ಪ್ರಾಮಾಣಿಕ, ನಿಸ್ವಾರ್ಥ ಮನೋಭಾವ ರಾಜಕಾರಣಿಗಳು ಸಿಗುವದು ಅಪರೂಪ: ಸಚಿವ ಆರ್.ಬಿ.ತಿಮ್ಮಾಪೂರ
ಜಮಖಂಡಿ 24: ಪ್ರಾಮಾಣಿಕ, ನಿಷ್ಠಾವಂತ, ಆಸೆ, ಆಮೀಷ, ನಿಸ್ವಾರ್ಥ ಮನೋಭಾವ ರಾಜಕಾರಣಿಗಳು ಸಿಗುವದು ಅಪರೂಪವಾಗಿದೆ. ಇಂದಿನ ದಿನಮಾನದಲ್ಲಿ ರಾಜಕಾರಣಿ ಎಂಬುವದು ಬಿಜ್ನೇಸ್ ಆಗಿದೆ ಎಂದು ಜಿಲ್ಲಾ ಉಸ್ತುವಾರಿ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ನಗರದ ರುದ್ರಾವಧೂತರ 93ನೇ ಪುಣ್ಯಾರಾಧನೆ ಹಾಗೂ 38ನೇ ವೇದಾಂತ ಪರಿಷತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜಕಾರಣಿಯು ಬಹಳ ಕಲುಷಿತವಾಗಿದೆ. ಡಾ,ಅಂಬೇಡ್ಕ್ರ ಅವರು ದುಡಿಯುವ ವ್ಯಕ್ತಿಗೂ, ವಿಮಾನದಲ್ಲಿ ಪ್ರಯಾಣಿಸುವ ವ್ಯಕ್ತಿಗೂ ಒಂದೇ ಓಟ್ನ್ನು ನೀಡಿದ್ದಾರೆ. ಮತದಾನ ಮಾಡುವ ಸಮಯದಲ್ಲಿ ಜಾಗೃತರಾಗಿ ಮತದಾನ ಮಾಡಬೇಕು. ಮತದಾನದ ಬಗ್ಗೆ ಜನರಲ್ಲಿ ಅರಿಯು ಮುಡಿಸಬೇಕಾಗಿದೆ ಎಂದರು.
ದಲಿತ ಸಮಾಜದ ಕೇರಿಯಲ್ಲಿ ದುರ್ಗಾದೇವಿ ಜಾತ್ರೆಯನ್ನು ಮಾಡುವದು ಅಷ್ಟೇಕ್ಕೆ ಸಿಮೀತವಾಗಿತ್ತು. ಸಮಾಜ ಆದರೆ ದಲಿತ ಕೇರಿಯಲ್ಲಿ ವೇದಾಂತ ಪರಿಷತ್ ನಡೆಯುತ್ತಿರುವದು ಶ್ಲಾಘನೀವಾಗಿದೆ. ಧರ್ಮ ಜಾತಿ ಆಧಾರದ ಮೇಲೆ ಬದುಕು ಎಂಬುವದು ದುರದುಷ್ಠಕರವಾಗಿದೆ. ಮನುಷ್ಯರನ್ನು ಮನುಷ್ಯರೆ ಕಾಡುವ ಧರ್ಮವಾಗಿದೆ. ದೇವರು, ಧರ್ಮ ಎಂಬುವದು ಬಹಳ ಪವಿತ್ರವಾಗಿದ್ದು. ಮನುಸ್ಸನ್ನು ಬಹಳ ಹಿಡಿತದಲ್ಲಿ ಇಟ್ಟುಕೊಂಡು. ಜಾತಿ, ಮತಗಳನ್ನು ಮರೆತು ಬಾಳಿದರೆ ಮಾತ್ರ ಧರ್ಮ ಉಳಿಯಲು ಸಾಧ್ಯ. ಧರ್ಮದ ಕುರಿತು ಸ್ವಾಮಿವಿವೇಕಾನಂದರು ಬಹಳ ಸುಂದರವಾಗಿ ತಿಳಿಸಿದ್ದಾರೆ. ಆದರೆ ಅದನ್ನು ನಾವುಗಳು ಪಾಲಿಸುತ್ತಿಲ್ಲ. ವೇದಾಂತ ಪರಿಷತ್ಗಳು ನಡೆಯುವದರಿಂದ ಮತ್ತು ಸ್ವಾಮೀಜಿಗಳ ಹಿತವಚನಗಳನ್ನು ಕೇಳುವದರಿಂದ ಸಮಾಜ ಬದಲಾವಣೆಯಾಗಲು ಸಾಧ್ಯವಾಗುತ್ತದೆ ಎಂದರು.
ಶಾಸಕ ಜಗದೀಶ ಹುಡಗುಂಟಿ ಮಾತನಾಡಿ, ದೇವರನ್ನು ಪ್ರತ್ಯೇಕ್ಷವಾಗಿ ಕಾಣಬೇಕಾದರೆ ಬಹಳ ಶ್ರಮವನ್ನು ಪಡಬೇಕು. ದೇವರು ಕಣ್ಣಿಗೆ ಕಾಣಿಸುದಿಲ್ಲ ನಿಜ. ಆದರೆ ಪ್ರತಿಯೊಂದು ಜೀವರಾಶಿಯಲ್ಲಿ ದೇವರು ಇದ್ದಾನೆ. ಎಲ್ಲ ಸಮಾಜದವರು ಜಾತಿ,ಮತ, ಪಂಥಗಳನ್ನು ಮರೆತು ಎಲ್ಲರೂ ಒಂದಾಗಿ ಬಾಳಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ ಎಂದರು.
ರುದ್ರಾವಧೂತ ಮಠದ ಸಹಜಾನಂದ ಅವಧೂತರು, ಕೃಷ್ಣಾನಂದ ಅವಧೂತರು, ಬಸವಾನಂದ ಶ್ರೀಗಳು, ನಾಗೇಶ್ವವರ ಶ್ರೀಗಳು, ಶಿವರಾಮಕೃಷ್ಣಾನಂದ ಶ್ರೀಗಳು, ಚಿನ್ಮಯಾನಂದ ಶ್ರೀಗಳು, ಅಮರೇಶ್ವರ ಶ್ರೀಗಳು, ಶಿವಪುತ್ರ ಅವಧೂತರು, ಪ್ರಭುದೇವರು, ಸ್ವರೂಪಾನಂದ ಶ್ರೀಗಳು ಆರ್ಶೀವಚನ ನೀಡಿದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕ ಜಗದೀಶ ಗುಡಗುಂಟಿ ಅವರಿಗೆ ರುದ್ರಾವಧೂತ ಮಠದ ಕಮೀಟಿಯವರು ಭಕ್ತರು ಉಳಿದುಕೊಳ್ಳಲು ನೂತನ ಕೊಠಡಿಗಳ ನಿರ್ಮಾಣ ಮಾಡಲು ಮನವಿಯನ್ನು ನೀಡಿದರು.
ಶಾಸಕ ನಿಧಿಯಿಂದ 5 ಲಕ್ಷ ರೂ, ನೀಡುತ್ತೇನೆಂದು ಜಗದೀಶ ಗುಡಗುಂಟಿ ಹೇಳಿದರು. ಮುಂದಿನ ದಿನದಲ್ಲಿ ಕೊಠಡಿಗಳ ನಿರ್ಮಿಸಿಕೊಡಲು ವಾಗ್ದಾನ ಮಾಡಿದರು. ಸಚಿವರು ಸಹ ವಾಗ್ದಾನ ನೀಡಿದರು.
ತಹಶೀಲ್ದಾರ ಸದಾಶೀವ ಮಕ್ಕೋಜಿ, ಅಜೇಯ ಕಡಪಟ್ಟಿ, ಡಾ,ರಾಕೇಶ ಲಾಡ, ಎನ್,ಎಸ್,ದೇವರವರ, ತೌಫೀಕ ಪಾರ್ಥನ್ನಳಿ, ಸಿದ್ದು ಮೀಶಿ, ಶಶಿಧರ ಚಲವಾದಿ, ಯಲ್ಲಪ್ಪ ಬಿದರಿ, ಸಂತೋಷ ಬಾಡಗಿ, ಬಿ.ಪಿ. ಮಾಶನ್ನವರ, ಡಾ,ವಿನಾಯಕ ಬಬಲೇಶ್ವರ, ಸಂತೋಷ ಶೆಟ್ಟಿ, ಡಾ.ಜಿ.ಎನ್.ಸನದಿ, ಶಿವಾನಂದ ಆಲಬಾಳ, ಶ್ರೀಶೈಲ ಬಿದರಿ,ಭೀಮಶಿ ನಡುವಿಮನಿ, ಪ್ರದೀಪ್ಪ ಮೆಟ್ಟಗುಡ, ಎಸ್.ಎಸ್.ಪೋತರಾಜ, ಮಂಜುನಾಥ ಹಿಪ್ಪರಗಿ ಸೇರಿದಂತೆ ಅನೇಕ ರಾಜಕಾಣಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು, ರವೀಂದ್ರ ಲಗಳಿ ನಿರೂಪಿಸಿ, ಸ್ವಾಗತಿಸಿದರು. ರುದ್ರಾವಧೂತ ಮಠದ ಪೀಠಾಧಿಕಾರಿ ಕೃಷ್ಣಾನಂದ ಅವಧೂತರು ವಂದಿಸಿದರು.