ಡೆಂಘಿ ತಡೆಗೆ ಹೋಮಿಯೋಪಥಿ ಲಸಿಕೆ ಸೂಕ್ತ: ಬಾಹುಬಲಿ ಉಪಾಧ್ಯೆ
ಜುಗೂಳದಲ್ಲಿ ಡೆಂಘಿ ತಡೆಗೆ ಲಸಿಕಾ ಅಭಿಯಾನ;
ಕಾಗವಾಡ 14: ಜನರ ಆರೋಗ್ಯ ಹದೆಗೆಡಿಸುತ್ತಿರುವ ಡೆಂಘಿಗೆ ಹೋಮಿಯೋಪಥಿ ಪ್ರತಿಭಂದಕ ಲಸಿಕೆ ಅತ್ಯಂತ ಉಪಯುಕ್ತವಾಗಿದೆ ಎಂದು ಸಿದ್ದಿ ಹೂಮ್ಯಾನಿಟಿ ಫೌಂಡೇಶನ್ನ ಅಧ್ಯಕ್ಷ ಬಾಹುಬಲಿ ಉಪಾಧ್ಯೆ ಅಭಿಪ್ರಾಯ ಪಟ್ಟಿದ್ದಾರೆ.
ಅವರು ತಾಲೂಕಿನ ಜುಗೂಳ ಗ್ರಾಮದಲ್ಲಿ ಶನಿವಾರ ದಿ. 13 ಮತ್ತು ರವಿವಾರ ದಿ. 14 ರಂದು ಸತತ ಎರಡು ದಿನಗಳ ಕಾಲ ಸಿದ್ದಿ ಹೂಮ್ಯಾನಿಟಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ 2 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಡೆಂಘಿ ಪ್ರತಿಬಂಧಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಸತೀಶ ಮಗದುಮ್ಮ ಮಾತನಾಡಿ, ರಾಜ್ಯದಲ್ಲಿ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿದೆ. ಸಾವಿರಾರು ಮಕ್ಕಳು ಜ್ವರ, ಶೀತ-ನೆಗಡಿ, ಕೆಮ್ಮಿನಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಡೆಂಘಿ ವ್ಯಾಕಪವಾಗಿ ಹರಡಿ, ಹಲವಡೆ ಸಾವುಗಳು ಸಂಭವಿಸುತ್ತಿವೆ. ಆದ್ದರಿಂದ 2 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಡೆಂಘಿ ಪ್ರತಿಬಂಧಕ ಲಸಿಕೆ ಹಾಕಿಸಿ, ಮುಂಜಾಗೃತೆ ವಹಿಸಬೇಕು. ಮನೆ ಮುಂದೆ ಮತ್ತು ಇತರ ಕಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿರಂತರ ಸ್ವಚ್ಛತಾ ಕ್ರಮಗಳಿಂದ ಕಾಯಿಲೆ ಬರದಂತೆ ತಡೆಯಬಹುದು ಎಂದರು.
ಗ್ರಾಮದ ಮುಖಂಡರಾದ ಅಣ್ಣಾಸಾಬ ಪಾಟೀಲ ಮತ್ತು ಅರುಣ ಗಣೇಶವಾಡಿ ಮಾತನಾಡಿ, ಸಿದ್ದಿ ಹೂಮ್ಯಾನಿಟಿ ಫೌಂಡೇಶನ್ನ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಸತತ ಎರಡು ದಿನಗಳ ಕಾಲ ಗ್ರಾಮದ ಶ್ರೀಕೃಷ್ಣಾಮಾಯಿ ಮತ್ತು ಮಲ್ಲಿಕಾರ್ಜುನ ಮಂದಿಗಳಲ್ಲಿ ನಡೆದ ಲಸಿಕಾ ಅಭಿಯಾನದಲ್ಲಿ ಸುಮಾರು 2000 ಜನರಿಗೆ ಲಸಿಕೆ ಹಾಕಲಾಯಿತು.
ಈ ಸಮಯದಲ್ಲಿ ಮುಖಂಡರಾದ ಅಣಾಸಾಬ ಪಾಟೀಲ, ಅರುಣ ಗಣೇಶವಾಡಿ, ಗ್ರಾ.ಪಂ. ಅಧ್ಯಕ್ಷ ಕಾಕಾಸಾಬ ಪಾಟೀಲ, ಸುರೇಶ ಪಾಟೀಲ, ಅನೀಲ ಮಿಣಚೆ, ಅಸ್ಲಂ ಅಫರಾಜ, ದೀಪಕ ಪಾಟೀಲ, ಅಜೀತ ಹರೋಲೆಗೆ, ಬಾಹುಬಲಿ ಉಪಾಧ್ಯೆ, ಪ್ರಶಾಂತ ಸಾವಂತ, ಬಾಬಾಸಾಬ ತಾರದಾಳೆ, ಸುಧಾಕರ ಸುಂಕೆ, ರೋಹಿತ ಮೋಳೆ, ಸುಪ್ರೀತ ಗುರಗೋಳೆ, ರಾಜು ಅಮ್ಮಣಗೆ, ಸಮ್ಮೇದ ಗುರಗೋಳೆ, ವಿಫುಲ ಉಪಾಧ್ಯೆ, ಅಭಿ ಗುರಗೋಳೆ, ಜಿತೇಂದ್ರ ಅಕ್ಕೋಳೆ ಸೇರಿದಂತೆ ಫೌಂಡೇಶನ್ದ ಎಲ್ಲ ಪದಾಧಿಕಾರಿಗಳು, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.