ಅಪಾರ ಪ್ರಮಾಣದ ಮಳೆ :ಲಿಂಗದಹಳ್ಳಿ ಸೇತುವೆ ಮೇಲೆ ನೀರು : ನೂರಾರು ಎಕರೆ ಜಲಾವೃತ. ರಕ್ಷಣೆಗೆ ಕ್ರಮ
ರಾಣೇಬೆನ್ನೂರು 21: ಜಿಲ್ಲೆಯು ಸೇರಿದಂತೆ ತಾಲೂಕಿ, ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ, ಸಂಚರಿಸುವ ತುಂಗಭದ್ರಾ ಮತ್ತು ಕುಮದ್ವತಿ ನದಿಗಳಿಗೆ ಸಂಬಂಧಿಸಿದಂತೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ, ಆ ಭಾಗದ ನೂರಾರು ಎಕರೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದಾಗಿ, ಲಿಂಗದಳ್ಳಿ ಗ್ರಾಮಸ್ಥರು ದೊರಿದ್ದಾರೆ.
ಲಿಂಗದಹಳ್ಳಿ ಸೇತುವೆ ಹಿನ್ನಿರಿನಿಂದ ಸೇತುವೆ ಮೇಲೆ ಹರಿಯುತ್ತಿದ್ದು, ಜನ ಸಂಚಾರಕ್ಕೆ ಆತಂಕ ಉಂಟಾಗಿದೆ ಎಂದು ಅಲ್ಲಿನ ನಾಗರಿಕರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಶನಿವಾರವಷ್ಟೇ, ಗ್ರಾಮದ ಸೇತುವೆಗೆ ಭೇಟಿ ನೀಡಿದ ಶಾಸಕ, ಆನೆಗೊಂಡಿರುವ ಬೆಳೆಗಳಿಗೆ, ಪರಿಹಾರ ದೊರದೆ ಅದಕ್ಕಾಗಿ ಸೂಕ್ತ ಕ್ರಮಕ್ಕೆ ಸೂಚಿಸಿರುವದಾಗಿ ಭರವಸೆ ನೀಡಿದ್ದಾರೆ ಎಂದು ರೈತರು ಹೇಳಿದ್ದಾರೆ. ಸೇತುವೆ ಮುಳುಗಿದ್ದರಿಂದ ಬರದಿಂದ ಬರುತ್ತಿರುವ ನೀರಿನ ಪ್ರಮಾಣ ಅಧಿಕವಾಗಿದ್ದು, ಲಿಂಗದಹಳ್ಳಿ ಕ್ಷೇತ್ರದ ಪ್ರದೇಶದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿದ್ದರಿಂದ, ಬೆಳೆದು ನಿಂತಿರುವ ಸೇವಂತಿಗೆ ಹೂ, ಕಬ್ಬು, ಟೊಮೇಟೊ ತರಕಾರಿ ಸೊಪ್ಪು ಮತ್ತಿತರ ಬೆಳೆಗಳು ನೀರಲ್ಲಿ ನಿಂತು, ಕೊಳೆಯುತ್ತಿರುವುದನ್ನು ಕಣ್ಣಾರೆ ಕಾಣುವಂತಾಗಿದೆ ಎನ್ನುತ್ತಾರೆ ರೈತ ಮಹೇಶ್ ಹೊಸಳ್ಳಿ. ನೂರಾರು ಎಕರೆಗಳಲ್ಲಿ ನೀರು ನುಗ್ಗಿದ್ದರಿಂದ, ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತಾಗಿದೆ.
ಇದಕ್ಕೆ, ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಪರೀಶೀಲಿಸಿ , ಬಡ ರೈತ ಸಮುದಾಯದ ನೆರವಿಗೆ ಬರಬೇಕು. ಮತ್ತು ಅವರಿಗೆ ಸೂಕ್ತ ಪರಿಹಾರ ದೊರೆತಾಗ ಮಾತ್ರ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ ಎನ್ನುತ್ತಾರೆ. ಕುಪ್ಪೇಲೂರ್ ಬಳಿ ಸೇತುವೆ ಮೇಲೆ ನೀರು ನುಗ್ಗಿದೆ ಇದರಿಂದ ತಾತ್ಕಾಲಿಕವಾಗಿ ಆಗೋಷಿತ ರಸ್ತೆ ಸಂಚಾರ ಸ್ಥಗಿತವಾದಂತಾಗಿದೆ, ಲಿಂಗದಹಳ್ಳಿ ಗ್ರಾಮ ತಲುಪಲು ಬೇರೆ ಬೇರೆ ಭಾಗಗಳಿಂದ ಸಂಚರಿಸಬೇಕಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ನಿನ್ನೆ ಭೇಟಿ ನೀಡಿದ ಶಾಸಕರು, ಪ್ರಕಾಶ್ ಕೋಳಿವಾಡ ಅವರು ನೀರು ನುಗ್ಗಿರುವ ತಾವು ನುಗ್ಗುತ್ತಿರುವ ನದಿ ಪಾತ್ರದ ಪ್ರದೇಶಗಳಲ್ಲಿ ಯಾವುದೇ ಜನಜನವಾರುಗಳು ಪ್ರಾಣ ಹಾನಿಯಾಗದಂತೆ ಗ್ರಾಮೀಣ ನಾಗರಿಕರು ಅತ್ಯಂತ ಎಚ್ಚರಿಕೆ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.ಊ21-ಖಓಖ02-ಓಇಘಖ. ಂಓಆ. ಕಊಓಖಿಓ.