ಇನ್ನೂ ಮುಂದೆ ಜನನ, ಮರಣ ಪ್ರಮಾಣ ಪತ್ರ ಗ್ರಾಪಂನಲ್ಲೇ ಲಭ್ಯ
ಇಂಡಿ 01: ಸಾರ್ವಜನಿಕರಿಗೆ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಹಳ್ಳಿಯ ಜನರು ನಗರ ಪ್ರದೇಶದ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ನೂತನ ಕ್ರಮವನ್ನು ಜಾರಿಗೆ ತರಲಾಗಿದ್ದು.ಇನ್ನು ಮುಂದೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯಬಹುದಾಗಿದೆ. ಅದರಂತೆ ಇಂಡಿ ತಾಲೂಕಿನ ತಡವಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆ ್ರ್ರಥಮವಾಗಿ ಇಂದು ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಂದಾ ವಾಲಿಕಾರ ಅವರು ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಅರ್ಹ ಫಲಾನುಭವಿಗಳಿಗೆ ಇಂದು ವಿತರಣೆ ಮಾಡಿದರು.
ಇದೆ ಜುಲೈ 1 ರಂದು ಜನನ ಮತ್ತು ಮರಣದ ನೋಂದಣಿಯನ್ನು ಇನ್ನೂ ಮುಂದೆ ಗ್ರಾಮ ಪಂಚಾಯತಿಯಲ್ಲಿ ಪಡೆಯಬಹುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಹಾಗೂ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು 30 ದಿನಗಳ ಒಳಗಾಗಿ ನೋಂದಣಿ ಮಾಡಬಹುದಾಗಿದೆ.
ತಡವಲಗಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್ ಎನ್ ನಾಮದರ್, ಚಿದಾನಂದ ಗಣವಲಗಾ, ವಿಜಯಕುಮಾರ್ ಲೋಕೂರ, ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.