ಶಿಗ್ಗಾವ್

ನೂತನ ನಾಮ ನಿರ್ದೇಶಕ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ

ನೂತನ ನಾಮ ನಿರ್ದೇಶಕ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ

ಶಿಗ್ಗಾವಿ 30 : ಪಟ್ಟಣದ ಪುರಸಭೆಯಲ್ಲಿ ಸರ್ಕಾರದ ಆದೇಶದ ಮೇರೆಗೆ ನೇಮಕಗೊಂಡಿರುವ ನೂತನ ನಾಮ ನಿರ್ದೇಶಕ ಸದಸ್ಯರುಗಳಿಗೆ ಪುರಸಭೆಯ ಮುಖ್ಯಾಧಿಕಾರಿ ರಂಜೀತ ಮುಗಳಿಯವರಿಂದ ಪ್ರಮಾಣವಚನ ಬೋಧನೆ ನಡೆಯಿತು. 

ಪುರಸಭೆಗೆ ನೂತನ ನಾಮ ನಿರ್ದೇಶಕ ಸದಸ್ಯರುಗಳಾಗಿ ಹೋರಾಟಗಾರ ಮಂಜುನಾಥ್ ಮಣ್ಣಣ್ಣವರ, ಮಾರುದ್ರ​‍್ಪ ಕೊಡ್ಲಿವಾಡ, ಪರವಿಜ ಅಹಮದ್ ಮುಲ್ಲಾ, ಸಾಧಿಕ್ ಮೊಘಲಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಸನ್ಮಾನ ಕಾರ್ಯಕ್ರಮ ನೇರವೇರಿತು. 

ಆಶ್ರಯ ಸಮಿತಿಯ ನಾಮ ನಿರ್ದೇಶಕ ಸದಸ್ಯರುಗಳಾಗಿ ಲಕ್ಷ್ಮಿ ಕಟ್ಟಿಮನಿ, ವಿಜಯ ಪಾಟೀಲ, ಜಲಾಲ ಹಾಗೂ ಮಾಲತೇಶ ಸಾಲಿಯವರು ಪ್ರಮಾಣವಚನ ಸ್ವೀಕರಿಸಿದರು. 

ಪುರಸಭೆ ಸದಸ್ಯರಾದ ಸುಭಾಷ ಚೌಹಾಣ, ಪರಶುರಾಮ್ ಸೊನ್ನದ, ಗೌಸ್ಕಾನ್ ಮುನಸಿ, ಜಾಫರಖಾನ ಪಠಾಣ, ಮುನ್ನಾ ಲಕ್ಷ್ಮೇಶ್ವರ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಸಿ ಪಾಟೀಲ್, ಮಾಜಿ ಬ್ಲಾಕ್ ಅಧ್ಯಕ್ಷ ಶಂಭು ಆಜೂರು, ಅಬ್ದುಲಕರೀಮ್ ಮೊಗಲಲ್ಲಿ, ಮುಕ್ತಿಯಾರ ತಿಮ್ಮಾಪುರ, ನ್ಯಾಯವಾದಿ ಬಸವರಾಜ ರಾಗಿ, ಬಿ ಎಸ್ ಪಾಟೀಲ, ರಶೀದ್ ಗೊಟಗೋಡಿ, ಗುಡ್ಡಪ್ಪ ಜಲದಿ, ಸುಲೇಮಾನ್ ಖಾಜಖಾನನವರ, ದೇವೇಂದ್ರ​‍್ಪ ಕೆರಕನವರ, ಮುನ್ನಾ ಬಿಸ್ತಿ, ಬೀಮಣ್ಣಾ ಹೊಟ್ಟುರ  ಸೇರಿದಂತೆ ಪುರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. 

ಸನ್ಮಾನ ಸ್ವೀಕರಿಸಿ ನೂತನ ನಾಮ ನಿರ್ದೇಶನ ಸದಸ್ಯ  ಮಂಜುನಾಥ ಮಣ್ಣಣ್ಣವರ್ ಮಾತನಾಡಿ ನಾಮ ನಿರ್ದೇಶನಕ್ಕೆ ಕಾರಣೀಭೂತರಾದ ಚುನಾವಣೆ ನಂತರ ತಕ್ಷಣವೇ ಕಾರ್ಯಕರ್ತರನ್ನು ಗುರುತಿಸಿ ಯುವ ನಾಯಕ ಯಾಸಿರಅಹ್ಮದ ಪಠಾಣ ಅವರಿಗೆ ಧನ್ಯವಾದ ತಿಳಿಸಿದರು ಹಾಗೂ ಹೈಕಮಾಂಡ್ 24ರ ಮತಕ್ಷೇತ್ರದ ಉಪಚುನಾವಣೆಯಲ್ಲಿ ಪಟಾಣ ಅವರು ಸ್ಪರ್ಧಿಸಲು ಮತ್ತೊಮ್ಮೆ ಅವಕಾಶ ಒದಗಿಸಬೇಕೆಂದು ಪಕ್ಷದ ಹೈಕಮಾಂಡ್ ನಾಯಕರುಗಳಿಗೆ ಮನವಿ ಮಾಡಿಕೊಂಡರು. 


ಸುದ್ದಿ ಓದಿ