ದಾಖಲೆ ಒದಗಿಸಿದರೆ ಮಾಸಾಶನ ಮಂಜೂರಿ: ಕುಲಕರ್ಣಿ
ಗುಳೇದಗುಡ್ಡ 02: ಮಾಸಾಶನ ಪಡೆಯುವ ಫಲಾನುಭವಿಗಳು ತಹಸೀಲ್ದಾರ ಕಚೇರಿಗೆ ಮಾಹಿತಿ ಸರಿಯಾಗಿ ಒದಗಿಸದ ಕಾರಣ ಅವರ ಮಾಸಾಶನ ಸ್ಥಗಿತವಾಗಿವೆ. ಆದಷ್ಟು ಬೇಗ ಮಾಹಿತಿ ಒದಗಿಸಿದರೆ ನಮ್ಮ ಸಿಬ್ಬಂದಿ ಆದಷ್ಟು ಬೇಗನೇ ಸ್ಥಗಿತವಾಗಿರುವ ಮಾಸಾಶನವನ್ನು ಪುನರಾರಂಭಿಸುತ್ತಾರೆಂದು ಇಲ್ಲಿನ ತಹಸೀಲ್ದಾರ ಜಿ.ಎಂ. ಕುಲಕರ್ಣಿ ಭರವಸೆ ನೀಡಿದರು.
ಪಟ್ಟಣದ ಬಿಜೆಪಿ ಮುಖಂಡರು ಸೋಮವಾರ ತಹಸೀಲ್ದಾರ ಕಚೇರಿಗೆ ತೆರಳಿ ಅವರನ್ನು ಭೇಟಿಯಾಗಿ ಕಳೆದ 8-10 ತಿಂಗಳುಗಳಿಂದ ಬಹಳಷ್ಟು ಜನರಿಗೆ ಮಾಸಾಶನ ಸರಿಯಾಗಿ ಬರುತ್ತಿಲ್ಲ. ಆದಷ್ಟು ಬೇಗ ಅಂಥವರ ಮಾಸಾಶನ ಬಿಡುಗಡೆಗೆ ಮಾಡಬೇಕು. ಕೋವಿಡ್ ಸಂಕಷ್ಟ ಕಾಲದಲ್ಲಿ ನಿರ್ಗತಿಕ, ಬಡ ಜನರಿಗೆ, ವಯೋವೃದ್ಧರಿಗೆ ಮಾಸಾಶನ ಬರದೇ ತೊಂದರೆಯಾಗಿದೆ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ತಹಸೀಲ್ದಾರರಿಗೆ ವಿನಂತಿಸಿಕೊಂಡರು.
70 ರಿಂದ 80 ವಯಸ್ಸಿನ ವಯೋವೃದ್ಧ ಮಾಸಾಶನ ಪಡೆಯುವ ಫಲಾನುಭವಿಗಳು ನಮ್ಮ ಕಚೇರಿಗೆ ಕಾಲಕಾಲಕ್ಕೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಮಾಸಾಶನ ಪಡೆಯುವ ಫಲಾನುಭವಿಗಳ ಆಧಾರ್ಲಿಂಕ್ ಬ್ಯಾಂಕಿನಲ್ಲಿ ಅಥವಾ ಮಾಸಾಶನ ಪಡೆಯುವ ಅಂಚೆ ಕಚೇರಿಯಲ್ಲಿ ಹೊಂದದೇ ಇರುವುದರಿಂದ ತೊಂದರೆಯಾಗಿದೆ. ಆದಷ್ಟು ಬೇಗ ಈ ತಾಂತ್ರಿಕ ದೋುುಷವನ್ನು ಸರಿಪಡಿಸಲು ತಹಸೀಲ್ದಾರ ತಿಳಿಸಿದರು.
ಯಾವ ಫಲಾನುಭವಿಗಳ ಮಾಸಾಶನ ಸ್ಥಗಿತವಾಗಿದೆಯೋ ಅಂಥವರಿಗೆ ಪುನ: ಮಾಸಾಶನ ಪುನರಾರಂಭಿಸಲು ಸಭೆಯಲ್ಲಿ ಬಿಜೆಪಿ ಮುಖಂಡರು ಚರ್ಚಿಸಿದರು. ಬ್ಯಾಂಕ್ ಹಾಗೂ ಅಂಚೆ ಕಚೇರಿಯಿಂದ ಫಲಾನುಭವಿಗಳ ಲಿಸ್ಟ್ ಪಡೆದು ಮಾಸಾಶನ ಸ್ಥಗಿತಗೊಂಡವರ ಮನೆಗೆ ಹೋಗಿ ಕಾರಣಕ್ಕೆ ಸರಿಯಾದ ಮಾಹಿತಿ ಹಾಗೂ ದಾಖಲೆ ಪಡೆದು ತಹಸೀಲ್ದಾರರಿಗೆ ತಲುಪಿಸುವುದಾಗಿ ಮುಖಂಡರು ತಹಸೀಲ್ದಾರರಿಗೆ ಹೇಳಿದರು.
ಮಾಜಿಶಾಸಕ ರಾಜಶೇಖರ ಶೀಲವಂತ, ನಗರ ಘಟಕದ ಅಧ್ಯಕ್ಷ ವಸಂತ ದೊಂಗಡೆ, ರಂಗಪ್ಪ ಶೇಬಿನಕಟ್ಟಿ, ಪ್ರಕಾಶ ಶೇಬಿನಕಟ್ಟಿ, ಕಮಲಕಿಶೋರ ಮಾಲಪಣಿ, ಸಂಪತ್ಕುಮಾರ ರಾಠಿ, ಭಾಗ್ಯಾ ಉದ್ನೂರ, ದೀಪಕ ನೇಮದಿ, ಮಧುಸೂಧನ ರಾಂಧಡ,ರಾಜು ಗೌಡರ, ಮೋಹನ ಪೂಜಾರ, ಸೇರಿದಂತೆ ಇತರರು ಇದ್ದರು.