ಅಲ್ಪಸಂಖ್ಯಾತರ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ: ಪಾಟೀಲ
ಶೇಡಬಾಳ/ಕಾಗವಾಡ:ಬಿಜೆಪಿ ಪಕ್ಷದಿಂದ ನನಗೆ ಅಲ್ಪಸಂಖ್ಯಾತರ ಇಲಾಖೆಯ ಸಚಿವ ಸ್ಥಾನದ ಜವಾಬ್ದಾರಿ ನೀಡಿದ್ದಾಗ ರಾಜ್ಯದಲ್ಲಿ ಮತ್ತು ಕಾಗವಾಡ ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಯಾವುದೇ ಹಣದ ಅಪೇಕ್ಷೆ ಮಾಡಿಲ್ಲಾ ಮತ್ತು ಸುದೈವದಿಂದ ನನಗೆ ಹಣದ ಕೊರತೆಯೂ ಇಲ್ಲಾ. ನಾನು ಕಾಗವಾಡ ಕ್ಷೇತ್ರ, ಭ್ರಷ್ಟಾಚಾರಮುಕ್ತ ಕ್ಷೇತ್ರ ಮಾಡುವದೊಂದಿಗೆ ಶೇಡಬಾಳ, ಐನಾಪುರ ಪಟ್ಟಣ ಪಂಚಾಯಿತಿ ಮತ್ತು ಉಗಾರ ಪುರಸಭೆಯ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಎಲ್ಲ ಮತದಾರ ಬಾಂಧವರು ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲಿಸಿರಿಯೆಂದು ಕಾಗವಾಡ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ ಶೇಡಬಾಳದಲ್ಲಿ ಹೇಳಿದರು.
ಶುಕ್ರವಾರರಂದು ಶೇಡಬಾಳ ಪಟ್ಟಣ ಪಂಚಾಯತಿಯ ಚುನಾವಣೆಯಲ್ಲಿ ಬಹಿರಂಗ ಪ್ರಚಾರದಲ್ಲಿ ಮಾತನಾಡಿದರು. ಶುದ್ಧ ಕುಡಿಯುವ ನೀರು, ಒಳ್ಳೆ ರಸ್ತೆಗಳು ಹಾಗೂ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಮತ್ತು ಕಟ್ಟಡಗಳು ನಿರ್ಮಿಸಿದ್ದೇನೆ. ಸಚಿವನಾದಾಗ ನೂರಾರು ಕೋಟಿ ಅನುದಾನ ತಂದಿದ್ದರೂ ಯಾವುದೇ ಫಲ ಅಪೇಕ್ಷೆ ಮಾಡಿಲ್ಲಾ ಮತ್ತು ಮುಂದೆ ಮಾಡುವೂದಿಲ್ಲಾ. ಯಾವುದೇ ಇಲಾಖೆ ಅಧಿಕಾರಿಗಳು ಸಾಮಾನ್ಯ ಜನರಿಗೆ ಕಿರುಕುಳ ನೀಡದಂತೆ ತಾಕಿತ್ತು ಮಾಡಿದ್ದೇನೆ. ಇಂಥಹ ಒಳ್ಳೆ ಆಡಳಿತ ನೀಡುವ ಸದಸ್ಯರಿಗೆ ತಾವೆಲ್ಲರೂ ಆಶೀರ್ವಾದ ಮಾಡಿರಿಯೆಂದು ಶ್ರೀಮಂತ ಪಾಟೀಲ ಮನವಿ ಮಾಡಿಕೊಂಡರು.
ವಿರೋಧಿ ಪಕ್ಷದವರು ಏನೋ ಆರೋಪ ಮಾಡಿದ್ದರೂ, ಈ ಮೂರು ಪಟ್ಟಣಗಳಲ್ಲಿ ಬಿಜೆಪಿ ಪಕ್ಷದ ಆಡಳಿತಯಿರುವುದು ಶತಸಿದ್ಧ. ಸಾರ್ವಜನಿಕರು ನಮ್ಮ ಪರ ಒಲವು ತೋರುತ್ತಿದ್ದು, ವಿರೋಧಿ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳಲಿದ್ದಾರೆಯೆಂದು ಎದೆತಟ್ಟಿ ಶ್ರೀಮಂತ ಪಾಟೀಲ ಹೇಳಿದರು.
ಅಥಣಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶೀತಲಗೌಡ ಪಾಟೀಲ ಮಾತನಾಡುವಾಗ, ನನ್ನ ರಾಜಕೀಯ ಜೀವನದಲ್ಲಿ ಅಪರೂಪದ ಶಾಸಕನನ್ನು ಕಂಡಿದ್ದೇನೆ. ಯಾವುದೇ ಹಣದ ಆಸೆ ಮಾಡದೆ ಅಲ್ಪಸಂಖ್ಯಾತರ ಇಲಾಖೆಯಿಂದ ಕೋಟ್ಯಾಂತರ ರೂ. ಅನುದಾನವನ್ನು ನೇರವಾಗಿ ಮಂದಿರ, ಮಸೀದಿಗಳ ಅಕೌಂಟ್‌ಗೆ ಹಾಕಿಸಿದ ಏಕೈಕ್ಯ ಪ್ರಾಮಾಣಿಕ ಶಾಸಕ ಎಂದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ಡಾ. ರಾಜೇಶ ನೆರಲಿ, ಉಪಾಧ್ಯಕ್ಷ ವಿನಾಯಕ ಬಾಗಡಿ, ಕಾರ್ಯದರ್ಶಿ ನಿಂಗಪ್ಪಾ ಖೋಕಲೆ, ಆರ್.ಎಂ.ಪಾಟೀಲ, ಮಹಾದೇವ ಕೋರೆ, ಶಿವಾನಂದ ಗೋಲಬಾವಿ, ಶ್ರೀನಿವಾಸ ಪಾಟೀಲ ಮಾತನಾಡಿ ಯಾವುದೇ ಸ್ಥಿತಿಯಲ್ಲಿ ಶೇಡಬಾಳ, ಉಗಾರ, ಐನಾಪುರದ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರುವುದು ಖಚಿತವೆಂದು ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ಶಾಂತಿಸಾಗರ ಆಶ್ರಮದ ವ್ಯವಸ್ಥಾಪಕ ರಾಜು ನಾಂದ್ರೆ, ಭರತೇಶ ಪಾಟೀಲ, ಸಚೀನ ಪಾಟೀಲ, ಉತ್ಕರ್ಶ ಪಾಟೀಲ, ಸೇರಿದಂತೆ ಎಲ್ಲ ಅಭ್ಯರ್ಥಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಸುಭಾಷ ಢಾಲೆ ಶೇಡಬಾಳದ ಚುನಾವಣೆ ಬಗ್ಗೆ ಮಾಹಿತಿ ನೀಡಿದರು.