ಪ್ರಕೃತಿಯನ್ನು ಸಂರಕ್ಷಣೆ ಮಾಡಿದರೆ ಪ್ರಕೃತಿಯು ನಮ್ಮನ್ನು ಸಂರಕ್ಷಿಸುತ್ತದೆ: ಗೋಣಿಮಠ
ರಾಣಿಬೆನ್ನೂರ 06: ಪ್ರಕೃತಿಯನ್ನು ಸಂರಕ್ಷಣೆ ಮಾಡಿದರೆ ಪ್ರಕೃತಿಯು ನಮ್ಮನ್ನು ಸಂರಕ್ಷಿಸುತ್ತದೆ ಎಂದು ಗ್ರಾಪಂ ಅಧ್ಯಕ್ಷರಾದ ಗಂಗಮ್ಮ ಕುಬೇರ್ಪ ಗೋಣಿಮಠ ಹೇಳಿದರು.
ತಾಲ್ಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಇಕೋ ಕ್ಲಬ್ ವತಿಯಿಂದ ಆಯೋಜಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರು ಸಾಲುಮರದ ತಿಮ್ಮಕ್ಕನವರನ್ನು ಆದರ್ಶವಾಗಿಟ್ಟುಕೊಂಡು ಪ್ರತಿ ವಿದ್ಯಾರ್ಥಿಗಳು ಒಂದೊಂದು ಮರವನ್ನು ನೆಟ್ಟು ಪೋಷಿಸಬೇಕು ಎಂದರು.
ಭೂಗೋಳ ಶಾಸ್ತ್ರ ಉಪನ್ಯಾಸಕ ಎಚ್. ಶಿವಾನಂದ, ಶಿಕ್ಷಕ ರವಿ ಕೆ.ಎಸ್,
ಗ್ರಾಪಂ ಉಪಾಧ್ಯಕ್ಷ ಬಸವಣ್ಣೆಪ್ಪ ನೋಟದ, ಶಿಕ್ಷಕರಾದ ಶಿವಮೂರ್ತಯ್ಯ ಎಚ್.ಎಂ, ಸುನಿತಾ ಕುಡುಪಲಿ, ಮಲ್ಲೇಶಿ ಹೂರಗಿ, ಚಂದ್ರಶೇಖರ ಎಚ್.ಎಂ., ಪ್ರಕಾಶ ಸಿ., ಜೈಪ್ರಕಾಶ್, ಸಂತೋಷ್ ಅಂಗಡಿ, ಪೂರ್ಣಿಮಾ ಮಾಕನೂರು, ಕವಿತಾ, ಮಕಾಂದಾರ್, ಪ್ರವೀಣ್‌ಕುಮಾರ್ ಕೆ ಮತ್ತಿತರರು ಇದ್ದರು.