ಬೈಕ್ ಸವಾರನ ಭೀಕರ ಕೊಲೆ
ಲೋಕದರ್ಶನ ವರದಿ
ಕಾಗವಾಡ 04: ರಾತ್ರಿ ವೇಳೆ ಬೈಕ್ ಮೇಲೆ ತೆರಳುತ್ತಿದ್ದಾಗ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಪ್ರಕರಣ ಕಾಗವಾಡ ತಾಲೂಕಿನ ಐನಾಪುರ-ಕಾತ್ರಾಳ ಮಾರ್ಗ ಮದ್ಯದಲ್ಲಿ ನಡೆದಿದೆ.
ಕಾತ್ರಾಳ ಗ್ರಾಮದ ಚಿಂತಾಮಣಿ ಬಾಹುಸಾಹೇಬ ಬಂಡಗರ(26) ಕೊಲೆಯಾದ ವ್ಯಕ್ತಿ. ಐನಾಪುರ ಪಟ್ಟಣದಲ್ಲಿ ಕಳೆದ ಎರಡು ತಿಂಗಳುಗಳಿಂದ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದು ಎಂದಿನಂತೆ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಮೆಡಿಕಲ್ ಶಾಪ್ ಮುಚ್ಚಿಕೊಂಡು ಪಕ್ಕದ ಕಾತ್ರಾಳ ಗ್ರಾಮಕ್ಕೆ ತೆರಳುತ್ತಿರುವಾಗ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಹೋಗಿದ್ದಾರೆ.
ಕಳೆದ 8 ತಿಂಗಳುಗಳ ಹಿಂದೆ ವಿವಾಹವಾಗಿದ್ದ ಚಿಂತಾಮನಿ ಕೊಲೆಯಲ್ಲಿ ಅಂತ್ಯಗೊಂಡಿದ್ದಾರೆ. ಕೊಲೆಗೆ ಕಾರಣ ಗೊತ್ತಾಗಿಲ್ಲ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಮೃತನ ತಂದೆ ಬಾಹುಸಾಹೇಬ ಬಂಡಗರ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್.ಪಿ ಎಸ್,ವಿ,ಗೀರೀಶ, ಸಿಪಿಐ ಶಂಕರಗೌಡ ಬಸಗೌಡ ಪಿಎಎಸ್‌ಐ ಎಂ.ಬಿ.ರಬಕವಿ ಭೇಟ್ಟಿ ನೀಡಿ ತನಿಖೆ ನಡೆಸಿದ್ದಾರೆ.