ಗುಳೇಗುಡ್ಡ

ಹೆದ್ದಾರಿ ಅಗಲೀಕರಣ ಸರ್ವೆ ಕಾರ್ಯ ಚುರುಕು

ಹೆದ್ದಾರಿ ಅಗಲೀಕರಣ ಸರ್ವೆ ಕಾರ್ಯ ಚುರುಕು
ಗುಳೇದಗುಡ್ಡದ ಪ್ರಮುಖ ರಸ್ತೆ ಪವಾರ್‌ಕ್ರಾಸ್ ಬಳಿ ಅಧಿಕಾರಿಗಳು ರಸ್ತೆ ಅಗಲೀಕರಣದ ಸರ್ವೆ ಕಾರ್ಯ ನಡೆಸಿರುವುದು

ಗುಳೇದಗುಡ್ಡ 24 : ಪಟ್ಟಣದ ಗುಲಾಬ ಚಿತ್ರಮಂದಿರದಿಂದ ಹಿಡಿದು ಭಂಡಾರಿ ಕಾಲೇಜ ಸರ್ಕ್‌ಲ್‌ವರೆಗೆ 367 ರ ರಾಷ್ಟ್ರೀಯ ಹೆದ್ದಾರಿ ಹಾಗೂ ಕಮತಗಿ ರಸ್ತೆಯ ಪಾದನಕಟ್ಟಿ ಕ್ರಾಸ್‌ವರೆಗೆ ಈ ಅಗಲೀಕರಣದ ಸರ್ವೆ ಕಾರ್ಯ ಗುಳೇದಗುಡ್ಡದಲ್ಲಿ ಮಂಗಳವಾರದಿಂದ ಅತೀ ಚುರುಕು ಪಡೆದುಕೊಂಡಿದೆ. 

ಪಟ್ಟಣದ ಸಿಟಿಸರ್ವೆ ಅಧಿಕಾರಿ ಪ್ರಶಾಂತ ಅಗಸಿಮನಿ ಪಿಡಬ್ಲ್ಯೂಡಿ ಜೂನಿಯರ್ ಇಂಜಿನಿಯರ್ ಎ.ಕೆ.ಮಕಾಂದಾರ, ಎನ್‌.ಕೆ.ಮುನ್ಸಿ ಸೇರಿದಂತೆ ಇನ್ನಿತರ ಇಲಾಖಾ ಅಧಿಕಾರಿಗಳು ಸೇರಿ  ಪೊಲೀಸ್ ಇಲಾಖೆಯ ಭದ್ರತೆಯಲ್ಲಿ ಸರ್ವೆ ಕಾರ್ಯ ಮಾಡುತ್ತಿದ್ದಾರೆ. 

ಪಟ್ಟಣದ ಮುಖ್ಯರಸ್ತೆ ಅಕ್ಕಪಕ್ಕದ ಅಂಗಡಿ, ಮುಂಗಟ್ಟುಗಳು, ಮನೆಗಳನ್ನು  ಕೆಡುವಿ ರಸ್ತೆ ಅಗಲೀಕರಣ ಮಾಡಬೇಕಾಗುತ್ತದೆ.  ಕಳೆದ ಹತ್ತಾರು ತಿಂಹಳುಗಳ ಹಿಂದೆಯೇ ಈ ಕಾರ್ಯ ಆರಂಭವಾಗಬೇಕಿತ್ತು. ಈ ರಸ್ತೆ ಅಗಲೀಕರಣವಾಗುವುದರಿಂದ ಪಟ್ಟಣದ ಸೌಂದರ್ಯ ಹೆಚ್ಚುವುದಲ್ಲದೇ, ಜನದಟ್ಟಣೆ, ಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳುತ್ತಾರೆ. 

ರಸ್ತೆಯ ಮಧ್ಯ ಭಾಗದಿಂದ ಎರಡೂ ಕಡೆ 12 ಮೀಟರ್‌ದಂತೆ ಒಟ್ಟು 24 ಮೀಟರ್ ರಸ್ತೆ ಅಗಲೀಕರಣವಾಗಲಿದೆ.  ಸರ್ವೆ ಕಾರ್ಯ ಮುಗಿಯುತ್ತಿದ್ದಂತೆ ಅಕ್ಕಪಕ್ಕದ ಆಸ್ತಿ ಮಾಲಿಕರಿಗೆ ನೋಟಿಸ್ ಕೊಟ್ಟು ಆಸ್ತಿಗೆ ಪರಿಹಾರ ಹಾಗೂ ಅತಿಕ್ರಮಣ ಕಟ್ಟಡದಾರರಿಗೂ ನೋಟಿಸ್ ಕೊಟ್ಟು ರಸ್ತೆ ಅಗಲೀಕರಣ ಮಾಡಲಾಗುತ್ತದೆ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳು ತಿಳಿಸಿದ್ದಾರೆ. 

ಸುದ್ದಿ ಓದಿ