ರಾಣೆಬೆನ್ನೂರ

ನಾನು ಲೋಕಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ: ಡಾ. ಶೇಖರ ಸಜ್ಜನರ

ನಾನು ಲೋಕಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ: ಡಾ. ಶೇಖರ ಸಜ್ಜನರ

ಲೋಕದರ್ಶನ ವರದಿ 

ರಾಣಿಬೆನ್ನೂರ 21: ಬ್ರಷ್ಟಾಚಾರ ರಹಿತ ರಾಜಕಾರಣ ಮಾಡುತ್ತಿರುವ ಪ್ರಧಾನಿ ಮೋದಿಜಿಯವರ ಆಡಳಿತದಲ್ಲಿ ಸಂಸತ್ ಸದಸ್ಯನಾಗಿ ಸೇವೆ ಸಲ್ಲಿಸುವ ಕನಸು ನನ್ನದು. ಹಾಗಾಗಿ ಮುಂಬರುವ ಲೋಕ ಸಭಾ ಚುನಾವಣೆಯ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಗದಗ ಜಿಲ್ಲೆಯ ಡಾಽ ಶೇಖರ ಸಜ್ಜನರ ಹೇಳಿದರು. 

  ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆಯಲ್ಲಿ ನಾನು ನನ್ನ ವೈದ್ಯ ವ್ಲತ್ತಿಯ ಜೊತೆಗೆ ಅನೇಕ ಸಮಾಮಾಜಿಕ ಸೇವೆ ಸಲ್ಲಿಸಿದ್ದೇನೆ ಜೊತೆಗೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ ಎಂದರು. 

  ಕಳೆದ 15 ವರ್ಷಗಳಿಂದ ಹಾವೇರಿ ಜಿಲ್ಲೆಗೆ ಆಧ್ಯತೆ ನೀಡಿದ್ದು, ಈಬಾರಿ ಗದಗ ಜಲ್ಲೆಗೆ ಆಧ್ಯತೆ ನೀಡಿ ನನಗೆ ಟಿಕೇಟ ನೀಡಬೇಕು ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ. ಜೊತೆಗೆ ಹಾವೇರಿಯ ನನ್ನ ಸಹೋದರರು ನನಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ. ಅಲ್ಲದೆ ಎಲ್ಲ ಕ್ಷೇತ್ರಗಳ ಸಂಚಾರ ಮಾಡಿ ನಾಯಕರ ಮತ್ತು ಮತದಾರರಲ್ಲಿ ಮನವರಿಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡಾಽ ಸಜ್ಜನರ ಹೇಳಿದರು. 

 ಈ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವಿ.ಪಿ. ಲಿಂಗನಗೌಡ್ರ, ಡಾಽ ಗಣೇಶ ದೇವಗಿರಿಮಠ, ಮಲ್ಲಿಕಾರ್ಜುನ ಮಾಚೇನಹಳ್ಳಿ, ಸೋಮಶೇಖರ ಜ್ಯೋತಿ, ವಿ.ಎಸ್‌. ಅಜ್ಮನಿ, ಸೋಮಿಲಿಂಗಪ್ಪ ಅಜ್ಮನಿ  ಮತ್ತಿತರರು ಇದ್ದರು. 



ಸುದ್ದಿ ಓದಿ