ರಾಣೆಬೆನ್ನೂರ

ಹಿಂದೂ ಸಮಾಜ ರಾಜಕಾರಣಿಗಳು ಹೊಡೆದಾಳುವ ನೀತಿ ಬಿಡಬೇಕು: ಪ್ರಮೋದ್ ಮುತಾಲಿ

ಹಿಂದೂ ಸಮಾಜ ರಾಜಕಾರಣಿಗಳು ಹೊಡೆದಾಳುವ ನೀತಿ ಬಿಡಬೇಕು: ಪ್ರಮೋದ್ ಮುತಾಲಿ

ರಾಣೇಬೆನ್ನೂರು13: ಹಿಂದು ಸಮಾಜ ಎಲ್ಲರೂ ಒಂದಾದರೆ ಒಂದೇ ಒಂದು ಹನಿ ರಕ್ತ ಬೀಳದೇ ಯಶಸ್ಸು ಕಾಣುತ್ತೇವೆ. ನಮ್ಮ ಹಿಂದುತ್ವದ ನಾಡಿನಲ್ಲಿ ದೇವಸ್ಥಾನ ಕಟ್ಟಲು ನ್ಯಾಯಾಲಯಕ್ಕೆ ಹೋಗಬೇಕಾಗಿರುವುದು ನಿಜಕ್ಕೂ ಖೇದಕರ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.  

ನಗರ ಸಭಾ  ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯು ಆಯೋಜಿಸಿದ್ದ ಹಿಂದೂ ಧಾರ್ಮಿಕ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 

 ಅಪಘಾನಿಸ್ತಾನದಿಂದ ಬಂದ ಬಾಬರ್‌ಮಂದಿರ ಒಡೆದು ಮಸೀದಿ ನಿರ್ಮಿಸಿದ್ದನು. ರಾಮ ಮಂದಿರ ನಿರ್ಮಾಣಕ್ಕೆ 500 ವರ್ಷ ಬೇಕಾಯಿತು. ಸ್ವಾತಂತ್ರ್ಯ ಬಂದ ಕೂಡಲೇ ಮಂದಿರ ನಿರ್ಮಾಣ ಆಗಬೇಕಾಗಿತ್ತು. ಮ0ದಿರದ ಸಲುವಾಗಿ ಬೀದಿಗಳಲ್ಲಿ ಹೋರಾಟ ಮಾಡಬೇಕಾಯಿತು. ಲಕ್ಷಗಟ್ಟಲೆ ಹಿಂದೂ ಕರಸೇವಕರಿಂದ ಬಾಬರ್‌ಮಸೀದಿ ಧ್ವಂಸಗೊಂಡಿತು. ಕೊನೆಗೂ ಸುಮಾರು 7 ದಶಕಗಳ ನಂತರ ಅದು ಸಾಕಾರವಾಯಿತು. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಮೇಲೆ ರಾಮಮಂದಿರ ನಿರ್ಮಾಣವಾಗಲು ಸಾಧ್ಯವಾಯಿತು. ಎಸ್‌ಡಿಪಿಐ, ಪಿಎಫ್‌ಐ ನೂರು ವರ್ಷ ಹೋದರೆ ಅಲ್ಲೇ ಬಾಬರ್‌ಮಸೀದಿ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾನು ಸವಾಲು ಹಾಕುವೆ ನೂರು ಕೋಟಿ ಹಿಂದೂಗಳಿದ್ದೇವೆ. ರಾಮಂದಿರದ ಹುಲ್ಲುಕಡ್ಡಿ ಕೂಡ ಅಲುಗಾಡಲು ಬಿಡುವುದಿಲ್ಲ ಎಂದು ಸವಾಲು ಹಾಕಿದರು.ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.  

ವಂದೇಮಾತರಂ ಸ್ವಯಂ ಸೇವಾ ಸಂಸ್ಥೆ ಪ್ರಕಾಶ ಬುರಡಿಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಲ ಗಂಗಾಧರ ತಿಲಕರು ಬ್ರಿಟಿಷರ ವಿರುದ್ಧ ಹೋರಾಡಲು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಚಾಲನೆ ನೀಡಿದರು. ಈ ದೇಶದಲ್ಲಿ ತಿಂದು ತಿರುಗಿ ಬೀಳುವ ಕೊಳಕು ಮನಸ್ಸುಗಳನ್ನು ಹೊರ ಹಾಕಬೇಕು ಎಂಬ ಉದ್ದೇಶದಿಂದ ಉತ್ಸವ ಆರಂಭಿಸಿದ್ದೇವೆ. ಹಿಂದೂ ದೇವರ, ದೇವತೆಗಳನ್ನು ಅವಹೇಳನ ಮಾಡಿದವರ ವಿರುದ್ಧ ಮಾತನಾಡಲು ಯಾರೂ ಬರಲ್ಲ. ಆದರೆ ಅವರಿಗೆ ಏನಾದರೂ ಅದರೆ ಮಾತನಾಡುತ್ತಾರೆ. ದೇಶದ್ರೋಹ ಮಾಡುವವರ ವಿರುದ್ದ ಮಾತ್ರವಲ್ಲ ಹಿಂದುಳಿದವರ ಪರವಾಗಿ ನಿಂತು ಅವರನ್ನುಮೇಲೆತ್ತುವ ಕಾರ್ಯಕ್ರಮ ಹಾಕಿಕೊಂಡಿದ್ದೇವೆ ಎಂದರು. ಕೆಚ್ಚೆದೆಯ ಕನ್ನಡತಿ ಖ್ಯಾತಿಯ ಅನು, ಅಯೋಧ್ಯಾ ಪ್ರತಿರೂಪದ ಗಣೇಶ ಮಂಟಪ ನಿರ್ಮಿಸಿದ ಕಲಾವಿದ ಇಂದ್ರಕುಮಾರ್ ಮಾತನಾಡಿದರು. ನಗರಸಭಾ ಸದಸ್ಯರಾದ ಹನುಮಂತಪ್ಪ ಹೆದ್ದೇರಿ, ನಾಗರಾಜ ಅಡ್ಡನಿ, ಹುಚ್ಚಪ್ಪ ಮೆಡ್ಲೆರಿ, ಮಾಜಿ ಸದಸ್ಯ ರಾಘವೇಂದ್ರ ಚೆನ್ನಿಕಟ್ಟಿ, ಅಜಯ್ ಮಠದ, ವೀರೇಶ ಹೆದ್ದೇರಿ ಮತ್ತಿತರರು ಇದ್ದರು. 


ಸುದ್ದಿ ಓದಿ