ಅಕ್ರಮ ಮರಳು ಸಂಗ್ರಹ: ವಶಕ್ಕೆ
ರಾಣೆಬೆನ್ನೂರು 10: ಅಕ್ರಮವಾಗಿ ಸಂಗ್ರಹಿಸಲಾಗಿದ್ದ, ಅಪಾರ ಪ್ರಮಾಣದ ಮರಳು ಪತ್ತೆಹಚ್ಚಿದ ಕಂದಾಯ ಇಲಾಖೆ 124600 ರೂಗಳ ಮೌಲ್ಯದ 178 ಟನ್ ಮರಳು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೋಣನತಂಬಿಗಿ ಗ್ರಾಮದ ನದಿಪಾತ್ರದಲ್ಲಿ ಅಪಾರ ಪ್ರಮಾಣದ ಮೌಲ್ಯದ ಮರಳನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು ಎಂದು ಕಂದಾಯ ಅಧಿಕಾರಿಗಳು ಹೇಳಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ರಾಣೆಬೆನ್ನೂರು ತಹಸಿಲ್ದಾರ್ ಶಂಕರ್ ಜಿ ಎಸ್. ಕಂದಾಯ ನೀರೀಕ್ಷಕರಾದ ವಾಗೀಶ ಮಳಿಮಠ, ಗ್ರಾಮ ಲೆಕ್ಕಾಧಿಕಾರಿ ಅಕ್ಷತಾ, ಗಣಿ ಮತ್ತು ಭೂ ವಿಜ್ಞಾನ್ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.