ರಾಣೆಬೆನ್ನೂರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಹಿಳೆಯರು ಆರ್ಥಿಕ ಸ್ವಾವಲಂಬಿಗಲು ನೆರವು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಹಿಳೆಯರು ಆರ್ಥಿಕ ಸ್ವಾವಲಂಬಿಗಲು ನೆರವು

ರಾಣಿಬೆನ್ನೂರ 6:  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ಹಲವಾರು ಯೋಜನೆಗಳನ್ನು ರೂಪಿಸಿದೆ ಅದರಲ್ಲೂ ಸಂಘದ ಪದಾಧಿಕಾರಿಗಳಿಗೆ ಕೃಷಿ ಅಧ್ಯಯನ ಪ್ರವಾಸವನ್ನೂ ಸಹ ಉಚಿತವಾಗಿ ಕೈಗೊಂಡಿದೆ ಇದರ ಸದುಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಿ ಮುನ್ನಡೆಯಬೇಕು ಅಂದಾಗ ಮಾತ್ರ ಇಂತಹ ಯೋಜನೆಗಳಿಗೆ ಅರ್ಥ ಬರುತ್ತದೆ ಎಂದು ಕೃಷಿ ಮೇಲ್ವಿಚಾರಕ ಎಚ್  ದೇವರಾಜ ಹೇಳಿದರು. 

ಶನಿವಾರ ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಉಚಿತವಾಗಿ ಕೃಷಿ ಅಧ್ಯಯನ ಪ್ರವಾಸಕ್ಕೆ ತೆರಳುವ ಬಸ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಹಲವಾರು ಮಹಿಳೆಯರು  ಕೃಷಿಯಲ್ಲಿ ಉತ್ತಮ ಸಾಧನೆಗೈದಿದ್ದಾರೆ ಅಂತವರ ಆದರ್ಶಗಳನ್ನು ತಾವು ಜೀವನದಲ್ಲಿ ರೂಢಿಸಿಕೊಂಡು ತಾವೂ ಉತ್ತಮ ಸಾಧನೆಗೈದಾಗ ತಾವುಗಳು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯ ಎಂದರು. 

ವಲಯ ಮೇಲ್ವಿಚಾರಕ ನಾಗರಾಜ ಬಳ್ಳಾರಿ, ಸೇವಾಪ್ರತಿನಿಧಿಗಳಾದ ಗೀತಾ ದುರ್ಗದ, ಸರಸ್ವತಿ ದೀಪಾವಳಿ ಸೇರಿದಂತೆ ಚಂದಾಪುರ ಹಾಗೂ ಚಿಕ್ಕಕುರವತ್ತಿ ಕಾರ್ಯಕ್ಷೇತ್ರದ ಸಂಘದ ಮಹಿಳೆಯರು ಇದ್ದರು. 

ಸುದ್ದಿ ಓದಿ