ಜಮಖಂಡಿ

ಸಂವಿಧಾನ ಬಲಿಷ್ಠವಾಗಬೇಕಾದರೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು: ಡಾ. ಮರಡಿ

ಸಂವಿಧಾನ ಬಲಿಷ್ಠವಾಗಬೇಕಾದರೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು: ಡಾ. ಮರಡಿ

ಜಮಖಂಡಿ 10: ಡಾ, ಬಿ ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಬಲಿಷ್ಠವಾಗಬೇಕಾದರೆ ಪ್ರಜೆಗಳು ನಿರಂತರವಾಗಿ ಜಾಗರೂಕರಾಗಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ಜಿಲ್ಲಾ ವಿಶ್ವವಿದ್ಯಾಲಯ ಹಣಕಾಸು ಅಧಿಕಾರಿ ಡಾ. ಮಲ್ಲಿಕಾರ್ಜುನ ಮರಡಿ ಹೇಳಿದರು. ನಗರದ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ದಲಿತ ಸಾಹಿತ್ಯ ಪರಿಷತ್ತು ಹಾಗೂ ಅಜಿಮ್ ಪ್ರೇಮಜಿ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ಸಂವಿಧಾನ ಅರಿವಿನ ಪಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ದಲಿತ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷ ಈರ​‍್ಪ ಸುತಾರ ಮಾತನಾಡಿ,  ಅಂಬೇಡ್ಕರ್ ಅವರು ಶಿಕ್ಷಿತರಾಗಿ, ಸಂಘಟಿತರಾಗಿ, ಮತ್ತು ಜಾಗೃತರಾಗಿ ಎಂದು ಹೇಳಿದ್ದಾರೆ. ಆದರೆ ನಾವು ಅವರ ಮಾತಿಗೆ ವ್ಯತಿರಿಕ್ತವಾಗಿ ಬದುಕುತ್ತಿದ್ದೇವೆ ಎಂದರು. ಅಜಿಂ ಪ್ರೇಮಜಿ ಫೌಂಡೇಶನ್‌ನ ಪ್ರೀತಿ ಅರಬಳ್ಳಿ ಸಂವಿಧಾನದ ಬಗ್ಗೆ ಅರಿವು ಮೂಡಿಸಿದರು. ವಸತಿ ನಿಲಯದ ಮೇಲ್ವಿಚಾರಕ ಜಗದೇವ ಪಾಸೋಡಿ ಅಧ್ಯಕ್ಷತೆ ವಹಿಸಿದ್ದರು. ಆಕಾಶ ಚಲವಾದಿಯವರು ಸ್ವಾಗತಿಸಿ, ನಿರೂಪಿಸಿದರು. ಮಹೇಶ್ ಕಾಂಬಳೆ ಪ್ರಾರ್ಥಿಸಿದರು. ಆಕಾಶ ಕಾಂಬಳೆ ವಂದಸಿದರು. 


ಸುದ್ದಿ ಓದಿ