ರಾಣೆಬೆನ್ನೂರ

ಗುರುಪೂರ್ಣಿಮೆಯ ಹೋಮ ಹವನ ಧಾರ್ಮಿಕ ಕಾರ್ಯಕ್ರಮ

ಗುರುಪೂರ್ಣಿಮೆಯ ಹೋಮ ಹವನ ಧಾರ್ಮಿಕ ಕಾರ್ಯಕ್ರಮ

ರಾಣೇಬೆನ್ನೂರು  21 : ಮಹಿಳಾ ಶಕ್ತಿ ಸಮಗ್ರ ಕುಟುಂಬದ ಮಾತೃ ಶಕ್ತಿ, ಶಕ್ತಿಯ ಪ್ರತೀಕವೇ ಹೆಣ್ಣು ಗೌರವ ಸ್ಥಾನಮಾನಗಳು ಅವಳ ಸ್ವತ್ತು ಅಷ್ಟೇ ಅಲ್ಲ ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆಯ ಸಂಕೇತವಾಗಿದೆ ಎಂದು ಹಾವೇರಿ ಜಿಲ್ಲಾ ಮಹಿಳಾ ಪತಂಜಲಿ ಯೋಗ ಸಮಿತಿಯ, ಜಿಲ್ಲಾ ಪ್ರಭಾರಿ, ಹಾಗೂ ರಾಜ್ಯ ಸಮಿತಿ ಸದಸ್ಯ ಜ್ಯೋತಿ ಜಂಬಿಗಿ ಹೇಳಿದರು. ಅವರು, ರವಿವಾರ ಇಲ್ಲಿನ ಗೌರಿಶಂಕರ್ ನಗರದ ನಿರಂತರ ಯೋಗ ಕೇಂದ್ರದಲ್ಲಿ ಮಹಿಳಾ ಪತಂಜಲಿ ಸಮಿತಿ ಗುರುಪೂರ್ಣಿಮೆ ನಿಮಿತ್ತ ಆಯೋಜಿಸಿದ್ದ, ಗುರು ವಂದನ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ತ್ರೀ ಪುರುಷ ಯಾರೇ ಇರಲಿ, ಮನುಷ್ಯನ ದೀರ್ಘಾಯುಷ್ಯ ಬದುಕಿಗೆ, ನಿತ್ಯವೊ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.  

ಯೋಗ ಗುರು, ಯೋಗಾಚಾರ್ಯ ಬಾಬಾ ರಾಮದೇವ್ ಜಿ  ಅವರು, ನೀಡಿದೆ ಈ ಯೋಗ ಧ್ಯಾನದ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತೀಯರ  ಯೋಗ, ಧ್ಯಾನ ಮತ್ತು ಸಂಸ್ಕಾರ ಪರಂಪರೆ ಕಡೆಗೆ, ಮುಖ ಮಾಡುವಂತಾಗಿದೆ. ಸಂದರ್ಭದಲ್ಲಿ ಗುರು ಪೂರ್ಣಿಮೆ ನಿಮಿತ್ತ ಯೋಗ ಗುರುಗಳಿಗೆ ಮತ್ತು ಯೋಗ ಸಾಧಕರಿಗೆ, ಶಿಷ್ಯ ಸಮುದಾಯವು, ಸಾಮೂಹಿಕವಾಗಿ ಗೌರವಿಸಿ ಸನ್ಮಾನಿಸಿದರು. ಮುಂಜಾನೆ  ಹೋಮ, ಹವನ, ಸೇರಿದಂತೆ ಇತರೆ ಧಾರ್ಮಿಕ ಸೇವಾ ಕಾರ್ಯಗಳನ್ನು  ನೆರವೇರಿಸಲಾಯಿತು.  

ಪತಂಜಲಿ ಸಮಿತಿಯ ಹಿರಿಯ ಯೋಗ ಸಾಧಕರಾದ ಜಿಲ್ಲಾ ಸಮಿತಿಯ ಲಲಿತಾ ಮೇಲಗಿರಿ, ಕವಿತಾ ಕುಬಸದ, ಮಹೇಶ್ವರಿ ಕುಬಸದ, ಲತಾ ಮಾಕನೂರ್, ನಾಗರತ್ನ, ಮಂಜುಳಾ, ಕವಿತಾ, ಚಿನ್ನಿಕಟ್ಟಿ, ಸುಜಾತಾ, ರೇಖಾ ವರಮಹೂರ್ತಿ, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ