ಚರ್ಮ ಕುಶಲಕರ್ಮಿಗಳ ಮನೆ ದುರಸ್ತಿ: ಚೆಕ್ ವಿತರಣೆ
ಅಥಣಿ ೧೦- ಕರ್ನಾಟಕ ಕೊಳಗೇರಿ ಮಂಡಳಿ ವತಿಯಿಂದ ಅಥಣಿ ಪಟ್ಟಣಕ್ಕೆ ತಲಾ 7 ಲಕ್ಷದಂತೆ 53 ಕೋಟಿ ವೆಚ್ಚದಲ್ಲಿ 798 ಮನೆಗಳ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ ಎಂದು ಕರ್ನಾಟಕ ಕೊಳಗೇರಿ ಮಂಡಳಿಯ ಅಧ್ಯಕ್ಷರು ಹಾಗೂ ಅಥಣಿ ಮತಕ್ಷೇತ್ರದ ಶಾಸಕರಾದ ಮಹೇಶ ಕುಮಟಳ್ಳಿ ಹೇಳಿದರು.
ಅವರು ಅಥಣಿ ಪಟ್ಟದ ಡಾ. ಬಾಬು ಜಗಜೀವನ ರಾವ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಸುಮಾರು 29 ಕೋಟಿ 18 ಲಕ್ಷ ಅನುದಾನ ಅಥಣಿ ಚರ್ಮ ಕುಶಲಕರ್ಮಿಗಳಿಗೆ ಬಿಡುಗಡೆಯಾಗಿದ್ದು ಅದರಲ್ಲಿ ಇವತ್ತು 4 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆಗಳ ದುರಸ್ತಿಗಾಗಿ ತಲಾ 1 ಲಕ್ಷದಂತೆ ನಾಲ್ಕು ನೂರು ಜನ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮ ಮಾಡಲಾಗಿದೆ ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಅವರು ಮುಂಬರುವ ದಿನಗಳಲ್ಲಿ ನಾನು ಮತ್ತು ಡಿಸಿಎಂ ಲಕ್ಷ್ಮಣ ಸವದಿ ಕೂಡಿ ಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟಿದ್ದು ಚರ್ಮ ಕುಶಲಕರ್ಮಿಗಳು ಅನುದಾನದ ಸಮರ್ಪಕ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಅನಂತರ ಕರ್ನಾಟಕ ರಾಜ್ಯದ ಶಿವಶರಣ ಹರಳಯ್ಯಾ ಸಮಾಜ ದಲಿತ ವೇದಿಕೆ ಅಧ್ಯಕ್ಷ ಹಾಗೂ ಕರ್ನಾಟಕ ತ್ರಿಮತಸ್ಥ ಚರ್ಮಕಾರ ಪರಿಷತ ಸಂಚಾಲಕರಾದ ಡಾ. ಅನೀಲ ಸೌದಾಗರ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಚರ್ಮಕಾರರು 18 ಲಕ್ಷಕ್ಕಿಂತ ಹೆಚ್ಚು ಜನಾಂಗವಿದ್ದು ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 1ಲಕ್ಷ 57 ಸಾವಿರ ವಿಶೇಷವಾಗಿ ಅಥಣಿ ಮತಕ್ಷೇತ್ರದಲ್ಲಿ 27 ಸಾವಿರ ಚರ್ಮಕಾರರಿದ್ದು ಚರ್ಮ ಕುಶಲಕರ್ಮಿಗಳು ಕೊರೋಣ ಸಂದರ್ಭದಲ್ಲಿಯೂ ಕೂಡ ತೀರ ಸಂಕಷ್ಟದಲ್ಲಿದ್ದು, ಕುಟುಂಬಸ್ಥರು ಉದ್ಯೋಗವಿಲ್ಲದೆ ಕೂಲಿ ಕೆಲಸ ಸಿಗದೆ ಕುಟುಂಬಸ್ಥರು ಉಪವಾಸ ಇರುವಂತ ಸಂದರ್ಭವಿತ್ತು ಇಂತಹ ಸಮಯದಲ್ಲಿ ಸರಕಾರ ವಿಶೇಷ ಪ್ಯಾಕೇಜ್ ಘೋಷಿಸಿದೆ ಅಷ್ಟೇ ಅಲ್ಲದೆ ಇನ್ನು ನಮ್ಮ ಸಮಾಜಕ್ಕೆ ಹೆಚ್ಚಿನ ಪ್ಯಾಕೇಜ್ ಘೋಷಣೆಯಾಗಬೇಕು ಎಂದರು.
ಸಮಾಜ ಕಲ್ಯಾಣ ಇಲಾಖಾಧಿಕಾರಿ ಪಿ ಎಲ್ ಪಾಟೀಲ, ತಹಶಿಲ್ದಾರ ದುಂಡಪ್ಪಾ ಕೋಮಾರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರೆ, ಡಿವೈಎಸ್ಪಿ ಎಸ್ ವಿ ಗಿರೀಶ, ಸಿಪಿಐ ಶಂಕರಗೌಡ ಬಸನಗೌಡ, ಹಿಂದುಳಿದ ವರ್ಗದ ಅಧಿಕಾರಿ ವೆಂಕಟೇಶ ದೇಶಪಾಂಡೆ, ಉಮೇಶರಾವ ಬೊಂಟೋಡಕರ, ಮಲ್ಲೇಶ ಹುದ್ದಾರ, ವಿಲೀನರಾಜ ಯಳಮಲ್ಲೆ, ಸುಂದರ ಸೌದಾಗರ ಸೇರಿದಂತೆ ಇತರರು ಉಪಸ್ಥಿತರಿದ್ದರು.