ಸಾಂಸ್ಕೃತಿಕ, ಕ್ರೀಡೆ ಚಟುವಟಿಕೆಗಳಿಂದ ಮಾನವೀಯ ಗುಣಗಲು ಬೆಳೆಯಲು ಸಾಧ್ಯ
ರಾಣಿಬೆನ್ನೂರ:10 ಸಾಂಸ್ಕೃತಿಕ, ಕ್ರೀಡೆ ಚಟುವಟಿಕೆಗಳು ಸಂಸ್ಕಾರವನ್ನು ಕಲಿಸುತ್ತವೆ. ಇದರಿಂದ ಮಾನವೀಯ ಗುಣಗಳು ಬೆಳೆಯಲು ಸಾಧ್ಯ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬುಧವಾರ ಏರಿ್ಡಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪದವಿಯಿಂದ ಮಾತ್ರ ವ್ಯಕ್ತಿತ್ವ ವಿಕಾಸನವಾಗುವುದಿಲ್ಲ ತಂದೆ, ತಾಯಿ, ಶಿಕ್ಷಕರನ್ನು ಗೌರವಿಸುವ ಜೊತೆಗೆ ಶ್ರದ್ಧೆ ಭಕ್ತಿಯಿಂದ ನಡೆದರೆ ಸಮಾಜದಲ್ಲಿ ದೊಡ್ಡವರಾಗುತ್ತಾರೆ ಎಂದರು.
ಭೂಗೋಳಶಾಸ್ತ್ರ ಅಧ್ಯಯನ ವಿಭಾಗಕ್ಕೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಾನಿಗಳು ಅಗತ್ಯವಾದ ಪಠ್ಯ ಪುಸ್ತಕ ಹಾಗೂ ಸ್ಪರ್ಧತ್ಮಾಕ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳನ್ನು ದೇಣಿಗೆಯಾಗಿ ನೀಡಿರುವುದು ಸ್ವಾಗತಾರ್ಹ ಎಂದರು.
ಉಪನ್ಯಾಸಕ ಡಾ.ಹೆಚ್.ಓಂಕಾರ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಪೋನ್ ಸಂಸ್ಕೃತಿಯಿಂದ ಹೊರ ಬಂದು ನಿಜವಾದ ಅರ್ಥದಲ್ಲಿ ವಿಧ್ಯೆಯನ್ನು ಕುರಿತು ತಪಸ್ಸು ಮಾಡುವುದರ ಮೂಲಕ ಸಾಧಕರಾಗಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಮನಸ್ಥೈರ್ಯ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಫಲಿತಾಂಶ ನೂರಕ್ಕೆ ನೂರರಷ್ಟು ಬಂದರು ಸಹ ಅವನ ನೆಡೆತೆ ಸರಿಯಿಲ್ಲದಿದ್ದರೆ ಏನು ಪ್ರಯೋಜನವಿಲ್ಲ. ಅದ್ದರಿಂದ ಸರಸ್ವತಿ ತಾಯಿಯನ್ನು ಸ್ಮರಿಸಿ ವಿದ್ಯಾಭ್ಯಾಸ ಮಾಡಿ ಆಗ ಒಳ್ಳೆಯ ನಾಗರಿಕರಾಗುತ್ತೀರಿ ಎಂದರು.
ಇದೆ ಸಂಧರ್ಭದಲ್ಲಿ ಉಪನ್ಯಾಸಕ ಹೆಚ್.ಶಿವಾನಂದ ಹಾಗೂ ನಿವೃತ್ತ ಉಪನ್ಯಾಸಕ ಬಿ.ಕೆ.ಕೊಟ್ಟದರವರು ಶೈಕ್ಷಣಿಕ ಸಾಲಿನ ಭೂಗೋಳಶಾಸ್ತ್ರದ 6ನೇ ಸೆಮಿಸ್ಟರ್ ಪಠ್ಯ ಪುಸ್ತಕಗಳು ಮತ್ತು ಸ್ಪರ್ಧತ್ಮಾಕ ಪರೀಕ್ಷೆಗಳಿಗೆ ಬೇಕಾಗುವ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಹಸ್ತಾಂತರಿಸಿದರು. ನಂತರ ಪುಸ್ತಕ ದಾನಿಗಳನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಪ್ರೊ.ಆರ್.ಎಫ್. ಅಯ್ಯನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜ ಅಭಿವೃದ್ಧಿ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಅರಳಿ, ವೀರನಗೌಡ ಪೋಲೀಸಗೌಡ್ರ, ಶಂಕರಗೌಡ ಕುಸಗೂರು, ಸೋಮಪ್ಪ ಕೊಟ್ಟದ, ಪ್ರಾಧ್ಯಪಕರಾದ ಲೋಹಿಯಾ ಕೆ.ಜೆ.ಆರ್, ಡಾ.ಬಸವರಾಜ ಹುಗ್ಗಿ, ಡಾ. ಹನುಮಂತರಾಜ ಎನ್.ಬಿ, ಮಂಜುನಾಥ ಎನ್.ಜಿ, ಯಮನ ನಾಯ್ಕ, ಡಾ.ಎಸ್.ಐ ಮಲ್ಲಿಗಾರ, ಡಾ.ಹೊನ್ನಪ್ಪ, ಡಾ.ಶೋಭಾ ನಂದಿಹಳ್ಳಿ, ರೂಫಾ ಮುದಿಗೌಡರ ಮತ್ತಿತರರು ಉಪಸ್ಥಿತರಿದ್ದರು