದು  ಸಾಯಂಕಾಲ ಇಂಡಿ ವಲಯ ವ್ಯಾಪ್ತಿಯ ಚಡಚಣ ತಾಲೂಕಿನ ದಸೂರ ಗ್ರಾಮದ ಬೋಲೋಬಾ ನಾರಾಯಣ ಜಗತಾಪೆ ಈತನು ಅಕ್ರಮವಾಗಿ ಕಳ್ಳಭಟ್ಟಿ ಸರಾಯಿಯನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ತಾಬಾ ಹೊಂದಿರುವ ಸಮಯದಲ್ಲಿ ಅಬಕಾರಿ ದಾಳಿ ನಡೆಸಲಾಗಿದೆ. 

20 ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ಜಪ್ತುಪಡಿಸಿಕೊಂಡು ಬೋಲೋಬಾ ನಾರಾಯಣ ಜಗತಾಪೆ ವಯಾ-68 ವರ್ಷ, ಜಾತಿ:ಹಿಂದೂ ಮರಾಠ ಸಾ ದಸೂರ ತಾ ಚಡಚಣ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಅಬಕಾರಿ ನೀರೀಕ್ಷಕ ಎಂ.ಎಚ್‌. ಪಡಸಲಗಿ ತಿಳಿಸಿದ್ದಾರೆ. 

ಅಬಕಾರಿ ಉಪನೀರೀಕ್ಷಕಿ ಪರೀನಾ ಖಾದರಸಾಬ ವನಕ್ಯಾಳರವರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ದಾಳಿ ವೇಳೆಯಲ್ಲಿ ಸಿಬ್ಬಂದಿಗಳಾದ, ಅಶೋಕ ಗೋಣಸಗಿ, ಶಿವಶಂಕರ ಗೋಟ್ಯಾಳ, ಹಾಗೂ ಮಂಜುನಾಥ ಬಡಿಗೇರ ಪಾಲ್ಗೊಂಡಿದ್ದರು.   

. 


ಸುದ್ದಿ ಓದಿ