ಕಾಡನ್ನು ರಕ್ಷಿಸದೇ ಹೋದರೆ ಭವಿಷ್ಯದ ಜನಾಂಗದ ಶಾಪಕ್ಕೆ ಗುರಿಯಾಗಬೇಕು: ಬಳಿಗಾರ
ರಾಣೆಬೆನ್ನೂರು 11: ಭಾರತದ ಸಂಪತ್ತು ಅರಣ್ಯ. ಅರಣ್ಯ ರಕ್ಷಣೆ ಮಾಡದೆ ಹೋದರೆ ಭವಿಷ್ಯದಲ್ಲಿ ನೈಸರ್ಗಿಕ ವಿಕೋಪಕ್ಕೆ ಕಾರಣರಾಗ ಬೇಕಾಗುತ್ತದೆ, ಎಂದು ವನಸಿರಿ ಸಂಸ್ಥೆಯ ನಿರ್ದೇಶಕ ಎಸ್. ಡಿ. ಬಳಿ ಗಾರ, ಹೇಳಿದರು. ಅವರು ತಾಲೂಕಿನ ಕಾಕೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಪ್ರಾದೇಶಿಕ ಅರಣ್ಯ ಇಲಾಖೆ, ಗ್ರಾಮ ಪಂಚಾಯತ್, ಗ್ರಾಮ ಅರಣ್ಯ ಸಮಿತಿಯು, ಕಾಕೋಳ ಅರಣ್ಯಪ್ರದೇಶದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಆಯೋಜಿಸಲಾಗಿದ್ದ, ಅರಣ್ಯ ಅಭಿವೃದ್ಧಿ ಕಾಮಗಾರಿ ಮತ್ತು ಚುನಾಯಿತ ಪ್ರತಿನಿಧಿಗಳ ವೀಕ್ಷಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತ ದೇಶವೂ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳು ಪ್ರಕೃತಿ ವಿಕೋಪದಿಂದ ಮತ್ತು ಪ್ರಕೃತಿ ಸಮತೋಲನತೆ ಕೊರತೆಯಿಂದ ಅನೇಕ ಅನಾಹುತಗಳನ್ನು ಅನುಭವಿಸುತ್ತಿದ್ದೇವೆ ಇದಕ್ಕೆಲ್ಲ ಕಾರಣ ಪ್ರಕೃತಿ ಮುನಿಸು ಎಂದರು. ನೈಸರ್ಗಿಕ ವಿಕೋಪಗಳು ತಡೆಯಬೇಕಾದರೆ, ದೇಶದ ಪ್ರತಿಯೊಬ್ಬ ಪ್ರಜೆಯೂ ಮನೆ ಮತ್ತು ಮಗುವಿಗೊಂದು ಮರ ರೀತಿಯಲ್ಲಿ ಶಶಿಗಳನ್ನು ನೆಡಬೇಕಾದ ಅಗತ್ಯವಿದೆ. ಅರಣ್ಯ ಸಂರಕ್ಷಣೆ ಇಂದಿನ ಬಹುಮುಖ್ಯವಾಗಿದೆ ಅದಕ್ಕಾಗಿ ಎಲ್ಲರೂ ಸಾಂಘಿಕವಾಗಿ ಕರ್ತವ್ಯ ಮೆರೆಯಬೇಕು ಎಂದು ಕರೆ ನೀಡಿದರು. ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ, ಸಾವಯವ ಕೃಷಿಕ ಚನ್ನಬಸಪ್ಪಕೊಂಬಳಿ, ಅವರು ಅರಣ್ಯ ಸಂರಕ್ಷಣೆಯಲ್ಲಿ ಗ್ರಾಮೀಣ ನಾಗರಿಕರ ಪಾತ್ರ ಕುರಿತು ಉಪನ್ಯಾಸ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಯಪ್ಪ ಕುದುರಿ ಹಾಳ, ಸದಸ್ಯರು. ಗ್ರಾಮದ ನಾಗರಿಕರನೇಕರು ಉಪಸ್ಥಿತರಿದ್ದರು. ಪಿಡಿಒ ಎನ್.ಎಂ. ಮಾರೇರ, ಅರಣ್ಯ ಇಲಾಖೆಯ ಪವನ್ ಟಕ್ಕೆದ, ಬಿ. ವಿ.ಪಾಟೀಲ್, ನಾಗರಾಜ ಸುಣ್ಣದಕೊಪ್ಪ ಮತ್ತಿತರರು ಪಾಲ್ಗೊಂಡಿದ್ದರು.