ಅಮರನಾಥ ದರ್ಶನ ಪಡೆದ 15 ಜನರ ಹುಬ್ಬಳ್ಳಿ ತಂಡ
ಹುಬ್ಬಳ್ಳಿ,31: ಭಾರತದ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾದಂತಹ ಅಮರನಾಥ ದರ್ಶನ ಪಡೆಯುವುದು ನಮ್ಮ ಪೂರ್ವಜನ್ಮದ ಪುಣ್ಯವೇ ಎನ್ನುವದು ನಮಗೆಲ್ಲ ತಿಳಿದ ವಿಚಾರ.
ಅಮರನಾಥ ಗುಹೆಗೆ ತೆರಳಿ ಶಿವನ ದರ್ಶನ ಪಡೆಯುವುದು ಅಲ್ಲಿಯವರೆಗೆ ತಲುಪುವ ಮಾರ್ಗ ಅತ್ಯಂತ ಕಷ್ಟಕರವಾದದ್ದು ಹಾದಿ ಯುದ್ದಕ್ಕೂ ಯಾತ್ರಾರ್ತಿಗಳಿಗೆ ಅನೇಕ ಸೌಕರ್ಯ ಒದಗಿಸುವ ಜೊತೆಗೆ ಯಾತ್ರಾರ್ತಿಗಳ ರಕ್ಷಣೆಗೆಂದೆ ನಮ್ಮ ಭಾರತೀಯ ಸೈನ್ಯ ಸದಾ ಬೆಂಗಾವಲಾಗಿ ರಕ್ಷಣೆ ನೀಡುವ ಮೂಲಕ ನಮ್ಮ ಕೇಂದ್ರ ಸರ್ಕಾರವು ಯಾತ್ರೆಯ ಹಾದಿಯನ್ನ ಸುಗಮಗೊಳಿಸಿದೆ ಹಾಗೂ ಅನೇಕ ಸಂಘ ಸಂಸ್ಥೆಗಳ ಸಮಾಜದ ವಿವಿಧ ಜನರ ತಂಡಗಳು ಪ್ರತಿ ಹಾದಿ ಯುದ್ದಕ್ಕೂ ಭೋಜನ ಹಾಗೂ ವಸತಿಗಾಗಿ ವಿಶೇಷ ವ್ಯವಸ್ಥೆ ಮಾಡಿ ಯಾತ್ರಾತಿಗಳ ಸೇವೆಯೇ ನಮ್ಮ ಸೌಭಾಗ್ಯ ಎನ್ನುವ ರೀತಿಯಲ್ಲಿ ಈ ಅಮರನಾಥ ಯಾತ್ರೆ ಯುದ್ದಕ್ಕೂ ನಮಗೆ ಕಂಡುಬರುವ ದೃಶ್ಯ ಎಂದು ಹುಬ್ಬಳ್ಳಿಯಿಂದ ತೆರಳಿದ 15 ಜನರ ತಂಡದ ಸದಸ್ಯ ಶ್ರೀಧರ ಭಂಡಾರೆ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಜು.15 2024 ರಂದು ಹುಬ್ಬಳ್ಳಿಯಿಂದ ಹೊರಟು ಅಮರನಾಥ ಮತ್ತು ವೈಷ್ಣೋದೇವಿ ದರ್ಶನ ಪಡೆದು ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ಜು.30 2024 ರಂದು ಹುಬ್ಬಳ್ಳಿಗೆ ಬಂದಿದ್ದೇವೆ ಯಾತ್ರೆಯಲ್ಲಿ ಪಾಲ್ಗೊಂಡವರ ವಿವರ ವಿನಾಯಕ ಪೂಜಾರಿ, ಶ್ರೀಧರ ಭಂಡಾರೆ, ಗೋಪಾಲ ಖೋಡೆ, ಪ್ರವಿಣ ಕಬಾಡೆ, ಪ್ರೀತಿ ಕಬಾಡೆ, ಗೋವಿಂದ ರತನ, ವಜ್ರೇಶ್ವರಿ ರತನ, ತುಳಜಪ್ಪಾ, ನಿರಂಜನ, ಧನಶ್ರೀ ನಿರಂಜನ, ಅಶೋಕ ಕಲಬುರ್ಗಿ, ರತ್ನಾಬಾಯಿ ಕಲಬುರ್ಗಿ, ಪರಶುರಾಮ ಹಬೀಬ, ಶಿಲ್ಪಾ ಹಬೀಬ, ಮೇಘರಾಜ ಚವ್ಹಾಣ, ರಾಜೇಶ್ವರಿ ಚವ್ಹಾಣ.ಜೈ ರಾಮಕೃಷ್ಣ.