ರಾಣೆಬೆನ್ನೂರ

ಮನೆ ಕಳ್ಳತನ: ನಗ ನಾಣ್ಯ ಕಳವು

ಮನೆ ಕಳ್ಳತನ: ನಗ ನಾಣ್ಯ ಕಳವು

ರಾಣಿಬೆನ್ನೂರು 12: ಮನೆಯ ಕಿಟಕಿಯನ್ನು ಮುರಿದು ಮನೆಯ ಒಳಗಡೆ ಹೋಗಿ ಮನೆಯ ಒಳಗಡೆ ಹಾಲ್‌ನಲ್ಲಿದ್ದ ಗಾಡ್ರೇಜ್ ಮುರಿದು ಅದರಲ್ಲಿದ್ದ ಸುಮಾರು 3,60,000 ರೂಗಳ ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಿದ ಘಟನೆ ತಾಲೂಕಿನ ಮಾಕನೂರ ಗ್ರಾಮದ ಕರಲಗೇರಿಯಲ್ಲಿ ನಡೆದಿದೆ.  

ಆಶಾ ಕೋಂ ಬಸನಗೌಡ ನಂದಿಗಾವಿ ಎಂಬುವವರ ಮನೆಯಲ್ಲಿದ್ದ 45 ಗ್ರಾಂ ಬಂಗಾರದ ನೆಕ್‌ಲೇಸ್, 12 ಗ್ರಾಂ ಬಂಗಾರದ ಕೊರಳ ಚೈನ್, 05 ಗ್ರಾಂ ಒಂದು ಜೊತೆ ಕಿವಿ ಓಲೆ, 05 ಗ್ರಾಂ ಬಂಗಾರದ ಒಂದು ಉಂಗುರ ಸೇರಿ ಒಟ್ಟು 67 ಗ್ರಾಂ ಬಂಗಾರದ 3,60,000/- ರೂಪಾಯಿ ಮೌಲ್ಯದ ಬಂಗಾರದ ಆಭರಣಗನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ