ಅಥಣಿ

ಅಥಣಿ ಸರಕಾರಿ ಆಸ್ಪತ್ರೆಗೆ ಹೈಟೆಕ್ ಅಂಬ್ಯುಲೆನ್ಸ್‌ ಸವದಿ ಹಸ್ತಾಂತರ

ಅಥಣಿ ಸರಕಾರಿ ಆಸ್ಪತ್ರೆಗೆ ಹೈಟೆಕ್ ಅಂಬ್ಯುಲೆನ್ಸ್‌ ಸವದಿ ಹಸ್ತಾಂತರ
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೈಟೆಕ್ ಅಂಬ್ಯುಲೆನ್ಸನ್ನು ಅಥಣಿ ಸರಕಾರಿ ಆಸ್ಪತ್ರೆಗೆ ಹಸ್ತಾಂತರಿಸಿದರು.

ಅಥಣಿ 13: ಅಥಣಿ ಹಾಗೂ ನದಿ ಇಂಗಳಗಾಂವ ಸರಕಾರಿ ಆಸ್ಪತ್ರೆಗಳಿಗೆ ಸುಸಜ್ಜಿತವಾಗಿ ಎರಡು ಅಂಬ್ಯುಲನ್ಸಗಳನ್ನು ವಿಧಾನ ಪರಿಷತ್ ಪ್ರದೇಶಾಭಿವೃದ್ಧಿ ವಿಶೇಷ ಅನುದಾನದಲ್ಲಿ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಸ್ತಾಂತರಿಸಿದರು.  

ಅಂಬ್ಯುಲನ್ಸಗಳನ್ನು ಹಸ್ತಾಂತರಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ತಾಲೂಕಾ ಆಸ್ಪತ್ರೆಗೆ ನೀಡಿದ ಅಂಬ್ಯುಲೆನ್ಸನಲ್ಲಿ ಎಲ್ಲ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಅಥಣಿಯಿಂದ ಮಹಾರಾಷ್ಟ್ರದ ಮೀರಜ, ಜಿಲ್ಲಾ ಕೇಂದ್ರ ಬೆಳಗಾವಿ ಅಥವಾ ವಿಜಯಪುರದ ಆಸ್ಪತ್ರೆಗಳಿಗೆ ರೋಗಿಗಳನ್ನು ತುರ್ತು ಚಿಕಿತ್ಸೆಗಾಗಿ ಸಾಗಿಸಲು ಅವಶ್ಯವಾಗಿ ಬೇಕಾಗುವ ಎಲ್ಲ ವೈದ್ಯಕೀಯ ಮತ್ತು ಐಸಿಯು ಸೌಲಭ್ಯಗಳು ಈ ಅಂಬ್ಯುಲೆನ್ಸ ಒಳಗೊಂಡಿದ್ದು, ಇದರಿಂದ ಅಥಣಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಅನಕೂಲವಾಗಲಿದೆ ಎಂದರು.  

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳು ಡೈಲೆಸಿಸ್‌ಗಾಗಿ ಮೀರಜ ಮತ್ತು ಬೆಳಗಾವಿಯ ಆಸ್ಪತ್ರೆಗಳನ್ನು ಅವಲಂಬಿಸಬೇಕಿತ್ತು ಇದರಿಂದ ಡೈಲೆಸಿಸ್ ಗಾಗಿ ಹೆಚ್ಚಿನ ವೆಚ್ಚವನ್ನು ರೋಗಿಯ ಕುಟುಂಬಸ್ಥರು ಹೊರಬೇಕಾಗುತ್ತಿತ್ತು. ಕಿಡ್ನಿ ವೈಫಲ್ಯ ಹೊಂದಿರುವ ರೋಗಿಗಳ ಅನಕೂಲಕ್ಕಾಗಿಯೇ ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ಎರಡು ಡೈಲೆಸಿಸ್‌ಗೆ ಬೇಕಾದ ಯಂತ್ರಗಳನ್ನು ಖರೀದಿಸಲಾಗಿದ್ದು, ಇಷ್ಟರಲ್ಲಿಯೇ ಅಥಣಿ ಸರಕಾರಿ ಆಸ್ಪತ್ರೆಯಲ್ಲಿಯೇ ರೋಗಿಗಳು ಡೈಲೆಸಿಸ್ ಮಾಡಿಸಿಕೊಳ್ಳಬಹುದು ಎಂದರು.  

ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ತಾಲೂಕಾ ವೈದ್ಯಾಧಿಕಾರಿ ಡಾ.ಕಾಗೆ, ಧುರೀಣರಾದ ಅರುಣ ಭಾಸಿಂಗಿ, ಶ್ರೀಶೈಲ ಗಸ್ತಿ, ಅಪ್ಪು ನ್ಯಾಮಗೌಡ, ಗುರುಬಸವ ತೇವರಮನಿ, ಪ್ರದೀಪ ನಂದಗಾಂವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  

ಸುದ್ದಿ ಓದಿ