ನೀರಿಲ್ಲದೇ ಮನುಷ್ಯನ ಜೀವನ ಅಪೂರ್ಣ: ಅಲ್ಲಮಪ್ರಭು ಶ್ರೀಗಳು
ಅಂಕಲಿಯಲ್ಲಿ ಜಲಜೀವನ ಮಿಷನ್ನ ಎರಡನೇ ಹಂತದ ಕಾಮಗಾರಿಗೆ ಚಾಲನೆ
ಮಾಂಜರಿ 31: ನೀರು ಜೀವನ. ನೀರು ಆಹಾರಕ್ಕಿಂತ ಮುಖ್ಯ. ನೀರಿಲ್ಲದೇ ಮನುಷ್ಯನ ಜೀವನ ಅಪೂರ್ಣ ಎಂದು ಚಿಂಚಣಿಯ ಸಿದ್ಧ ಸಂಸ್ಥಾನ ಮಠದ ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆ ಅಡಿ, ಪ್ರತಿ ಮನೆ-ಮನೆಗೆ ಶುದ್ಧ ನೀರು ಪೂರೈಸುವ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಿ, ಕಾರ್ಯಕ್ರಮದ ಸಾನಿಧ್ಯ ವಹಿಸಿ, ಮಾತನಾಡುತ್ತಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯ ಲಾಭವನ್ನು ಅಂಕಲಿ ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯ ಅಧ್ಯಕ್ಷ ಮಲ್ಲಿಕಾಜರ್ುನ ಕೋರೆ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಸುಮಂಗಲೆಯರು ಕೃಷ್ಣಾ ನದಿಯಿಂದ ಮಂಗಲ ಕಲಶದೊಂದಿಗೆ ಮೆರವಣಿಗೆಯ ಮುಖಾಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಪಾಟೀಲ ಹಾಗೂ ಅವರ ಪತಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಪಾಟೀಲ ಪೂಜಾ ವಿಧಿಗಳನ್ನು ನೆರವೇರಿಸಿದರು. ಶ್ರೀಗಳು ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.
ಸುರೇಶ್ ಪಾಟೀಲ್ ಮಾತನಾಡಿ, ಅಂಕಲಿ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ಹರ್ ಘರ್ ಜಲ, ಜಲಜೀವನ ಮಿಷನ್ ಅಡಿಯ ಎರಡನೇ ಹಂತದ ಕಾಮಗಾರಿ ಜಾರಿಗೊಳಿಸಲಾಗುತ್ತಿದ್ದು, ಇದರಲ್ಲಿ ಐದು ಕಿಲೋಮೀಟರ್ ಪೈಪ್ಲೈನ್, ಒಂದು ಲಕ್ಷ ಲೀಟರ್ ಓವರ್ಹೆಡ್ ಟ್ಯಾಂಕ್, 50 ಸಾವಿರ ಲೀಟರ್ ಟ್ಯಾಂಕ್, ಹಳೆ ಪೈಪ್ಲೈನ್ ತೆಗೆದು ಹೊಸ ಪೈಪ್ ಅಳವಡಿಕೆ ಸೇರಿ, ಪ್ರತಿ ಮನೆ-ಮನೆಗೂ ಶುದ್ಧೀಕರಿಸಿದ ನೀರು ಸರಬರಾಜು ಮಾಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಣ್ಣಪ್ಪಾ ಹರಕೆ, ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪಾಟೀಲ್, ವಿಕಾಸ್ ಪಾಟೀಲ್, ವಿವೇಕ ಕಮತೆ, ಅಜೀತ್ ಉಮ್ರಾಣಿ, ಚಿದಾನಂದ ಕುರೆ, ಅಲ್ಲಾಭಕ್ಷ ಪಟ್ವೇಗಾರ್, ಶೀಲಾ ಹಲವಾಯಿ, ಸಂತೋಶಿ ಬುಬನಾಳೆ, ಅನುಸೂಯಾ ಮಾನೆ, ಲತಾ ಬುಬನಾಳೆ, ಜಯಶ್ರೀ ಕೋಳಿ, ಸಂಜು ಚೌಧರಿ, ಪಾಪು ಕಿಲಿಕತ್, ಪಿಡಿಓ ವಿನೋದ್ ಅಸೋದೆ, ಕಾರ್ಯದಶರ್ಿ ಪದ್ಮಣ್ಣಾ ಕುಂಬಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಫೋಟೋ 31ಮಾಂಜರಿ1
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಜಲಜೀವನ ಮಿಷನ್ 2ನೇ ಹಂತದ ಕಾಮಗಾರಿ ಪ್ರಾರಂಭಿಸುವಾಗ ಸುರೇಶ್ ಪಾಟೀಲ್ ಶೈಲಜಾ ಪಾಟೀಲ್ ವಿಕಾಸ್ ಪಾಟೀಲ್ ಅಲ್ಲಮಪ್ರಭು ಸ್ವಾಮೀಜಿಗಳು ಹಾಗೂ ಇನ್ನಿತರರ