ಉಚ್ಚಂಗೆಮ್ಮನ ದೇವಿಯ ದರ್ಶನಕ್ಕೆ ಪಾದಯಾತ್ರೆ
ರಾಣೆಬೆನ್ನೂರು 07: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲೂಕ ಘಟಕದಿಂದ ಗುರುವಾರದಂದು ಬೆಳಿಗ್ಗೆ ರಾಣೆಬೆನ್ನೂರು ಹರಳಯ್ಯ ನಗರ ಗುಡ್ ಶೆಡ್ ರೋಡ್ ನಿಂದ ಪರಶು ಚಲವಾದಿ ಇವರ ನೇತೃತ್ವದಲ್ಲಿ ನಗರದ ಯುವಕರು ಪಾದಯಾತ್ರೆಯನ್ನು ಕೈಕೊಂಡು ಹರಪನಹಳ್ಳಿ ತಾಲೂಕು ದಾವಣಗೆರೆ ಜಿಲ್ಲೆ ಸುಕ್ಷೇತ್ರ ಹುಚ್ಚೆಂಗೆಮ್ಮನ ದರ್ಶನ ಯಾತ್ರಿಗಳಾಗಿ ಈ ಶ್ರಾವಣ ಶುಭ ಮಾಸದಲ್ಲಿ ಪಾದಯಾತ್ರೆಯನ್ನು ಶುದ್ಧ ನಡೆ-ನುಡಿ ಆಚಾರಗಳಿಂದ ಭಕ್ತಿ ಸಮರೆ್ಣಯನ್ನು ಸಲ್ಲಿಸಿ ಆ ತಾಯಿ ಆಶೀರ್ವಾದವನ್ನು ಪಡೆದು ಪುನೀತರಾಗಿ ಆ ತಾಯಿ ಉಚ್ಚೆಂಗೆಮ್ಮ ಪಾದಯಾತ್ರೆಗಳಿಗೆಲ್ಲರಿಗೂ ಸಕಲ ಐಶ್ವರ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣವು ತಾಲೂಕ ಸಮಿತಿ ಅಧ್ಯಕ್ಷರಾದ ಪಿ ವಿ ಮಠದ ಅವರು ಹಾರೈಸಿದರು. ಇದೇ ಸೆ 10 ರಂದು ಕಾರ್ಯಕಾರಣಿ ಚಿಂತನ ಮಂಥನ ಬೃಹತ್ ಸಮಾವೇಶಕ್ಕೆ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷರು ಹರಳಯ್ಯ ನಗರದ ಹುಚ್ಚೆಂಗೆಮ್ಮ ದೇವಿಯ ಪಾದಯಾತ್ರೆ ಕೈಕೊಂಡ ಎಲ್ಲಾ ಭಕ್ತ ಯುವಕರನ್ನು ಈ ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಬೀಳ್ಕೊಟ್ಟರು.