ಶಿಗ್ಗಾವ್

ಹುಲಗೂರ ಮಹಾಶಕ್ತಿ ಕೇಂದ್ರದ ಬೂತ ಮಟ್ಟದ ಕಾರ್ಯಕರ್ತರ ಸಭೆ

ಹುಲಗೂರ ಮಹಾಶಕ್ತಿ ಕೇಂದ್ರದ ಬೂತ ಮಟ್ಟದ ಕಾರ್ಯಕರ್ತರ ಸಭೆ

ಶಿಗ್ಗಾವಿ 08: ನನ್ನ ಮತದಾರರ ಆಶೀರ್ವಾದ ನನ್ನನ್ನ ಕೇಂದ್ರ ಮಂತ್ರಿಯನ್ನಾಗಿ ಮಾಡಿತು ಅದು ನಿಮ್ಮೇಲ್ಲರ ಮತದ ಆಶೀರ್ವಾದದಿಂದ ಅಗಿದೆ ಆ ಸಚಿವ ಸ್ಥಾನವನ್ನ ನಿಭಾಯಿಸುವ ಶಕ್ತಿಯನ್ನ ನೀಡಿದೆ ಎಂದು ಧಾರವಾಡ ಲೋಕಸಭಾ ಬಿಜೆಪಿ ಪ್ರಲ್ದಾದ್ ಜೋಷಿ ಹೇಳಿದರು. 

ತಾಲೂಕಿನ ಹುಲಗೂರ ಮಹಾಶಕ್ತಿ ಕೇಂದ್ರದ ಬೂತ ಮಟ್ಟದ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಆಶೀರ್ವಾದದಲ್ಲಿ ಅಂತಹ ಶಕ್ತಿ ಇದೆ, ನಿಮ್ಮ ಉಪಕಾರ ಬಹಳಷ್ಟಿದೆ, ನೀವು ಕೊಟ್ಟ ಅಧಿಕಾರವನ್ನ ಎಂದಿಗೂ ಸ್ವಂತಕ್ಕೆ ಉಪಯೋಗ ಮಾಡಿಲ್ಲ, ದೇಶದ ಹಾಗೂ ನನ್ನ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಉಪಯೋಗ ಮಾಡಿದ್ದೇನೆ, ನಮ್ಮ ಉತ್ತರ ಪತ್ರಿಕೆ ನಿಮ್ಮ ಕೈಯಲ್ಲಿದೆ ಮಾರ್ಕ್ಸ್‌ ಹಾಕೋದು ನಿಮ್ಮ ಕೈಯಲ್ಲಿದೆ, ಗ್ಯಾರಂಟಿ ಭರಾಟೆ ಬಹಳಷ್ಟು ದಿನ ನಡೆಯೋಲ್ಲ ಅದರಲ್ಲಿ ಜನರ ಅಭಿವೃದ್ದಿಯಲ್ಲಿ ಮೋದಿಯವರೇ ದೇಶದ ಗ್ಯಾರಂಟಿ, ವ್ಯಾಕ್ಸಿನ್ ಕೊಟ್ಟು, ದೇಶವನ್ನ ಸುರಕ್ಷಿತವಾಗಿಟ್ಟ ಪ್ರಧಾನಿ ಮೋದಿಯವರ ಕೈ ಬಲಪಡಿಸಬೇಕಿದೆ, ಚುನಾವಣೆ ಮುಗಿದ ಮೇಲೆ ಗ್ಯಾರಂಟಿಗಳು ಬಂದ್ ಆಗುತ್ತವೆ ಎಂದು ಭವಿಷ್ಯ ನುಡಿದ ಅವರು, ಕೇವಲ 10 ವರ್ಷದಲ್ಲಿ ಕಡಿತವಿಲ್ಲದೆ 24 ತಾಸು ವಿದ್ಯುತ್ ನೀಡಲಾಗುತ್ತದೆ, ಬೊಮ್ಮಾಯಿಯವರು ಮತ್ತು ನಾನು 410 ಕೋಟಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನ ನದಿಗಳ ಮೂಲಕ ಕೊಡಲಾಗಿದೆ, ದೇಶದ ಋಓ.ಆ.ಋ (ಇಂಡಿ) ಈಗ ಗಂಟಿಯಾಗಿದೆ, ಅಭಿವೃದ್ದಿ ಹೊಂದಿದ ದೇಶವನ್ನಾಗಿ ಮಾಡುವುದೇ ಮೋದಿಯವರ ಗುರಿ, ಪಾಕಿಸ್ಥಾನಕ್ಕೆ ಜಿಂದಾಬಾದ್ ಅನ್ನೋರನ್ನ ಬ್ರದರ್ಸ್‌ ಎಂದು ಕಾಂಗ್ರೇಸ್ ನವರು ಕರೆಯುತ್ತಾರೆ, ಇವರ ಮನಸ್ಥಿತಿ ದೇಶದ ಸುರಕ್ಷತೆ ಇಲ್ಲದವರದ್ದಾಗಿದೆ ಎಂದು ಕಾಂಗ್ರೇಸ್ ಪಕ್ಷದವರ ವಿರುದ್ದ ಹರಿಹಾಯ್ದರು. 

ಮುಖಂಡ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ವಿಶ್ವಖಂಡ ಧೀಮಂತ ನಾಯಕ ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನ ವಿಶ್ವವೇ ಒಪ್ಪಿಕೊಂಡಿದೆ, ಮೋದಿಯವರು ರಾಮನಿದ್ದಂತೆ ಅವರಿಗೆ ಹನುಮಂತನಾಗಿ ನಮ್ಮ ಅಭ್ಯರ್ಥಿ ಪ್ರಲ್ದಾದ್ ಜೋಷಿಯವರು ಕೆಲಸ ಮಾಡುತ್ತಿದ್ದಾರೆ ಮತ್ತೆ ಅವರು ದೇಶದ ಸೇವೆ ಮಾಡಲು ಮೊದಿಯವರ ಕೈ ಬಲ ಪಡಿಸಲು ಜೋಷಿಯವರನ್ನ ಗೆಲ್ಲಿಸೋಣ ಕ್ಷೇತ್ರದಲ್ಲಿಯೂ ಹೆಚ್ಚಿನ ಅಭಿವೃದ್ದಿ ಮಾಡಲು ಜೋಷಿಯವರನ್ನ ಮತ್ತೆ ಕೈ ಬಲ ಪಡಿಸೊಣ ಎಂದರು. 

ಶಶಿಧರ ಯಲಿಗಾರ ಮಾತನಾಡಿ, ಗ್ಯಾರಂಟಿಗಳಿಗೆ ಮಾರುಹೋಗಬಾರದು ಮೋದಿಯವರೇ ನಮಗೆ ಗ್ಯಾರಂಟಿಯಾಗಿದ್ದು ದೇಶದ ಭದ್ರತೆಗೆ ಜೋಷಿಯವರ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಹಿರಿಯ ಬಿಜೆಪಿ ಮುಖಂಡ ಬಿ ಟಿ ಇನಾಮತಿ, ರಾಜ್ಯ ದಲಿತ ಮುಖಂಡ ಡಿ ಎಸ್ ಮಾಳಗಿ ಹಾಗೂ ಬಿಜೆಪಿ ಶಿಗ್ಗಾವಿ ತಾಲೂಕಾದ್ಯಕ್ಷ ಶಿವಾನಂದ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಶಿವಪ್ರಸಾದ ಸುರಗೀಮಠ, ನರಹರಿ ಕಟ್ಟಿ, ಶೋಭಾ ನಿಸ್ಸಿಮಗೌಡ್ರ,  ಗಂಗಣ್ಣ ಸಾತಣ್ಣವರ, ಅರ್ಜುನ ಹಂಚಿನಮನಿ, ಡಾ .ಮಲ್ಲೇಶಪ್ಪ ಹರಿಜನ, ಕರೆಯಪ್ಪ ಕಟ್ಟಿಮನಿ, ಶಿವಾನಂದ ಸೊಬರದ, ಮಲ್ಲಿಕಾರ್ಜುನ ಹಡಪದ, ರೇಣುಕನಗೌಡ ಪಾಟೀಲ ಸೇರಿದಂತೆ ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು. 


ಸುದ್ದಿ ಓದಿ