ಇಂದು ಮಾನವೀಯ ಶಿಕ್ಷಣದ ಮೌಲ್ಯ ಕುಸಿಯುತ್ತಿದೆ: ಹೊರಕೇರಿ
ರಾಣಿಬೆನ್ನೂರ 16: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ನೀತಿ ಪಾಠಗಳ ಭೋಧನೆ ಇಂದು ಬಹಳ ಅವಶ್ಯವಿದೆ. ಇಂದಿನ ಪಾಲಕರು ಮಕ್ಕಳ ಶಿಕ್ಷಣದಲ್ಲಿ ಅಂಕಗಳನ್ನೇ ಗುರಿಯಾಗಿರಿಸಿಕೊಂಡು ಮಾನವೀಯ ಮೌಲ್ಯಗಳ ಕಡೆಗೆ ಗಮನಹರಿಸದೇ ಬಿಸಿಲ್ಗುದುರೆಯನ್ನೇರಿ ನಡೆಯುವಂತಾಗಿದೆ ಎಂದು ದಾವಣಗೇರಿ ನಿವೃತ್ತ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಮಂಜುನಾಥ ಹೊರಕೇರಿ ಹೇಳಿದರು.
ಮಂಗಳವಾರ ತಾಲೂಕಿನ ಮಾಕನೂರ ಗ್ರಾಮದ ಮಾರ್ಕಂಡೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಏರಿ್ಡಸಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಪಂ ಸದಸ್ಯರ ಮತ್ತು ಗ್ರಾಮದ ಮುಖಂಡರ ಸಮ್ಮಖದಲ್ಲಿ ಶೈಕ್ಷಣಿಕ ಪಾಲಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಈ ದೆಶೆಯಲ್ಲಿ ಶಿಕ್ಷಣ ಸಂಸ್ಥೆಗಳು ಕೂಡ ಹೊರತಾಗಿಲ್ಲ. ಅಂದು ಗುರುಕುಲದಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ದೊರೆಯುತ್ತಿದ್ದು ಇದರಿಂದ ಮಕ್ಕಳು ಸಂಸ್ಕಾರಯುತ ಜೀವನ ಸಾಗಿಸಲು ಮುಂದಾಗುತ್ತಿದ್ದರು. ಇಂದು ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣವನ್ನಾಗಿ ಬಳಸಿ ಬರೀ ಅಂಕಗಳಿಗಾಗಿ ಶಿಕ್ಷಣ ನೀಡುವ ಗುರಿಯನ್ನು ಹೊಂದಿರುವದರಿಂದ ಮಾನವೀಯ ಶಿಕ್ಷಣದ ಮೌಲ್ಯ ಕುಸಿಯುತ್ತಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಬಗ್ಗೆ ಪಾಲಕರು ಕಾಳಜಿ ವಹಿಸದಿರುವುದು ವಿಷಾದದ ಸಂಗತಿಯಾಗಿದೆ. ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳ ಬಗ್ಗೆ ಪಾಲಕರು ಕಾಳಜಿ ವಹಿಸುವಷ್ಟು ನೀವು ವಹಿಸಬೇಕು. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಪಾಲಕರಾದವರು ದೂರದರ್ಶನದಿಂದ ದೂರ ಇದ್ದರೆ ಒಳ್ಳೆಯದು. ಮಕ್ಕಳಿಗೆ ಸ್ಮಾರ್ಟ ಪೋನ ಎಂದೂ ಕೊಡಬಾರದು. ಒಂದು ವೇಳೆ ಕೊಟ್ಟರೆ ಅವರು ಮೋಬಲ್ ಗೀಳಿಗಿಳಿದು ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ. ಅವರರಿಗೆ ಅಂದಿನ ಅಭ್ಯಾಸವನ್ನು ಅಂದೇ ಮಾಡಲು ತಿಳಿಹೇಳಬೇಕು ಎಂದು ಪಾಲಕರಲ್ಲಿ ಮನವಿ ಮಾಡಿದರು.
ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಮಾತನಾಡಿದರು. ಎಲ್ಲ ವಿಷಯವಾರು ಶಿಕ್ಷಕರು ತಮ್ಮ ಪಠ್ಯಪಸ್ತಕ ಕುರಿತು ಮಕ್ಕಳಿಗೆ ಶೈಕ್ಷಣಿಕ ಪ್ರಗತಿ ಹಾಗೂ ಎಸ್ಎಸ್ ಎಲ್ಸಿ ವಾರ್ಷಿಕ ಪರೀಕ್ಷೆಯ ಸಾಧನೆಯ ಬಗ್ಗೆ ಉದಾಹರಣೆ ಮೂಲಕ ಮಾಹಿತಿ ನೀಡಿದರು.
ಗ್ರಾಪಂ ಸದಸ್ಯರಾದ ದೇವೇಂದ್ರ್ಪ ಯಲಜಿ, ಶಿವನಗೌಡ ನಂದಿಗಾವಿ, ಗ್ರಾಮದ ಮುಖಂಡರಾದ ಹನುಮಂತಪ್ಪ ಆರೇರ, ವಿರುಪಾಕ್ಷಪ್ಪ ಕಾನಳ್ಳಿ, ಮಂಜುನಾಥ ತಾವರಗೊಂದಿ, ರಾಜಪ್ಪ ಬಾರ್ಕಿ, ಬಸನಗೌಡ ಭರಮಗೌಡ್ರ, ಮಲ್ಲೇಶಪ್ಪ ಹಲಗೇರಿ, ಭೀಮೇಶ ಚಿನ್ನಣ್ಣನವರ, ಪ್ರಭಾರಿ ಮುಖ್ಯೋಪಧ್ಯಾಯ ನಾಗರಾಜ ಮತ್ತೂರ, ಸಹಶಿಕ್ಷಕರಾದ ಟಿ.ಮಂಜುನಾಥ, ಸಂಜೀವಕುಮಾರ ಚೌಹಾಣ, ತಿಮ್ಮಕ್ಕ ಓಲೇಕಾರ, ರೂಪಾ ಪಾಟೀಲ, ಸುರೇಶ, ಎಸ್.ಬಿ. ಮರಿಗೌಡರ, ಶಿವಪ್ಪ ಕುರಿಯವರ, ಪಾಲಕರು ಮತ್ತು ವಿದ್ಯಾರ್ಥಿಗಳು ಇದ್ದರು.