ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ
ಕಂಪ್ಲಿ 11 : ಪತ್ರಿಯೊಬ್ಬರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ತತ್ವ ಆದರ್ಶ ತತ್ವಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಹೆರೆಹೊಸಳ್ಳಿಯ ರೆಡ್ಡಿ ಗುರುಪೀಠಧ್ಯಕ್ಷರಾದ ಶ್ರೀವೇಮನಾನಂದ ಪುರಿ ಮಹಾಸ್ವಾಮಿಗಳು ಹೇಳಿದರು.ಇಲ್ಲಿನ ರಾಘವೇಂದ್ರಸ್ವಾಮಿ ಮಠದಲ್ಲಿ ಹೇಮ ವೇಮ ಕಂಪ್ಲಿ ಫಿರ್ಕಾ ರೆಡ್ಡಿ ಜನಸಂಘದಿಂದ ಭಾನುವಾರ ಹಮ್ಮಿಕೊಂಡ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವದ ಸಾನ್ನಿಧ್ಯವಹಿಸಿ ಮಾತನಾಡಿ, ಕುಟುಂಬದಲ್ಲಿನ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಹೇಮರೆಡ್ಡಿ ಮಲ್ಲನ ಪಾತ್ರ ಮಹತ್ವದ್ದಾಗಿದೆ. ಮಲ್ಲಮ್ಮನ ತಾಳ್ಮೆ, ಶಾಂತಿ ಪ್ರತಿಯೊಂದು ಕುಟುಂಬಕ್ಕೆ ಆದರ್ಶವಾಗಿದೆ. ರೆಡ್ಡಿ ಉಪ ಪಂಗಡಗಳು ಒಂದಾಗಿ ಹೇಮರೆಡ್ಡಿ ಮಲ್ಲಮ್ಮನ ಜಯಂತ್ಯುತ್ಸವ ಆಚರಿಸಿದ್ದು ಸಂಘಟನಾತ್ಮಕ ದೃಷ್ಠಿಯಿಂದ ಮಹತ್ವದ ಹೆಜ್ಜೆಯಾಗಿದೆ. ಒಕ್ಕಲಿಗ ರೆಡ್ಡಿ, ಲಿಂಗಾಯತ ರೆಡ್ಡಿ, ನಾಮಧಾರ ರೆಡ್ಡಿ ಸಮುದಾಯದ ಮೂವರು ಮಂತ್ರಿಗಳಿದ್ದು ರೆಡ್ಡಿ ಸಮುದಾಯಕ್ಕೆ ಉತ್ತಮವಾದ ಕೊಡುಗೆಯಾಗಿದೆ ಎಂದರು. ಬಳ್ಳಾರಿ ಎಂ.ಎಲ್.ಸಿ. ವೈ.ಎಂ.ಸತೀಶ್ ಮಾತನಾಡಿ, ನಮ್ಮಲ್ಲಿರುವ ಭಿನ್ನಾಭಿಪ್ರಾಯ ತೊರೆದು ಸಂಘಟಿತರಾಗಬೇಕಿದೆ. ನಿರಂತರ ಸಂಘಟನೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯರೆಡ್ಡಿ ಉಪ ಪಂಗಡಗಳಲ್ಲಿ ಭೇದ ಭಾವ ಸಲ್ಲದು ಎಂದರು. ರೆಡ್ಡಿ ಸಂಘದ ಜಿಲ್ಲಾಧ್ಯಕ್ಷ ನಾರಾ ಪ್ರತಾಪರೆಡ್ಡಿ ಅಧ್ಯಕ್ಷತೆವಹಿಸಿದ್ದರು. ಗಂಗಾವತಿ ತಾಲೂಕು ರೆಡ್ಡಿ ಸಂಘದ ಅಧ್ಯಕ್ಷ ಆರ್.ಪಿಗಂಗಾರೆಡ್ಡಿ ಸೇರಿ ಹೇಮ ವೇಮ ಕಂಪ್ಲಿ ಫಿರ್ಕಾ ರೆಡ್ಡಿ ಜನ ಸಂಘದ ಪದಾಧಿಕಾರಿಗಳು, ತಾಲೂಕಿನ ರೆಡ್ಡಿ ಸಮುದಾಯದವರು ಪಾಲ್ಗೊಂಡಿದ್ದರು.