ರಂಗಪಂಚಮಿ: ಬಣ್ಣದಾಟದಲ್ಲಿ ಮಿಂದೆದ್ದ ಅಥಣಿ
ಅಥಣಿ 02: ಪ್ರತಿಯೊಬ್ಬರು ಪರಸ್ಪರ ಮುಖಕ್ಕೆ ಬಣ್ಣ ಹಾಕುವುದು, ಬಗೆಬಗೆಯ ಬಣ್ಣದ ತುತ್ತೂರಿ, ಪಿಪಿ ಊದುವ ಶಬ್ದ, ಹಲಗೆಗಳ ನಾದ, ಬೈಕಗಳಲ್ಲಿ ಅತ್ತಿತ್ತ ಓಡಾಡುತ್ತಿರುವ ಯುವ ಸಮೂಹ, ರಸ್ತೆಗಳಲ್ಲಿ ವಾಹನ ನಿಲ್ಲಿಸಿ ದುಡ್ಡುಕೇಳುತ್ತಿರುವ ಯುವಕರು, ಇವು ಇವತ್ತು ಅಥಣಿಯಲ್ಲಿ ರಂಗಿನಾಟಕ್ಕೆ ಸಾಕ್ಷಿಯಾದ ಕ್ಷಣಗಳು ಇದರಲ್ಲಿ ಅಥಣಿಯ ಎಲ್ಲ ಮಕ್ಕಳು, ಮಹಿಳೆಯರು, ವೃದ್ಧರವರೆಗೂ ಬಣ್ಣದ ಓಕಳಿಯದೆ ಗಂಗು ಕೊರೊನಾ ಸೋಂಕಿನ ಭೀತಿಯಲ್ಲಿ ರಂಗಿನಾಟ ರಂಗೇರಿತ್ತು.
ಉತ್ತರ ಕರ್ನಾಟಕದಲ್ಲಿ ಹೋಳಿ ಹಬ್ಬದ 5ನೇ ದಿನವಾದ ಶುಕ್ರವಾರ ಅಥಣಿ ಪಟ್ಟಣದಲ್ಲಿ ರಂಗಿನಾಟದ ಹಬ್ಬದ ನಿಮಿತ್ಯ ಮನೆ ಮನೆಗೆ, ಗಲ್ಲಿ ಗಲ್ಲಿಗಳಲ್ಲಿ, ಸರ್ಕಲ್ ಗಳಲ್ಲಿ ಬಣ್ಣ ಬಣ್ಣದ ಪಿಚಕಾರಿ, ವಾರನೇಸ್ ಡಬ್ಬ, ಪಿಚಕಾರಿ ಹಿಡಿದು ಚಿನ್ನರಿಂದ ಶುರುವಾದ ಓಕಳಿ ಮಧ್ಯಾಹ್ನದವರೆಗೆ ನಡೆಯಿತು ಯುವಕರು ಮುದ್ದು ಮಕ್ಕಳು ಪಿಪಿ ತುತಾರಿ ಓದುತ್ತ ಕಣ್ಣಿಗೆ ಕಂಡಕಂಢವರಿಗಲ್ಲ ಬಗೆ ಬಗೆಯ ವಿವಿಧ ಬಣ್ಣಗಳು ಎರಚಿ ಸಂಭ್ರಮಿಸಿದರು.
ಯುವಕರು ಮುದ್ದು ಮಕ್ಕಳು ಪಿಪಿ ತುತ್ತೂರಿ ಹಲಗಿ ಬಾರಿಸತ ರಂಗಿನ ಆಟ ಮಾಡಿದರು ಯಾವುದೇ ಓಣಿಯಲ್ಲಿ ನೋಡಿದರೂ ಸಹ ಬಣ್ಣದ ಓಕಳಿ ಕಂಡಿತು. ಹಲಗೆ ತಮಟೆಗಳೊಂದಿಗೆ ಹಾಕುತ್ತ ಸಾಗಿದ ಯುವಕರು ಓಕಳಿ ಹಬ್ಬದ ಪ್ರಯುಕ್ತ ಹಣ್ಣಿನ ವೇಷ ಧರಿಸಿ ಖುಷಿ ವ್ಯಕ್ತಪಡಿಸಿದರು ಅಲ್ಲದೆ ಕೆಲವರು ವಿಲಕ್ಷಣ ರೂಪ ಹಾಕಿದರು. ಕೆಲವರು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಮುಖವಾಡ ಧರಿಸಿ ಬಣ್ಣ ಆಡಿ ಹಾಡು ಹೇಳಿ ಸಂಭ್ರಮಿಸಿದರು. ಯುವಕರು ಗುಂಪು ಗುಂಪಾಗಿ ದ್ವಿಚಕ್ರವಾಹನದಲ್ಲಿ ಸುತ್ತಾಡಿ ಓಕಳಿ ಹಾಗೂ ರಂಗಿನಾಟ ಆಚರಿಸಿದರು.