ಜೆ.ಎಸ್.ಎಸ್ ನಲ್ಲಿ ಹುಂಡೈ ಮೋಟರ್ಸ ನ ತರಬೇತಿ ಪ್ರಾರಂಭ
ಧಾರವಾಡ 04: ಸವದತ್ತಿ ರಸ್ತೆಯ ಜೆ.ಎಸ್.ಎಸ್ ಕೌಶಲ್ಯ ಐ.ಟಿ.ಐ ಹಾಗೂ ಹುಂಡೈ ಮೋಟರ್ಸ ನ ಉದ್ಯೋಗ ಮತ್ತು ತರಬೇತಿಯ ಒಡಬಂಡಿಕೆ ಪ್ರಕಾರ ಮೊದಲ ಬ್ಯಾಚಿನ ತರಗತಿಗಳು ಪ್ರಾರಂಭವಾದವು. ಪ್ರತಿ ತಿಂಗಳು 3 ದಿನಗಳ ಕಾಲ ತಾತ್ವಿಕ ಮತ್ತು ಪ್ರಾಯೋಗಿಕ ತರಗತಿಗಳು ಜರುಗಲಿವೆೆ. ಈ ಸಂದರ್ಭದಲ್ಲಿ ಬೆಲ್ಲದ ಹ್ಯುಂಡೈ ಮೋಟಾರ‌್ಸನ ಅಭಿಷೇಕ್ ಪಾಟೀಲ್, ಜ್ಞಾನೇಶ್ ಗುರ್ಪನವರ ಜೆ.ಎಸ್.ಎಸ್ ನ ಮಂಜುನಾಥ ಸೋಮಣ್ಣವರ, ರವಿ ದೇಸಾಯಿ, ಅಶ್ವಿನಿ ದೇಸಾಯಿ, ಮಂಜುನಾಥ ಕಡೆಮನಿ ಉಪಸ್ಥಿತರಿದ್ದರು.