ರಾಣೆಬೆನ್ನೂರ

ಹೆಸ್ಕಾಂನವರು ವಿದ್ಯುತ್‌ನಿಂದ ಬೆಳಕನ್ನು ಚೆಲ್ಲಬೇಕೆ ಹೊರತು ಬೆಂಕಿಯಿಂದಲ್ಲ: ರವೀಂದ್ರಗೌಡ ಎಫ್‌. ಪಾಟೀಲ

ಹೆಸ್ಕಾಂನವರು ವಿದ್ಯುತ್‌ನಿಂದ ಬೆಳಕನ್ನು ಚೆಲ್ಲಬೇಕೆ ಹೊರತು ಬೆಂಕಿಯಿಂದಲ್ಲ:  ರವೀಂದ್ರಗೌಡ ಎಫ್‌. ಪಾಟೀಲ

ರಾಣೇಬೆನ್ನುರು;-22 ರೈತರ ಫಲವತ್ತಾದ ಕೃಷಿ ಜಮೀನಿನಲ್ಲಿ ಎಲ್ಲೆಂದರಲ್ಲಿ ಹೇಗೆ ಬೇಕೊ ಹಾಗೆ ಮನಸಾ ಇಚ್ಛೆ ವಿದ್ಯುತ್ ಕಂಬಗಳನ್ನು ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ನಿಲ್ಲಿಸಿದ್ದರಿಂದ ಕೃಷಿ ಚಟುವಟಿಕೆಗೆ ಸಾಕಷ್ಟು ತೊಂದರೆ ಜೊತೆಗೆ ವಿದ್ಯುತ್ ಶಾರ್ಟ ಸರ್ಕ್ಯೂಟ್‌ನಿಂದ ಕಬ್ಬು ಮತ್ತು ಇತರೆ ಎತ್ತರದ ಅಪಾರ ವೆಚ್ಚ ಮಾಡಿ ಬೆಳೆದ ಬೆಳೆಗಳು ಬೆಂಕಿಗೆ ಆಹುತಿಯಾಗಿ ರೈತರಿಗೆ ಲಕ್ಷ ಲಕ್ಷ ನಷ್ಟವಾಗುತ್ತಿದ್ದು ಗುತ್ತಿದಾರರು ಮತ್ತು ಅಧಿಕಾರಿಗಳು ಮಾಡಿದ ತಪ್ಪಿನಿಂದ ಅಮಾಯಕ ರೈತರು ತೊಂದರೆಗೆ ಸಿಲುಕುತ್ತಿದ್ದು ಈ ಕೂಡಲೆ ಕಂಬಗಳನ್ನು ರಸ್ತೆ ಬದಿಗೆ ಸ್ಥಳಾಂತರಿಸಬೇಕೆಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್‌. ಪಾಟೀಲ ಹೇಳಿದರು.  

ಅವರು  ಇಟಗಿ ಗ್ರಾಮದ ಹೆಸ್ಕಾಂ ಕಛೇರಿಯಲ್ಲಿ ಹೆಸ್ಕಾಂ ಇಲಾಖೆಯವರು ಕಂಬಗಳನ್ನು ಸ್ಥಳಾಂತರಿಸಬೇಕೆಂದು ಮತ್ತು ಇಟಗಿ-ಹಲಗೇರಿ (ಹರಿಹರ-ಸಮ್ಮಸಗಿ) ಹದಗೆಟ್ಟ ರಸ್ತೆ ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿ 21 ನೇ ತಾರೀಖು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮುನ್ನಾದಿನ ಅಧಿಕಾರಿಗಳು ಕರೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಜಗತ್ತಿಗೆ ಬೆಳಕನ್ನು ಕೊಡುವ ಹೆಸ್ಕಾಂ ಇಲಾಖೆಯರು, ರೈತರು ಮತ್ತು ಪೊಲೀಸ್ ಇಲಾಖೆಯವರು ದೇಶ ಕಾಯುವ ಯೋಧರಿದ್ದಂತೆ ಹೆಸ್ಕಾಂನವರು ಇಲ್ಲದ ಒಂದು ಕ್ಷಣವನ್ನು ಕೂಡ ಜಗತ್ತು ಇರಲಾರದು ವಿದ್ಯುತ್ ಇಲ್ಲದ ಪ್ರಪಂಚವನ್ನು ಕಲ್ಪನೆ ಮಾಡಿಕೊಳ್ಳಲಿಕ್ಕೂ ಸಾಧ್ಯವಿಲ್ಲವೆಂದು ಅವರು ಹೆಸ್ಕಾಂನವರು ವಿದ್ಯುತ್‌ನಿಂದ ಬೆಳಕನ್ನು ನೀಡಬೇಕೆ ಹೊರತು, ಬೆಂಕಿಯಿಂದಲ್ಲಾ ಎಂದರು.  

ಸಹಾಯಕ ಕಾರ್ಯನಿರ್ವಾಹಕ ಇಂಜೀನೀಯರ್ ಲಕ್ಷ್ಮಣ ಎಂ. ರವರು ಮಾತನಾಡಿ ಇಂದಿನಿಂದಲೇ ರೈತರಿಗೆ ತೊಂದರೆಯಾಗುವ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಲಾಗುವುದು ದಯವಿಟ್ಟು ಪ್ರತಿಭಟನೆ ಹಿಂದಕ್ಕೆ ಪಡೆಯಬೇಕೆಂದರು. ಹೆಸ್ಕಾಂ ತಾಂತ್ರಿಕ ವರ್ಗದ ಹಿರಿಯ ಅಧಿಕಾರಿಗಳಾದ ವಿ.ಎಸ್‌. ಹಿರೇಮಠ ರವರು ಪ್ರತಿಭಟನಾಕಾರರ ಮನವೊಲಿಸಿದರು. ಸೆಕ್ಷನ್ ಆಫೀಸರ ಹರೀಶ ಕೆ. ರವರು ಕಂಬ ಸ್ಥಳಾಂತರಕ್ಕೆ ಸನ್ನದ್ಧರಾಗಲು ತಮ್ಮ ಎಲ್ಲಾ ಸಿಬ್ಬಂದಿಗಳಿಗೆ ಸೂಚಿಸಿದರು.  

ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ರಮೇಶ ನಾಯಕ ಮತ್ತು ಸುಹಾಸ ಮಾತನಾಡಿ ತಿಂಗಳೊಳಗೆ ಇಟಗಿ-ಹಲಗೇರಿ ರಸ್ತೆ ಕಾಮಗಾರಿ ಪ್ರಾರಂಭಿಸುತ್ತೇವೆ. ಈಗಾಗಲೇ ಹಣ ಮಂಜೂರಾಗಿ ಟೆಂಡರ್ ಕರೆಯಲಾಗಿದೆ. ದಯವಿಟ್ಟು ಪ್ರತಿಭಟನೆ ಹಿಂದಕ್ಕೆ ಪಡೆಯಿರಿ. ತಿಂಗಳೊಳಗಾಗಿ ಕಾರ್ಯ ಪ್ರಾರಂಭವಾಗದಿದ್ದರೆ ಪ್ರತಿಭಟನೆ ಮಾಡುವಿರಂತೆ ಎಂದು ಮನವಿ ಮಾಡಿದರು. ಅಧಿಕಾರಿಗಳಾದ ರಾಮಚಂದ್ರ ಬಳಿಗಾರ, ಮಂಜುನಾಥ, ಕೆ.ಎಸ್‌. ಕರಿಯಣ್ಣನವರ, ಸಂಜಯ ಕುಂಟೇರ, ಸಂತೋಷ ಹಾಜರಿದ್ದರು. ಮುಖಂಡರಾದ ಮಂಜುನಾಥ ದ ಶಿವಲಿಂಗಪ್ಪನವರ, ಹನುಮಪ್ಪ ಅಂಗಡಿ, ನಿಂಗರಡ್ಡಿ ಬಳ್ಳಾರಿ, ಹರಿಹರಗೌಡ ಪಾಟೀಲ, ಹಾಲೇಶ ಕೆಂಚಣ್ಣನವರ ಮುಂತಾದ ನೂರಾರು ಮುಖಂಡರು ಭಾಗವಹಿಸಿದ್ದರು. 


ಸುದ್ದಿ ಓದಿ