ಹೊಳಲು ; ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಹೂವಿನಹಡಗಲಿ 30: ರಕ್ತದಾನದಿಂದ ಮತ್ತೊಂದು ಜೀವ ಉಳಿಯುತ್ತದೆ ಅಲ್ಲದೆ ರಕ್ತದೊತ್ತಡ ಹಾಗೂ ಮಧುಮೇಹಗಳಂತಹ ರೋಗಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಮೈಲಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ದರ್ಶನ ತಿಳಿಸಿದರು.ತಾಲೂಕಿನ ಹೊಳಲು ಗ್ರಾಮದಲ್ಲಿ ಶನಿವಾರ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ ಹೂವಿನಹಡಗಲಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕ ಹೊಸಪೇಟೆ ಇವರ ಆದೇಶಾನುಸಾರ ಚಿರಂಜೀವಿ ರಕ್ತ ಭಂಡಾರ ಹೊಸಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಸೀನಿಯರ್ ಐಸಿಟಿಸಿ ಕೌನ್ಸಲರ್ ವೀರೇಶ ಮಾತನಾಡಿದರು. 26ಜನ ರಕ್ತದಾನ ಮಾಡಿದರು. ಗ್ರಾ.ಪಂ ಅಧ್ಯಕ್ಷೆ ಜಾನಕಮ್ಮ ತಳವಾರ ಉದ್ಘಾಟಿಸಿದರು. ಸದಸ್ಯರಾದ ಮಾಲತೇಶ ಡಂಬಳ, ಮಲ್ಲಿಕಾರ್ಜುನ ಗುಡಗೂರು, ಮಾಲತೇಶ ಕಂಚಾವೀರ, ಚಂದ್ರ್ಪ ಕುರುವತ್ತಿ ಹಾಗೂ ಗುನ್ನಮ್ಮ. ಸಮುದಾಯ ಆರೋಗ್ಯ ಅಧಿಕ ರಿಗಳಾದ ರಕ್ಷಿತಾ, ಚೇತನ, ಮಲ್ಲಪ್ಪ ಸೇ- ರಿದಂತೆ ಮೈಲಾರ, ಕುರುವತ್ತಿ, ಹರವಿ ಗ್ರಾಮಗಳ ಪಾಲ್ಗೊಂಡಿದ್ದರು.