ನವಲಗುಂದ

ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನವಲಗುಂದ 11: ತಾಳ್ಮೆಯ ತಪಸ್ವಿನಿ ಸಾದ್ವಿ ತತ್ವಜ್ಞಾನಿಯಾದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ 595ನೇ ಜಯಂತಿಯನ್ನು ಎಲ್ಲ ಸಮಾಜದವರು ಸೇರಿ ನವಲಗುಂದದಲ್ಲಿ ಆಚರಣೆ ಮಾಡಿದ್ದು ವಿಶೇಷ ಎಂದು ಗವಿಮಠದ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.  

ಇಂದು ನವಲಗುಂದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು ನಮ್ಮ ಬಾಳಿಗೆ ತಾಯಿಯೇ ಆದರ್ಶ ಹಾಗೂ ದಾರೀದೀಪ, ಆಕೆಯನ್ನು ಸ್ಮರಿಸುವುದೇ ಒಂದು ಧನ್ಯತೆ. ಬಾಳುತ್ತ ಬೆಳಗಿದ, ಬೆಳೆಯುತ್ತ ಬೆಳಕಾದ ಅಖಂಡ ಮನುಕುಲಕ್ಕೆ ಅದನ್ನು ದಾರೆ ಎರೆದರು. ಬಾಳನ್ನು ಹಸನು ಮಾಡಿಕೊಂಡು ಜೊತೆಗೆ ಹುಟ್ಟನ್ನು ಸಾರ್ಥಕ ಪಡೆಸಿಕೊಂಡು ಮಾತೃ ಹೃದಯೀ ಮಲ್ಲಮ್ಮ ಕಂಗೆಟ್ಟ ಬದುಕಿಗೆ ದಾರಿ ದೀಪವಾಗಿ ಸಹನೆ ಮಂತ್ರ ಸಾರಿದ ತತ್ವಜ್ಞಾನಿ ಎಂದು ನವಲಗುಂದ ಅಜಾತ ನಾಗಲಿಂಗಸ್ವಾಮಿ ಮಠದ ಪೂಜ್ಯ  ವಿರೇಂದ್ರ ಮಹಾಸ್ವಾಮಿಗಳು ಬಣ್ಣಿಸಿದರು. 

ನವಲಗುಂದದಲ್ಲಿ ಶಿವಶರಣೆ ಮಲ್ಲಮ್ಮನ ಕುರಿತು ಹೇಮರಡ್ಡಿ ಮಲ್ಲಮ್ಮ ಆಧ್ಯಾತ್ಮ, ಸಾಧಕರ ಅಭೂತಪೂರ್ವ ನೆಲೆಯಾಗಿ ಸುಂದರ ಪರ್ವತ ಶಿಖರಗಳ ತಾಣವಾಗಿರುವ ಶ್ರೀಶೈಲದ ಸುತ್ತಲಿನ ಪ್ರದೇಶಗಳಲ್ಲಿ ಮಹಾಯೋಗಿ ವೇಮನರನ್ನು ತಾಳ್ಮೆಯ ತಪಸ್ವಿ ಮಹಾಸಾಧ್ವಿ ಶಿವಶರಣೆ ಮಲ್ಲಮ್ಮ. ಸೊಸೆ ಎಂದರೆ ಹೇಮರಡ್ಡಿ ಮಲ್ಲಮ್ಮನಂತೆ ಎನ್ನುವ ಭಾವ ಸ್ತ್ರೀ ಕುಲಕ್ಕೆ ಹೆಮ್ಮೆ ತರುವ ವಿಷಯವಾಗಿದ್ದು ಎಲ್ಲರು ಆರಾಧನೆಗೆ ಒಳಪಟ್ಟಿದ್ದೇವೆ ಎಂದು ಶಿಕ್ಷಣ ಇಲಾಖೆಯ ಡೈಟ್ ಉಪನ್ಯಾಸಕಿ ಡಾ. ರೇಣುಕಾ ಅಮಲಝರಿ ಸಾದ್ವಿಯ ಕುರಿತು ವಿವರಿಸಿದರು.  

ಮಾಜಿ ಸಚಿವ ಕೆ.ಎನ್‌. ಗಡ್ಡಿ ಮಾತನಾಡಿ ಮಲ್ಲಮ್ಮನ ಆಶೀರ್ವಾದದಿಂದಲೇ ಸಮಾಜಕ್ಕೆ ಆರ್ಥಿಕ ಹಾಗೂ ರಾಜಕೀಯದಲ್ಲಿ ಸ್ಥಾನಮಾನ ಸಿಗಲು ಕಾರಣ ಎಂದರು. 

ಶರಣು ಹಿರೇಮಠ ಯಮನೂರ ಇವರಿಂದ ವಿಶೇಷ ನಗೆಹಬ್ಬ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಿತು. 

ನವಲಗುಂದ ಪುರಸಭೆಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಅಪ್ಪಣ್ಣ ಹಳ್ಳದ, ಉಪಾಧ್ಯಕ್ಷ ಪದ್ಮಾವತಿ ಪೂಜಾರ ಹಾಗೂ ನವಲಗುಂದ ನೌಕರರ ಸಂಘದ ಅಧ್ಯಕ್ಷರಾಗಿ, ಕಾರ್ಯನಿರ್ವಾಹಕ ಅಭಿಯಂತರರಾಗಿ ನಿವೃತ್ತರಾದ ಬಿ.ಹೆಚ್‌. ಪಾಟೀಲ ಅವರಿಗೆ ಸನ್ಮಾನಿಸಲಾಯಿತು. 

ಅಧ್ಯಕ್ಷತೆಯನ್ನು ನವಲಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿ ಎನ್‌.ಹೆಚ್‌. ಕೋನರಡ್ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಎನ್‌. ಗಡ್ಡಿ, ಬಾಪುಗೌಡ ಎಸ್‌. ಪಾಟೀಲ, ಕೆಪಿಸಿಸಿ ಸದಸ್ಯ ವಿಜಯ ಕುಲಕಣೀರ್, ಅಬಕಾರಿ ಅಧಿಕಾರಿ ಶ್ರೀಮತಿ ಗೀತಾ ತಗ್ಯಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜುಗೌಡ ಪಾಟೀಲ, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಬಿ. ಗಂಗಾಧರಮಠ,  ಶಾಂತವ್ವ ಗುಜ್ಜಳ, ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಜನತಾಬಜಾರ ಅಧ್ಯಕ್ಷ ಪಿ.ವಿ. ಚವ್ವಣ್ಣವರ, ಸಮೀತಿ ಅಧ್ಯಕ್ಷ ಜಿ.ವಿ. ನಡುವಿನಮನಿ, ಹಿರಿಯರಾದ ಕೃಷ್ಣಪ್ಪ ಕುರಹಟ್ಟಿ, ಫಕ್ಕೀರಡ್ಡಿ ಸಾಸ್ವಿಹಳ್ಳಿ, ಮಂಜು ಜಾಧವ, ಆರ್‌.ಹೆಚ್‌. ಕೋನರಡ್ಡಿ, ಸದುಗೌಡ ಪಾಟೀಲ, ಮಲ್ಲಿಕಾರ್ಜುನ ಕಾಲವಾಡ, ಕುಮಾರ ಮಂಕಣಿ, ಸೋಮನಗೌಡ ಹಿರೇಗೌಡ್ರ, ಎನ್‌.ವಿ. ಕಿರೆಸೂರ, ಎಸ್‌.ಎಸ್‌. ಕುಂಬಾರ, ಎಸ್‌.ಎನ್‌. ಚಾಕಲಬ್ಬಿ, ಜಿ.ಟಿ. ದೊಡ್ಡಮನಿ, ಪ್ರಕಾಶ ಕೊಣ್ಣೂರ, ಗೋಪಣ್ಣ ನಲವಡಿ, ತುಳಸಪ್ಪ ಯರಗುಪ್ಪಿ, ಕೆ.ವಿ. ಹುಲಕೋಟಿ, ಸಂಗಮೇಶ ಕಗದಾಳ, ವಿ.ಆರ್‌. ಕೋನರಡ್ಡಿ, ರಮೇಶ ನವಲಗುಂದ, ಬಸವರಾಜ ಶಲವಡಿ, ನಾರಾಯಣ ಮಾಡೊಳ್ಳಿ, ವೀರನಾರಾಯಣ ಬೆಂತೂರ, ವಿಠ್ಠಲ ಯಮನೂರ, ಹೆಚ್‌.ಎಲ್‌. ಲಿಂಗರಡ್ಡಿ, ಹೇಮಣ್ಣ ಚವರಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ