ಮಾನವ ಜೀವಿಗಳು ಧರ್ಮವಂತರಾಗಿ ಬಾಳಬೇಕು: ಹೊನ್ನಾಳಿ ಶ್ರೀಗಳು
ರಾಣೇಬೆನ್ನೂರಲ್ಲಿ ಶ್ರೀ ಗುರು ಕುಮಾರೇಶ್ವರರ ಮಹಾಪುರಾಣ
ರಾಣೇಬೆನ್ನೂರು 07: ಎಲ್ಲ ಜೀವಿಗಳಲ್ಲಿ ಮಾನವ ಜೀವಿ ಅತ್ಯಂತ ಶ್ರೇಷ್ಠತಮವಾಗಿದೆ. ಬದುಕಿ ಬಾಳುವ ಪ್ರತಿಯೊಬ್ಬರೂ, ಮಾನವೀಯ ಧರ್ಮಗಳನ್ನು ಅಳವಡಿಸಿಕೊಂಡು, ಬದುಕನ್ನು ಸಮರ್ಥವಾಗಿ ಎದುರಿಸಿ, ಬಾಳಲು ಮುಂದಾಗಬೇಕು ಅದುವೇ ನಿಜವಾದ ಮಾನವ ಧರ್ಮವಾಗಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ: ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಅವರು, ನಗರದ ದೊಡ್ಡಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ಸಭಾಭವನದಲ್ಲಿ, ಶ್ರೀ ಗಾನಯೋಗಿ ಸಾಂಸ್ಕೃತಿಕ ಕಲಾ ಸಂಸ್ಥೆ ಮತ್ತು ಶ್ರೀ ಗುರು ಪುಟ್ಟರಾಜ ಗವಾಯಿಗಳ ಸಂಗೀತ ಪಾಠಶಾಲೆಯು,ಜಯಂತೋತ್ಸವ ಹಾಗೂ ಸಂಗೀತೋತ್ಸವಮತ್ತು ಕುಮಾರ ಶ್ರೀಗಳ ಪುರಾಣ ಪ್ರವಚನ ನಿಮಿತ್ತ ಆಯೋಜಿಸಿದ್ದ, ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಕುಮಾರೇಶ್ವರರು, ತಮ್ಮ ಜೀವನದ ಬದುಕಿನದ್ದಕ್ಕೂ ವೀರಶೈವ ಧರ್ಮ ಸ್ಥಾಪನೆಗಾಗಿ, ನಾಡಿನಾದ್ಯಂತ ಸಂಚರಿಸಿ, ಶಿವಯೋಗ ಮಂದಿರವನ್ನು ಸ್ಥಾಪಿಸಿ, ಸಮಾಜದ ಒಗ್ಗಟ್ಟಿಗೆ ಶ್ರಮಿಸಿದ ಮಹಾನ್ ದೈವಿ ಪುರುಷರಾಗಿದ್ದರು. ಅಂತವರ ಪುರಾಣ ಪ್ರವಚನ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು. ದಿವ್ಯ ನೇತ್ರತ್ವದಲ್ಲಿದ್ದ ಪುಟ್ಟಯ್ಯನ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮಿಗಳವರು, ಸಂಸ್ಕೃತಿ ಸಂಸ್ಕಾರ ಭಾರತೀಯರ ಅವಿಭಾಜ್ಯ ಅಂಗ. ಪರಂಪರೆಗೆ ಎಂದಿಗೂ ಅಂತ್ಯವಿಲ್ಲ, ನಿತ್ಯವೂ ಆರಂಭವೇ. ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು ಅಂತಹ ಮಹತ್ವದ ಸೇವೆಯನ್ನು ಸಮಾಜಕ್ಕೆ ನೀಡಿ, ದಾರೀದೀಪವಾಗಿದ್ದಾರೆ ಎಂದರು.ಪ್ರಾಸ್ತಾನಿಕವಾಗಿ ಮಾತನಾಡಿದ, ಕಲಾ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಚಿಕ್ಕಮಠ ಅವರು, ಕಳೆದ ನಾಲ್ಕು ವರ್ಷಗಳಿಂದ ಸಂಸ್ಥೆಯ ಮೂಲಕ, ಅನೇಕ ಶರಣರ ಪುರಾಣ ಪ್ರವಚನ ಆಯೋಜಿಸುತ್ತಾ ಬಂದಿದ್ದೇವೆ. ಮಕ್ಕಳಿಗೆ ಸಂಗೀತ ಪಾಠದ ಮೂಲಕ, ಪಂಡಿತ್ ಪಂಚಾಕ್ಷರಿ, ಪಂ.ಪುಟ್ಟರಾಜ ಗವಾಯಿಗಳವರು ಅಳವಡಿಸಿಕೊಂಡಿದ್ದ ಸಂಗೀತ ಸಂಸ್ಕಾರವನ್ನು ನೀಡಲು ಮುಂದಾಗಿದ್ದೇವೆ ಎಂದರು. ಪ್ರವಚನವನ್ನು ಗದಗ ದೇವಗಿರಿ ಗಡ್ಡದ ಮಠದ ಪಂ: ಶ್ರೀ ಸಿದ್ದಲಿಂಗಯ್ಯ ಶಾಸ್ತ್ರಿಗಳು, ನಡೆಸಿದರು. ಕಲಾ ಪಾಠ ಶಾಲೆಯ ಮಕ್ಕಳು ಸಂಗೀತ ಸೇವೆ ಸಲ್ಲಿಸಿದರು.
ಪುರಾಣ ಪ್ರವಚನದಲ್ಲಿ, ಗಣ್ಯರಾದ ಅಜ್ಜಪ್ಪ ಜಂಬಿಗಿ, ಅಶೋಕ ಕುಮಾರ ನಾಯಕ್, ಪ್ರಭು ಸ್ವಾಮಿ ಕರ್ಜಿಗಿಮಠ, ಗೀತಾ ಹುಲ್ಲತ್ತಿ, ಸುವರ್ಣಮ್ಮ ಅಕ್ಕಿಮಠ, ಸೋಮನಾಥ ಹಿರೇಮಠ, ಜಿ.ಎನ್. ನೆಗಳೂರುಮಠ, ಅಮರೇಶ್ ಗವಾಯಿಗಳು, ಮೌನೇಶ ತ್ರಾಸದ, ಗುಡ್ಡಪ್ಪ ಹಿಂದಿನಮನಿ, ಶ್ರೀಮತಿ ಕಾವ್ಯ ಎಂ.ಚಿಕ್ಕಮಠ, ಸೇರಿದಂತೆ ಮತ್ತಿತರ ಗಣ್ಯರು, ದೊಡ್ಡಪೇಟೆಯ ನಾಗರಿಕರು, ದೇವಸ್ಥಾನ ಸಮಿತಿ ಸದಸ್ಯರು, ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಊ7-ಖಓಖ08-ನ್ಯೂಸ್. ಅಂಡ್. ಫೋಟೋ.