ಕಾಂಗ್ರೇಸ್‌ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ: ಆರ್ ಶಂಕರ
ಶಿಗ್ಗಾವಿ 11: ಶಿಗ್ಗಾವಿ ಸವಣೂರು ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯಲಿದ್ದೇನೆ ಎಂದು ಅರಣ್ಯ ಹಾಗೂ ಪರಿಸರ ಖಾತೆ ಮಾಜಿ ಸಚಿವ ಆರ್ ಶಂಕರ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು. ಈ ಹಿಂದಿನ ಅವಧಿಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸಮರ್ಕ ಮೇಜಾರಿಟಿ ಇಲ್ಲದೇ ರಾಜಕೀಯ ಅತಂತ್ರವಾಗಿತ್ತು. ಅಮಾನತ್ತು ಆಗಿ ಸಾಕಷ್ಟು ಸಂಖಷ್ಟ ಎದುರಿಸಿದೆವು. ಬಿಜೆಪಿ ಪಕ್ಷ ಬೆಂಬಲಿಸಿ ನಮಗೇನೂ ಲಾಭವಾಗಿಲ್ಲಾ. ಎರಡುವರೇ ವರ್ಷದ ಬಿಜೆಪಿ ಪಕ್ಷದ ಸಪೂರ್ಟ ಮಾಡಿದ್ದರೂ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಸಕರ ಯಾವೂದೇ ಕೆಲಸ ಕಾರ್ಯ ಮಾಡಿ ಕೊಡಲಿಲ್ಲ. ಶಾಸಕರಿಗೂ ಯಾವೂದೇ ಗೌರವ ಕೊಡಲಿಲ್ಲ ಕಾರಣ ಮತ್ತೊಮ್ಮೆ ಕಾಂಗ್ರೇಸ್ ಪಕ್ಷಕ್ಕೆ ಸೇರಿಕೊಂಡಿದ್ದೇನೆ. ಅಂದು ಪಕ್ಷಾಂತರ ಕಾರಣಕ್ಕೆ ಅಸಿಂಧು ಆದ 17 ಜನ ಶಾಸಕರು ಮತ್ತೊಮ್ಮೆ ಉಪ- ಚುನಾವಣೆಯಲ್ಲಿ ಶಾಸಕರಾಗಿ ಗೆದ್ದು ಬರಬೇಕಾಯಿತು. ಲೋಕಸಭೆಯ ಚುನಾವಣೆಯಲ್ಲೂ ಹಾವೇರಿ ಗದಗ ಕ್ಷೆತ್ರದ ಬೊಮ್ಮಾಯಿ ಗೆಲುವು ತಡೆಯಲು ಸಾಕಷ್ಟು ಕಾಂಗ್ರೇಸ್ ಅಭ್ಯರ್ಥಿಗೆ ಬೆಂಬಲವಾಗಿ ನಿಂತಿದ್ದೆ. ಎಂದು ನೆನಪಸಿಕೊಂಡರು. ಈ ಬಾರಿ ಶಿಗ್ಗಾವಿ ಸವಣೂರು ಉಪ ಚುನಾವಣೆಯಲ್ಲೂ ಕಾಂಗ್ರೇಸ್ ನಿಂದ ಸ್ಫರ್ಧಿಸುತ್ತೇನೆ. ರಾಜ್ಯ ಹಾಗೂ ಕೇಂದ್ರದ ಹೈ ಕಮಾಂಡ ಟೀಕೇಟ್ ನೀಡುವ ಭರವಸೆ ನೀಡಿದ್ದಾರೆ. ಅಭ್ಯರ್ಥಿ ಅಂತಿಮವಾಗಬೇಕಷ್ಟೆ. ಎಂದ ಅವರು ಕ್ಷೇತ್ರದಲ್ಲಿ ಸಾಕಷ್ಟು ಕೆಲಸವಾಗಬೇಕು. ಸರ್ಕಾರ ಸಮರ್ಕ ಅನುದಾನ ನೀಡಿದರೇ ಅಭಿವೃದ್ಧಿ ಮಾಡುತ್ತೇನೆ. ನಾನು ನನ್ನ ಪಕ್ಷದ ಸಿದ್ದಾಂತದಲ್ಲಿ ಚುನಾವಣೆಯನ್ನು ಎದುರಿಸುತ್ತೇನೆ. ಎಂದರು. ರಾಜು ಅಡಿವೆಪ್ಪನವರ ಅಲ್ಲದೇ ಹಲವಾರು ಮುಖಂಡರು ಭಾಗವಹಿಸಿದ್ದರು.