ನಾನು ಖಾಸಗಿ ಶಾಲೆ ವಿರೋಧಿ ಅಲ್ಲ: ಸಿದ್ದರಾಮಯ್ಯ
ಗುಳೇದಗುಡ್ಡ,ಜು.14: ನನ್ನ ತಂದೆ ತಾಯಿ ಕಲಿಯದವರು. ಹೆಬ್ಬರಳು ಒತ್ತುವವರು. ಆದರೆ ನಾನು ಕಲಿತು ವಿದ್ಯಾವಂತನಾದೆ. ಸರ್ಕಾರಿ ಶಾಲೆ, ಕಾಲೇಜುಗಳು ಹೆಚ್ಚು ಹೆಚ್ಚಾಗಿ ಆಗಬೇಕು. ಹಾಗಂತ ನಾನು ಖಾಸಗಿ ಶಾಲೆಗಳ ವಿರೋಧಿ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರು ಮಂಗಳವಾರ ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಕೇತಿಕವಾಗಿ ಟ್ಯಾಬ್ ವಿತರಿಸಿ ಮಾತನಾಡಿ, ನಮ್ಮ ದೇಶದ ಸಂವಿಧಾನ ಜಾತ್ಯತೀತ ನೆಲಗಟ್ಟಿನ ಮೇಲೆ ರಚಿತವಾಗಿದೆ. ಇಂತಹ ಸಂವಿಧಾನ ಬೇರೆ ದೇಶಗಳಲ್ಲಿ ಇಲ್ಲ. ನಮ್ಮ ವಿದ್ಯಾರ್ಥಿಗಳು ಅಂಬೇಡ್ಕರ್ ಅವರನ್ನು ಹಾಗೂ ದೇಶದ ಮಹಾನ್ ನಾಯಕರನ್ನು ಓದಲಿ. ದೇಶದಲ್ಲಿ 78 ಪ್ರತಿಶತ ಜನ ಶಿಕ್ಷಣವಂತರಾದರೂ ಜಾತಿ ಇನ್ನೂ ಜೀವಂತವಾಗಿದೆ. ಬಸವಣ್ಣನವರ ಫೋಟೋ ಹಾಕ್ತಿವಿ. ಆದರೆ ಅವರಂತೆ ನಡೆದುಕೊಳ್ಳಲ್ಲ. ನಾನು ನುಡಿದಂತೆ ನಡೆಯುವವನು. ನಡೆದಂತೆ ನುಡಿಯುವವನು.
ಅಹಿಂದಾ ಪರ ನಾನಲ್ಲ : ನನ್ನನ್ನು ಅಹಿಂದಾ ಪರ ಎಂದು ಟಂಟಾಂ ಹೊಡಿತಾರೆ. ಅದರೆ ನಾನು ಮಾತ್ರ ಎಲ್ಲ ಜಾತಿ, ವರ್ಗದವರ ಪರವಾಗಿದ್ದೇನೆ. ನಾನು ಎಲ್ಲ ಜಾತಿ ವರ್ಗದ ಬಡವರಿಗೆ ಅಕ್ಕಿ ಪುಕ್ಕಟೆಯಾಗಿ ಕೋಡಲಿಲ್ಲವಾ, ಇಂದಿರಾ ಕ್ಯಾಂಟೀನ್ ಮಾಡಲಿಲ್ಲವಾ, ಕೃಷಿ ಭಾಗ್ಯ ಯೋಜನೆ ತರಲಿಲ್ಲವಾ ನನಗೇಕೆ ಆ ಹಣೆಪಟ್ಟಿ ಕೊಟ್ಟಿದ್ದಾರೋ ಗೊತ್ತಲ್ಲ ಎಂದು ಹಾಗೆ ಹೇಳುವ ವಿರೋಧಿಗಳಿಗೆ ವೇದಿಕೆ ಮೂಲಕ ತಿರುಗೇಟು ನೀಡಿ, ಸರ್ವಧರ್ಮ ಸಮನ್ವಯ ನನ್ನದು. ಯುನಿವರ್ಸಿಟಿಗಳಲ್ಲಿಯೂ ವೈಸ್‌ಚಾನ್ಸಲರ್‌ಗಳೆ ಜಾತಿಯತೆ ಮಾಡುತ್ತಾರೆ. ಆದರೆ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾತಿಯತೆ ಬೆಳೆಯದಿರಲಿ. ಸಂವಿಧಾನ ಓದಿರಿ. ಜಾತಿಯಿಂದ ದೂರವಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಕೆರೆ ಈರಣ್ಣನ ಕೆರೆಯಲ್ಲಿ ಡೋಣಿ ವಿಹಾರ, ಗಾರ್ಡ್‌ನ್, ಪ್ರೇಕ್ಷಣೀಯ ಸ್ಥಳವನ್ನಾಗಿ ಪರಿವರ್ತಿಸಲು ರೈತರು ಮನವಿ ನೀಡಿದ್ದಾರೆ. ಬಿಜೆಪಿ ಸರ್ಕಾರದ ಹತ್ತಿರ ದುಡ್ಡೇ ಇಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದೆ. ಯಾಕೆ ಅಂದರೆ ಯಡಿಯೂರ್ಪ ಕೋವಿಡ್ ನೆವ ಹೇಳುತ್ತಾರೆ. ಅದರೂ ಕೇಳುತ್ತೇನೆ ಕೊಟ್ಟರೆ ಮಾಡಿಸುತ್ತೇನೆ. ಮೊದಲೇ ಮಾಡಿಸುತ್ತೇನೆಂದು ನಾನು ಸುಳ್ಳು ಹೇಳಲ್ಲ.
ಬಿಜೆಪಿ ಸರ್ಕಾರ ಬಂದ ಮೇಲೆ ಕೆರೆ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದೆ. ನಾನು ಸಿಎಂ ಆಗಿದ್ದಾಗ ಪ್ರತಿಯೊಬ್ಬರಿಗೆ ತಲಾ 10 ಕೆ.ಜಿ. ಅಕ್ಕಿ ಕೊಟ್ಟೆ. ಅದರೆ ಬಿಜೆಪಿ ಸರ್ಕಾರ ಬಂದು ಮೂರು ಕೆ.ಜಿ. ಕಸಿದುಕೊಂಡು ಬಿಟ್ಟತು. ಮತ್ತೇ ನಾನು ಸಿ.ಎಂ. ಆದರೆ 10 ಕೆ.ಜಿ. ಅಕ್ಕಿ ಕೊಡುತ್ತೇನೆ. ಕೋವಿಡ್ ಆಗಿ ಸತ್ತ ಕುಟುಂಬಕ್ಕೆ 5 ಲಕ್ಷ ರೂ. ಕೊಡಲು ನಾನು ಹೇಳಿದ್ದೇನೆ. ಸುಪ್ರೀಂ ಕೋರ್ಟ್ 4 ಲಕ್ಷರೂ. ಕೊಡಲು ನಿರ್ದೇಶನ ನೀಡಿದ್ದರೂ, ಬಿಜೆಪಿ ಸರ್ಕಾರ 1 ಲಕ್ಷ ರೂ. ಕೊಡುವುದಾಗಿ ಹೇಳಿದ್ದರೂ ಅದನ್ನು ಇನ್ನೂ ಕೊಟ್ಟಿಲ್ಲ.
ನಾನು ಮಾಸ್ಕ್, ಹ್ಯಾಂಡ್‌ಗ್ಲವಜ್ ಹಾಕಿಕೊಂಡಿದ್ದೇನೆ. ನೋಡಿ ಇಲ್ಲಿರುವ ಮಹಿಳೆಯರೂ ಹಾಕಿಲ್ಲ, ಪುರುಷರೂ ಹಾಕಿಲ್ಲ. ಮಸ್ಕ್ ತಂದರೂ ಹಾಕಿಕೊಂಡಿಲ್ಲ. ನೋಡಿ ಈಗ ಹಾಕಿದರು ಎಂದು ಹಾಸ್ಯ ಚಟಾಕಿ ಹಾಕಿ ಸಭೆಯಲ್ಲಿ ನಗಿಸಿದರು. ಮೊದಲು ಮಾಸ್ಕ್ ಹಾಕಿಕೊಳ್ಳಿ. ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್, ಸ್ಯನಿಟೈಜರ್ ಬಳಸಿ, ಲಸಿಕೆ ಹಾಕಿಸಿಕೊಳ್ಳಿ ಎಂದು ಜನ ಸಭೆಯಲ್ಲಿ ನೆರೆದ ಜನರಿಗೆ ಜಾಗೃತಿ ಮೂಡಿಸಿದರು. ಇಜೆಪಿ ಸರ್ಕರಕ್ಕೆ ಆಕ್ಷಿಜನ್ ವ್ಯವಸ್ಥೆ ಮಾಡಿಸಲಿಕ್ಕಾಗದೇ ಜನರನ್ನು ಸಾಯಿಸಿದ್ದಾರೆ. ಸತ್ತವರ ಸಂಖ್ಯೆ ತಪ್ಪಾಗಿ ಕೊಟ್ಟಿದ್ದಾರೆ. ಸುಳ್ಳು ಹೇಳುವುದೇ ಯಡಿಯೂರ್ಪನವರ ಕೆಲಸವಾಗಿದೆ ಎಂದರು.
ಸಿದ್ಧರಾಮಯ್ಯನವರ ಅಭಿಮಾನಿಗಳು ಮತ್ತೇ ಬಾದಾಮಿಯಿಂದ ಸ್ಪರ್ಧಿಸಬೇಕೆಂದು ಕೂಗಾಡಿ ಒತ್ತಾಯಿಸಿದ ಘಟನೆ ನಡೆಯಿತು. ಅದಕ್ಕೆ ನಕ್ಕ ಸಿದ್ದರಾಮಯ್ಯನವರು, ನಿಮ್ಮ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ. ಇಲ್ಲಿನ ಜನ ಬಹಳ ಒಳ್ಳೆಯವರು. ನಾನು ಮತಕೇಳಲು ಬರದಿದ್ದರೂ ನನಗೆ ಮತ ನೀಡಿ ಗೆಲ್ಲಿಸಿದ್ದಿರಿ. ಮುಂದಿನ ಚುನವಣೆಗೆ ಇನ್ನೂ ದಿನಗಳಿವೆ. ಈಗಲೇ ನಿರ್ಧಾರ ತಿಳಿಸುವುದು ಸರಿಯಲ್ಲ. ಹಾಗೇನಾದರೂ ನಿಲ್ಲುವುದಾದರೆ ತಮ್ಮನ್ನು ಕೇಳಿ ನಿರ್ಧಾರ ತೆಡಗೆದುಕೊಳ್ಳುತ್ತೇನೆ ಎಂದರು.
ವೇದಿಕೆ ಮೇಲೆ ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ, ಉಪಾಧ್ಯಕ್ಷೆ ಶರೀಫಾ ಮಂಗಳೂರ, ಕೇಮಣ್ಣ ಮೇಡಿ, ಮಾಜಿ ಸಚಿವ ಎಚ್.ವೈ.ಮೇಟಿ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಹೊಳಬಸು ಶೆಟ್ಟರ್, ಸಂಜಯ ಬರಗುಂಡಿ ವೇದಿಕೆ ಮೇಲಿದ್ದರು.
ಪದವಿಪೂರ್ವ ಇಲಾಖೆ ಡಿಡಿ ಪೂಜಾರ್, ಪ್ರಾಚಾರ್ಯ ವಿಠ್ಠಲ ಕಳಸಾ, ಗುತ್ತಿಗೆದಾರ ಎಚ್.ಆರ್.ಚಿಂಚಲಿ, ಶಿವಾನಂದ ಪಾಟೀಲ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.