ಕಾಗವಾಡ

ಸಚಿವರಾಗಿದ್ದಾಗ ಮಾಡಿದ ಸೇವೆ ತೃಪ್ತಿ ತಂದಿದೆ

ಸಚಿವರಾಗಿದ್ದಾಗ ಮಾಡಿದ ಸೇವೆ ತೃಪ್ತಿ ತಂದಿದೆ

ಸಮುದಾಯ ಭವನ, ಮುನಿ ನಿವಾಸ ಉದ್ಘಾಟಿಸಿದ ಶಾಸಕ ಶ್ರೀಮಂತ ಪಾಟೀಲ   

ಐನಾಪುರ 09: ರಾಜ್ಯದ ಅಲ್ಪಸಂಖ್ಯಾತ ಇಲಾಖೆಯ ಸಚಿವನಾಗಿ ಸೇವೆ ಸಲ್ಲಿಸುವಾಗ ಜೈನ ಸಮಾಜದ ಅನೇಕ ಜೈನ ಮಂದಿರದ ಸಮುದಾಯ ಭವನಗಳ ಕಟ್ಟಡಕ್ಕಾಗಿ ಮತ್ತು ಭಗವಾನ್ ಬಾಹುಬಲಿ ಗೊಮಟೇಶ ಶ್ರವಣಬೆಳಗೊಳ ಅಭಿವೃದ್ಧಿಗಾಗಿ ಅನುದಾನ ಮಂಜೂರು ಗೊಳಿಸುವ ಸೌಭಾಗ್ಯ ನನಗೆ ದೊರೆತಿದೆ. ಇದರಿಂದ ನಾನು ನನ್ನ ಸಚಿವ ಅವಧಿಯಲ್ಲಿ ಮಾಡಿರುವ ಸೇವೆ ನನಗೆ ತೃಪ್ತಿ ತಂದಿದೆ. ಎಂದು ರಾಜ್ಯದ ಮಾಜಿ ಅಲ್ಪಸಂಖ್ಯಾತ ಇಲಾಖೆಯ ಸಚಿವರು ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು. 

ಶುಕ್ರವಾರ ದಿ. 8ರಂದು ಐನಾಪುರದಲ್ಲಿ ಭಗವಾನ್ ಆದಿನಾಥ್ ದಿಗಂಬರ್ ಜೈನ ಮಂದಿರ ಮುಂಭಾಗದಲ್ಲಿ ಸುಮಾರು 30ಲಕ್ಷ ರೂ. ವೆಚ್ಚದಲ್ಲಿ ಕಟ್ಟಿಸಿದ ಸಮುದಾಯ ಭವನ ಹಾಗೂ ಮುನಿ ನಿವಾಸ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. 

ಐನಾಪುರದ ಸಮಸ್ತ ಜೈನ ಬಾಂಧವರು ಒಂದುಗೂಡಿ ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ನೀಡಿರುವ 30 ಲಕ್ಷ ರೂ. ಅನುದಾನದ ಸದುಪಯೋಗ ಪಡೆದು ಸುಸಜ್ಜಿತವಾಗಿ ಭವನ ಹಾಗೂ ಮುನಿ ನಿವಾಸ ಕಟ್ಟಿಸಿದಾರೆ. ಗುಣಮಟ್ಟದ ಕಾಮಗಾರಿಕೊಂಡು ಶಾಸಕ ಶ್ರೀಮಂತ ಪಾಟೀಲರು ಸಂತಸ ವ್ಯಕ್ತಪಡಿಸಿದರು. 

ಸಮಾರಂಭದ ಅಧ್ಯಕ್ಷತೆ ಭಗವಾನ್ ಅದಿನಾಥ್ ದಿಗಂಬರ್ ಜೈನ ಮಂದಿರ ಸಮಿತಿ ಅಧ್ಯಕ್ಷ ಸುನಿಲ್ ಪಾಟೀಲ್ ವಹಿಸಿದರು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿಗಳು ಹಾಗೂ ಭಾರತ ಸರ್ಕಾರದ ಅಲ್ಪಸಂಖ್ಯಾತ ಆಯೋಗದ ಸದಸ್ಯ ಧನ್ಯಕುಮಾರ ಜಿನ್ನಪ್ಪ ಗುಂಡೆ, ಬೆಳಗಾವಿ ಜಿಲ್ಲೆಯ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಧಿಕಾರಿ ಡಾ. ಅಬ್ದುಲ್ ರಶೀದ್ ಮಿರ್ಜನ್‌ವರ ಉಪಸ್ಥಿತರಿದ್ದರು. 

ಐನಾಪುರ ಪಟ್ಟಣ ಪಂಚಾಯಿತಿಯ ಸದಸ್ಯ, ಬೆಳಗಾವಿ ಜಿಲ್ಲಾ ದಕ್ಷಿಣ ಭಾರತ ಜೈನ ಸಮಾಜದ ಸಂಘಟನೆಯ ಉಪಾಧ್ಯಕ್ಷ ಸಂಜಯ್ ಕುಚುನೂರಿ ಇವರನ್ನು ಸನ್ಮಾನಿಸಲಾಯಿತು. ಪಟ್ಟಣ ಪಂಚಾಯತಿ ಸದಸ್ಯ ವಂದನಾ ರತ್ನಕುಮಾರ್ ಪಾಟೀಲ್, ಬಾಪು ಸಾವಗರ, ಜೈಕುಮಾರ್ ಪಾಟೀಲ್, ರಾಕೇಶ್ ಕಾರ್ಚಿ, ಪ್ರವೀಣ್ ಕೊಕಟ್ನೂರ್ ಸೇರಿದಂತೆ ಜೈನ ಸಮಾಜದ ಮುಖಂಡರು ಶ್ರಾವಕ ಶ್ರಾವಿಕೆಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ