ಇಂಡಿ

ಮನೆ ಕಳ್ಳತನ: ಶ್ವಾನದಳ ಸಿಬ್ಬಂದಿ ಕಾರ್ಯಾಚರಣೆ

ಮನೆ ಕಳ್ಳತನ: ಶ್ವಾನದಳ ಸಿಬ್ಬಂದಿ ಕಾರ್ಯಾಚರಣೆ
ಪಟ್ಟಣದ ರುದ್ರಯ್ಯ ಹಿರೇಮಠ ಅವರ ಮನೆ ಕಳ್ಳತನ ಆಗಿರುವುದರಿಂದ ಶ್ವಾನದಳ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವುದು.

ಇಂಡಿ29: ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿನ ಅಲಮಾರಿ ಮುರಿದು ಸುಮಾರು 5 ಗ್ರಾಂ  ಬಂಗಾರದ ಆಭರಣಗಳನ್ನು ದೊಚಿಕೊಂಡು ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. 

ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ರುದ್ರಯ್ಯ ಹಿರೇಮಠ ಅವರ ಮನೆಗೆ ರಾತ್ರಿ ಕಳ್ಳರು ನುಗ್ಗಿ ರುದ್ರಯ್ಯ ಹಿರೇಮಠ ಅವರು ಕುಟುಂಬ ಸಮೇತ ಮನೆಯಲ್ಲಿನ ಹಾಲ್‍ನಲ್ಲಿ ಮಲಗಿಕೊಂಡಿದ್ದು, ಕಳ್ಳರು ಹಿತ್ತಲು ಬಾಗಿಲಿನಿಂದ ಒಳನುಗ್ಗಿ ಮನೆಯಲ್ಲಿರುವ ಅಲಮಾರಿಯನ್ನು ಮುರಿದು ಅದರಲ್ಲಿ ಇಟ್ಟಿರುವ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ.

ಈ ಕುರಿತು ವಿಜಯಪುರದ ಶ್ವಾನದಳ ಹಾಗೂ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಈ ಕುರಿತು ಇಂಡಿ ಶಹರ ಪೆÇಲೀಸ್ ಠಾಣೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಓದಿ