ಮಲ್ಲಿಕಾರ್ಜುನ ಕಂಬಿಯೊಂದಿಗೆ ಶ್ರೀಶೈಲಕ್ಕೆ ಪಾದಯಾತ್ರೆ
ಶೇಡಬಾಳ 27: ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ನೂರಾರು ಭಕ್ತರು ಪಾದಯಾತ್ರೆಯ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ದೇವರ ಕಂಬಿಯನ್ನು ತೆಗೆದುಕೊಂಡು ಶನಿವಾರ ದಿ. 27 ರಂದು ತೆರಳಿದರು.
ಉಗಾರ ಬುದ್ರುಕ ಗ್ರಾಮದ ಮಹಾದೇವ ಮಂದಿರದಲ್ಲಿ ಮಾಥಣಿ ರಂದು ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷ ಶೀತಲಗೌಡ ಪಾಟೀಲ, ಯುವ ಮುಖಂಡ ಅಪ್ಪಾಸಾಬ ಚೌಗಲಾ, ವಿಜಯ ಶಿಂಧೆ, ವಿನಾಯಕ ಶಿಂಧೆ, ಜೀತು ಶಿಂಧೆ ಮೊದಲಾದ ಗಣ್ಯರು ಕಂಬಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. 100 ಕ್ಕೂ ಮೇಲ್ಪಟ್ಟ ಸ್ತ್ರೀ ಪುರಷರನ್ನು ಹೊಂದಿರುವ ಈ ಭಕ್ತರ ತಂಡ ದಿನಾಲೂ 30 ರಿಂದ 40 ಕಿ.ಮೀ. ಪಾದಯಾತ್ರೆ ಮಾಡಿ ಯುಗಾದಿ ಹಬ್ಬಕ್ಕೆ ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯವನ್ನು ತಲುಪಲಿದ್ದಾರೆ.
ಯುಗಾದಿ ಹಬ್ಬದ ದಿನದಂದು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಭಕ್ತರು ತಪ್ಪದೇ ಶ್ರೀಶೈಲ ಪಾದಯಾತ್ರೆಯ ಮೂಲಕ ಕಂಬಿಯನ್ನು ತೆಗೆದುಕೊಂಡು ಹೋಗುವ ಪರಿಪಾಠವನ್ನು ಹೊಂದಿದ್ದಾರೆ.
ಇಲ್ಲಿನ ಶ್ರೀಶೈಲ ಮಲ್ಲಿಕಾರ್ಜುನ ದೇವರ ಭಕ್ತನಾದ ಪರಸು ಗಾಡಿವಡ್ಡರ (ಮಡಿವಾಳೆ) ಎರಡು ಕಾಲುಗಳಿಗೆ ಕಟ್ಟಿಗೆಯ ಮರುಗಾಲುಗಳನ್ನು ಕಟ್ಟಿಕೊಂಡು ಪಾದಯಾತ್ರೆಯ ಮೂಲಕ ಶ್ರೀಶೈಲಕ್ಕೆ ತೆರಳುತ್ತಿರುವುದು ವಿಶೇಷವಾಗಿದೆ.
ಈ ಸಮಯದಲ್ಲಿ ಶೀತಲಗೌಡ ಪಾಟೀಲ, ಅಪ್ಪಾಸಾಬ ಚೌಗಲಾ, ವಿಜಯ ಶಿಂಧೆ, ವಿನಾಯಕ ಶಿಂಧೆ, ಜೀತು ಶಿಂಧೆ, ಅಜೀತ ತಾರದಾಳೆ, ಸುರೇಶ ಕುಂಬಾರ, ಸಂಗಪ್ಪ ಪಡಗನ್ನವರ, ಸಂತೋಷ ಕುಂಬಾರ, ಉಮೇಶ ನಾಯಿಕ, ಭೀಮು ಕಾಂಬಳೆ, ಮುದ್ದು ಜಮಖಾನೆ ಸೇರಿದಂತೆ ಅನೇಕರು ಇದ್ದರು.