ಬೈಲಹೊಂಗಲ

ಜೂನ 30 ರಂದು ಬೃಹತ್ ಉದ್ಯೋಗ ಮೇಳ

ಜೂನ 30 ರಂದು ಬೃಹತ್ ಉದ್ಯೋಗ ಮೇಳ

 10 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ: ಮಹಾಂತೇಶ ತುರಮರಿ ಹೇಳಿಕೆ 

ಬೈಲಹೊಂಗಲ 16: ಪಟ್ಟಣದ ಬಾಯಪಾಸ್ ರಸ್ತೆಯ ವೀರಭದ್ರೇಶ್ವರ ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ ಎಸ್‌.ಎನ್‌.ವ್ಹಿ.ವ್ಹಿ.ಎಸ್‌.ಶಿಕ್ಷಣ ಸಂಸ್ಥೆಯ ಐಟಿಐ ಕಾಲೇಜು ಆವರಣದಲ್ಲಿ ಜೂನ 30 ರಂದು ಮುಂಜಾನೆ 9 ರಿಂದ ಸಂಜೆ 5.30 ವರೆಗೆ  ಬೃಹತ್ ಉದ್ಯೋಗ ಮೇಳವನ್ನು ನಡೆಸಲಾಗುತ್ತಿದೆ ಎಂದು ಕರ್ನಾಟಕ ನವ ನಿರ್ಮಾಣ ಪಡೆಯ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ತುರಮರಿ ಹೇಳಿದರು. 

ಮಹಾಂತೇಶ ತುರಮರಿ ಹಾಗೂ ಸಾಮಾಜಿಕ ಕಾರ್ಯಕರ್ತ ವಿಜಯ ಚೆನ್ನನ್ನವರ ಸಾರಥ್ಯದಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ ನಿಮಿತ್ತ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಉತ್ತರ ಕರ್ನಾಟಕದ ವಿದ್ಯಾವಂತ ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಯಶಸ್ವಿ ಕೇರಿಯರ ಅಕಾಡೆಮಿ ಟ್ರೇನಿಂಗ್ ಮತ್ತು ಪ್ಲೇಸಮೆಂಟ್ ಸರ್ವಿಸಸ್ ಪೈ.ಲಿ. ಬೆಂಗಳೂರಿನ ಇವರ ಆಶ್ರಯದಲ್ಲಿ ಬೃಹತ್ ಉದ್ಯೋಗಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗ ಮೇಳದಲ್ಲಿ ರಾಷ್ರ್ಟ ಮತ್ತು ಅಂತರಾಷ್ರ್ಟೀಯ 150 ಕ್ಕೂ ಹೆಚ್ಚು ಹೆಸರಾಂತ ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿವೆ ಎಂದರು. 

ಎಸ್‌.ಎಸ್‌.ಎಲ್‌.ಸಿ., ಪಿಯುಸಿ, ಪಧವೀಧರರು ಐಟಿಐ, ಡಿಪ್ಲೋಮಾ, ಇಂಜನೀಯಂರಿಂಗ ಮತ್ತು ಅನುಭವ ಇಲ್ಲದ ನಿರುದ್ಯೋಗಿಗಳಿಗೂ,  ನುರಿತ ಕಾರ್ಮಿಕರಿಗೂ ಹೆಸರಾಂತ ಕಂಪನಿಗಳಲ್ಲಿ ಉದ್ಯೋಗಗಳನ್ನು ನೇರ ಸಂದರ್ಶನ ಮುಖಾಂತರ ಕಲ್ಪಿಸಿಕೊಡಲಾಗವುದೆಂದು ಮಹಾಂತೇಶ ತುರಮರಿ ಹೇಳಿದರು. 

ಉದ್ಯೋಗ ಮೇಳದಲ್ಲಿ ಭಾಗವಹಿಸುವ ಉದ್ಯೋಗಾಕಾಂಕ್ಷಿಗಳು ತಮ್ಮ ಶೈಕ್ಷಣೀಕ ಪ್ರಮಾಣ ಪತ್ರಗಳು, ಬಯೋಡೆಟಾ, ಎರಡು ಭಾವಚಿತ್ರಗಳು, ಆಧಾರ ಮತ್ತು ಪ್ಯಾನ ಕಾರ್ಡ ಝರಾಕ್ಸ ಪ್ರತಿಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು. ಉದ್ಯೋಗಮೇಳದಲ್ಲಿ ಭಾಗವಹಿಸುವವರಿಗೆ ಪ್ರವೇಶ ಶುಲ್ಕವಿರುವದಿಲ್ಲ. ಯಾವುದೇ ಹಣಕಾಸಿನ ವ್ಯವಹಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ  ಅವರು ಯುವಕ, ಯುವತಿಯರು ಉದ್ಯೋಗಮೇಳದಲ್ಲಿ ಭಾಗವಹಿಸಿ ವಿವಿಧ ಕಂಪನಿಗಳ ಅಧಿಕಾರಿಗಳೊಂದಿಗೆ ನೇರ ಸಂದರ್ಶನ ಮುಖಾಂತರ ಉದ್ಯೋಗಗಳನ್ನು ಪಡೆಯುವ ಅವಕಾಶವನ್ನು ಕಲ್ಪಸಿಕೊಡಲಾಗುತ್ತಿದೆ ಎಂದರು. 

ಭಾಗವಹಿಸುವ ಉದ್ಯೋಗಾಕಾಂಕ್ಷಿಗಳಿಗೆ ಅವರವರ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಸಂದರ್ಶನದ ಕೊಠಡಿಗಳನ್ನು ಏರಿ​‍್ಡಸಲಾಗಿದೆ. ಇದಕ್ಕಾಗಿ ಸ್ವಯಂ ಸೇವಕರು, ಸ್ಕೌಟ್ಸ ಮತ್ತು ಗೈಡ್ಸ  ಹಾಗೂ ಐಟಿಐ ಕಾಲೇಜಿನ ಪ್ರಾಚಾರ್ಯ ಆರ್‌.ಎ.ಅರಭಾಂವಿ ಮತ್ತು  ಸಿಬ್ಬಂದಿ ಈ ಸೇವಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದರು.  

ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಯಶಸ್ವಿ ಕೇರಿಯರ ಆಕಾಡೆಮಿಯ ಪ್ರಧಾನ ವ್ಯವಸ್ಥಾಪಕ  ಶಿವಪ್ರಸಾದ ಚೆನ್ನನ್ನವರ ಮಾತನಾಡಿ, ಈ ಉದ್ಯೋಗಮೇಳದಲ್ಲಿ ಸುಮಾರು 150 ಕ್ಕೂ ಹೆಚ್ಚು ಹೆಸರಾಂತ ಕಂಪನಿಗಳನ್ನು ಕರೆತರುವ ಜವಾಬ್ದಾರಿಯನ್ನು ಹೊತ್ತಿರುವುದಾಗಿ ತಿಳಿಸಿದರು.  

 ಈ ಬೃಹತ್ ಉದ್ಯೋಗಮೇಳದ ಲಾಭವನ್ನು  ಉತ್ತರ ಕರ್ನಾಟಕದ ವಿದ್ಯಾವಂತ ನಿರುದ್ಯೋಗ ಯುವಕ, ಯುವತಿಯರು ಪಡೆದುಕೊಳ್ಳಬೇಕೆಂದು ಮಹಾಂತೇಶ ತುರಮರಿ ಮತ್ತು ವಿಜಯ ಚೆನ್ನನ್ನವರ ಜಂಟಿ ಹೇಳಿಕೆ ನೀಡಿ ಮನವಿ ಮಾಡಿಕೊಂಡರು. 


ಸುದ್ದಿ ಓದಿ