ಮಳೆಗೆ ಮನೆ ಕುಸಿತ: ಸಹಾಯ ಹಸ್ತ ಚಾಚಿದ ಸಂಜೀವಕುಮಾರ
ಶಿಗ್ಗಾವಿ 18: ತಾಲೂಕಿನ ಕುನ್ನೂರ ಗ್ರಾಮದಲ್ಲಿ ಅತಿಯಾದ ಮಳೆಯಿಂದ ಮಾದೇವಿ ಓಲೇಕಾರ ಎನ್ನುವವರ ಮನೆ ಬಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿತ್ತು. ಸುದ್ದಿಯನ್ನು ತಿಳಿದು ಜಿಲ್ಲಾ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಹಾವೇರಿ ಜಿಲ್ಲಾಧಿಕಾರಿ ಅವರಿಗೆ ಫೋನ್ ಮಾಡಿ ಸರಕಾರದಿಂದ ಸಿಗುವ ಎಲ್ಲ ಪರಿಹಾರಗಳನ್ನು ನೀಡುವಂತೆ ಮನವಿ ಮಾಡಿದರು ನಂತರ ಸಹಾಯ ರೂಪದಲ್ಲಿ ಹಣವನ್ನು ನೀಡಿದರು.