ಪತ್ನಿಯನ್ನು ಕೊಂದು ಪತಿ ಪರಾರಿ
ಜಮಖಂಡಿ 13: ಚೌಡಯ್ಯ ನಗರದಲ್ಲಿ ಹೆಂಡತಿಯನ್ನು ಕೊಲೆಗೈದ ಆರೋಪಿ ಪತಿ ಪರಾರಿಯಾದ ಘಟನೆ ನಡೆದಿದೆ.
ಚೌಡಯ್ಯ ನಗರದಲ್ಲಿ ವಾಸವಾಗಿರುವ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಪುನೀತ ಬಾಳಪ್ಪ ಗಿರಣಿ (28) ತಡರಾತ್ರಿಯಲ್ಲಿ ತನ್ನ ಹೆಂಡತಿ ಕಾವೇರಿ ಗಿರಣಿ (24) ಕೊಲೆಗೈದು ಪರಾರಿಯಾದ್ದಾನೆ. ಹೆಂಡತಿ ಕಾವೇರಿ ಗಿರಣಿ (24) ಕೊಲೆಯಾದ ದುರ್ದೈವಿ.
ಪುನೀತ ಮತ್ತು ಕಾವೇರಿ ದಂಪತಿಗಳಿಬ್ಬರ ನಡುವೆ ಜಗಳವಾಗಿತ್ತು. ಕಾವೇರಿ ಕೆಲ ತಿಂಗಳ ಕಾಲ ತವರು ಮನೆಯಾದ ಜಮಖಂಡಿಯಲ್ಲಿ ವಾಸವಾಗಿದ್ದಳು. ಗಂಡ ಪುನೀತ ಗಿರಣಿ 15 ದಿನಗಳ ಹಿಂದೆ ಹೆಂಡತಿಯ ಮನೆಗೆ ಬಂದು ವಾಸವಾಗಿದ್ದ. ಬೇರೆ ಕಡೆಯಲ್ಲಿ ದುಡಿಯಲು ಹೋಗೋಣ ಎಂದು ಪತ್ನಿ ಕಾವೇರಿಗೆ ಹೇಳಿದ್ದು. ಕಾವೇರಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ಆದರೆ ಬೇರೆ ಕಡೆಗೆ ದುಡಿಯಲು ಹೋಗುವದು ಬೇಡ ಎಂದು ಇಬ್ಬರ ನಡುವೆ ವಾಗ್ವಾದ ನಡೆದು ಅದು ಅತೀ ತಾರಕೇರಿಕ್ಕೇರಿ ಪುನೀತ ಕಟ್ಟಿಗೆಯಿಂದ ತಲೆಗೆ ಹೊಡೆದು ಹೆಂಡತಿಯನ್ನು ಕೊಲೆಗೈದು ಪರಾರಿಯಾಗಿದ್ದಾನೆ.
ಕಾವೇರಿಗೆ ಎರಡು ಹೆಣ್ಣು ಮಕ್ಕಳು ಇದ್ದಾವೆಂದು ಪ್ರಕರಣದಲ್ಲಿ ದಾಖಲಾಗಿದೆ. ಕೊಲೆ ನಡೆದ ಸ್ಥಳಕ್ಕೆ ಡಿಎಸ್ ಪಿ. ಶಾಂತವೀರ ಈ., ಸಿಪಿಐ. ಮಲ್ಲಪ್ಪ ಮಡ್ಡಿ, ಶಹರ ಠಾಣೆಯ ಪಿಎಸ್ ಐ. ಅನೀಲ ಕುಂಬಾರ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಮನೆಯ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟುವಂತಿತ್ತು.