ಸೊಲೇ ಗೆಲುವಿನ ಮೊದಲ ಮೆಟ್ಟಿಲು: ರಮೇಶ ಬಲ್ಲಿದ
ಅಥಣಿ 28: ಬದುಕಿನಲ್ಲಿ ಸಾಧನೆ ಮಾಡಬೇಕೆಂದು ಸಾಗುವವರು ಸೊಲು ಗೆಲುವು ಗಮನಿಸದೇ ಸಮಾನವಾಗಿ ಸಾಧನೆ ಪಥದಲ್ಲಿ ಸತತವಾಗಿ ಸಾಗಿದಾಗ ಮಾತ್ರ ಸಾಧನೆ ಸಾಧ್ಯ ಎಂದು ದೇವದುರ್ಗದ ಖ್ಯಾತ ಭಾಷಣಕಾರ ರಮೇಶ್ ಬಲ್ಲಿದ್ ಹೇಳಿದರು.
ಸ್ಥಳೀಯ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ವಿಜನ್ ಕರಿಯರ್ ಅಕಾಡೆಮಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಈಗಿನ ಯುವಕರಿಗೆ ಸಾಧನೆ ಮಾಡಲು ಇಲ್ಲಿ ಸಾಕಷ್ಟು ಅವಕಾಶಗಳಿದ್ದು ಗಡಿ ಭಾಷೆ ಎಲ್ಲವನ್ನು ಮೀರಿ ತಮ್ಮ ಸಾಮರ್ಥ್ಯ ವೃದ್ಧಿಸಿಕೊಂಡು ಮುನ್ನುಗ್ಗಬೇಕಾಗಿದೆ. ನಾವು ನಮ್ಮ ಸಮಯ ಕಳೆಯಲು ನೋಡಬಾರದು ನಮ್ಮ ಸಮಯವನ್ನು ಉಪಯೋಗಿಸಿಕೊಳ್ಳಲು ಕಲಿಯಬೇಕು ಸಮಯವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡರೆ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ನಂತರ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಅಥಣಿ ಪೋಲೀಸ್ ಠಾಣೆ ಸಿ.ಪಿ.ಐ ಶಂಕರಗೌಡ ಬಸನಗೌಡ ಅವರು ಮಾತನಾಡುತ್ತಾ 2019 ರಲ್ಲಿ ಪ್ರವಾಹ ಬಂದಾಗ ನಮ್ಮ ಪೋಲಿಸ್ ಇಲಾಖೆಯವರು ಮಾಡಿದ ಸೇವೆಯ ಪ್ರತೀಕವಾಗಿ ನನಗೆ ಮುಖ್ಯಮಂತ್ರಿ ಪದವಿ ದೊರಕಿದೆ ಹೊರತು ನಾನೋಬ್ಬನೇ ಸಲ್ಲಿಸಿದ ಸೇವೆಯಿಂದಲ್ಲ, ಅಥಣಿ ಶಿವಯೋಗಿಗಳ ಈ ಪುಣ್ಯಭೂಮಿಯಲ್ಲಿ ಮಾಡಿದ ಯಾವ ಶ್ರಮವೂ ವ್ಯರ್ಥವಾಗಲ್ಲ ಎನ್ನುವುದು ಈ ನಾಡಿನ ಪ್ರತೀತಿಯಾಗಿದೆ ಎಂದರು.
ಅನಂತರ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಅವರು ಮಾತನಾಡುತ್ತಾ ಅಥಣಿಯಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಈ ವಿಜನ್ ಕರಿಯರ್ ಶಿಕ್ಷಣ ಸಂಸ್ಥೆಯು ತನ್ನ ಶಿಕ್ಷಣ ಕ್ರಾಂತಿಯ ಮೂಲಕ ಅಥಣಿಯಲ್ಲಿ ಹೊಸ ಹೆಜ್ಜೆಯನ್ನು ಮೂಡಿಸಲಿ ಜನತೆಯ ನಂಬಿಕೆಯನ್ನು ಗಳಿಸಲಿ ಎಂದರು.
ಈ ವೇಳೆ ವಿಜನ್ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಭರತೇಶ ಕೆಂಚನ್ನವರ, ಸದಾಶಿವ ಚಿಕ್ಕಟ್ಟಿ, ರಮೇಶ ಮೋಕಾಶಿ, ಟಿ ಎ ಮೋಗೆರ್, ಬಸವರಾಜ ಯಳ್ಳೂರ, ಕಿರಣ ಮಾಳಿ, ರಾಮಣ್ಣಾ ದೊಡ್ಡನಿಂಗಪ್ಪಗೊಳ ಸೇರಿದಂತೆ ಅನೇಕ ಶಿಕ್ಷಕ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜ್ಯೋತಿ ಪಾಟೀಲ ನಿರೂಪಿಸಿದರು. ಜ್ಯೋತಿ ನಾಗಣ್ಣನವರ ವಂದಿಸಿದರು.