ಕಾಗವಾಡ

ಹೆಲ್ಮೆಟ್ ನಿಮ್ಮ ಪ್ರಾಣ ರಕ್ಷಕ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ;

ಹೆಲ್ಮೆಟ್ ನಿಮ್ಮ ಪ್ರಾಣ ರಕ್ಷಕ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ;

ಜಾಗೃತಿ ಮೂಡಿಸಿದ ಕಾಗವಾಡ ಪಿಎಸ್‌ಐ ಜಿ.ಜಿ. ಬಿರಾದರ..! 

ಕಾಗವಾಡ 12: ತಾಲೂಕಿನಲ್ಲಿ ಕಳೆದ ಹಲವು ದಿನಗಳಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ, ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದ್ವಿಚಕ್ರ ವಾಹನ ಚಲಾವಣೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ತಮ್ಮ ಅಮೂಲ್ಯ ಜೀವ ಉಳಿಸಿಕೋಳ್ಳುವಂತೆ ಕಾಗವಾಡ ಠಾಣೆ ಪಿಎಸ್‌ಐ ಗಂಗಾ ಬಿರಾದರ ಹೇಳಿದರು. 

ಅವರು ಗುರುವಾರ ದಿ. 12 ರಂದು ಪಟ್ಟಣದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುತ್ತಾ ಮಾತನಾಡುತ್ತಿದ್ದರು. ಕೇವಲ ಪೋಲಿಸರು ದಂಡ ವಿಧಿಸುತ್ತಾರೆಂಬ ಮಾತ್ರಕ್ಕೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ತಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಲು, ಹೆಲ್ಮೆಟ್ ಧರಿಸಬೇಕು. ತಾವು ಮಾಡುವ ಒಂದು ತಪ್ಪಿನಿಂದ ನಿಮ್ಮ ಕುಟುಂಬದ ಜೀವನ ಬೀದಿ ಪಾಲಾಗುತ್ತದೆಂದು ನೆನಪಿನಲ್ಲಿ ಇಡಬೇಕು. ಇತ್ತೀಚಿನ ದಿನಗಳಲ್ಲಿ ಜನತೆ ಚಾಲನಾ ನಿಯಮಗಳನ್ನು ಪಾಲಿಸದೇ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡುತ್ತಿದ್ದು, ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿವೆ. ಜೊತೆಗೆ ಇಂತಹ  ಸಂದರ್ಭಗಳಲ್ಲಿ ತಲೆಗೆ ಪೆಟ್ಟಾಗಿ ಮೃತಪಟ್ಟಿರಿವವರ ಸಂಖ್ಯೆ ಜಾಸ್ತಿಯಾಗಿರುತ್ತದೆ. ಆದ್ದರಿಂದ ವಾಹನ ಚಾಲನೆ ಮಾಡುವಾಗ ಟ್ರಾಫಿಕ್ ನಿಯಮಗಳನ್ನು ಪಾಲಿಸವುದರೊಂದಿಗೆ ವಾಹನ ಚಾಲಕರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ವಾಹನ ಚಲಾಯಿಸಬೇಕು ಇಲ್ಲವಾದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ತಿಳಿಸಿದರು.  

ಈ ವೇಳೆ ಕಾಗವಾಡ ಪೊಲೀಸ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ